ಅಥಣಿ

ಸರಕಾರಿ ನೌಕರರ ಸಂಘಕ್ಕೆ ಅರಟಾಳ, ಸತಿಗೌಡರ, ಮಜ್ಜಗಿ ಆಯ್ಕೆ

ಸರಕಾರಿ ನೌಕರರ ಸಂಘಕ್ಕೆ ಅರಟಾಳ, ಸತಿಗೌಡರ, ಮಜ್ಜಗಿ ಆಯ್ಕೆ

ಸರಕಾರಿ ನೌಕರರ ಸಂಘಕ್ಕೆ ಅರಟಾಳ, ಸತಿಗೌಡರ, ಮಜ್ಜಗಿ ಆಯ್ಕೆ 

ಅಥಣಿ 29: ಸರಕಾರಿ ನೌಕರರ ಸಂಘಕ್ಕೆ  ನಡೆದ ಚುನಾವಣೆಯಲ್ಲಿ ತಾಲೂಕಾ ಹಿಂದುಳಿದ ವರ್ಗಗಳ ಇಲಾಖೆಯಿಂದ ಸ್ಪರ್ಧೆ ಮಾಡಿದ್ದ ಅಶೋಕ ಸತಿಗೌಡರ, ಸಮಾಜ ಕಲ್ಯಾಣ ಇಲಾಖೆಯಿಂದ ಸ್ಪರ್ಧೆ ಮಾಡಿದ್ದ ಓಗೆಪ್ಪ ಅರಟಾಳ ಮತ್ತು ಪದವಿ, ಪದವಿ ಪೂರ್ವ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಸ್ಪರ್ಧೆ ಮಾಡಿದ್ದ ಸುರೇಶ ಮಜ್ಜಗಿ ಆಯ್ಕೆಯಾದರು.  

      ಸಮಾಜ ಕಲ್ಯಾಣ ಇಲಾಖೆಯ ಓಗೆಪ್ಪ ಅರಟಾಳ ಮಾತನಾಡಿ, ಸರಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ನಮ್ಮ ಇಲಾಖೆಯಿಂದ ಸ್ಪರ್ಧೆ ಮಾಡಿದ್ದು, ನನಗೆ ನಮ್ಮ ಇಲಾಖೆಯ ಸಹೋದರ ಸಿಬ್ಬಂದಿ ವರ್ಗ ನನ್ನ ಪರವಾಗಿ ಮತ ಚಲಾವಣೆ ಮಾಡಿದ್ದರಿಂದ ನನ್ನ ಗೆಲುವು ಸಾಧ್ಯವಾಯಿತು ಎಂದರು.  

    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಶೋಕ ಸತಿಗೌಡರ ಮಾತನಾಡಿ, ನನ್ನ ಇಲಾಖೆಯ ಎಲ್ಲ ನೌಕರರ ಯಾವುದೇ ಸಮಸ್ಯೆ ಇದ್ದರೂ ನಾನೇ ಮುಂದಾಳತ್ವ ವಹಿಸಿ ಬಗೆ ಹರಿಸುವೆ ಎಂದ ಅವರು ನನಗೆ ಸಹಕಾರ ನೀಡಿದ ಎಲ್ಲ ಸಹೋದ್ಯೋಗಿಗಳನ್ನು ಅಭಿನಂದಿಸುವೆ ಎಂದರು.     ಪದವಿ, ಪದವಿ ಪೂರ್ವ ಮತ್ತು ತಾಂತ್ರಿಕ ವಿಭಾಗದ ಸುರೇಶ ಮಜ್ಜಗಿ ಮಾತನಾಡಿ, ನನ್ನ ಇಲಾಖೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆಗಳಿಗನಗುಣವಾಗಿ ಸಿಬ್ಬಂದಿ ಇಲ್ಲ ಹೀಗಾಗಿ ಸಿಬ್ಬಂದಿ ಹೆಚ್ಚಿಸುವ ನಿಟ್ಟಿನಲ್ಲಿ ನಾನು ಪ್ರಯತ್ನಿಸುವೆ ಎಂದ ಅವರು ಈ ನನ್ನ ಗೆಲುವು ನನಗೆ ಸಹಕಾರ ನೀಡಿದ ಎಲ್ಲ ಮತದಾರರದ್ದಾಗಿದೆ ಎಂದರು.ನೂರಾರು ಸಂಖ್ಯೆಯಲ್ಲಿ ಸರಕಾರಿ ನೌಕರರು ಉಪಸ್ಥಿತರಿದ್ದರು. 


ಸುದ್ದಿ ಓದಿ