ರಸ್ತೆ ಸುರಕ್ಷತಾ ನಿಯಮ ಪಾಲನೆಯಿಂದ ಅಪಘಾತ ತಡೆ ಸಾಧ್ಯ: ಸಿಪಿಐ ಸಾಲಿಮಠ
ಲೋಕದರ್ಶನ ವರದಿ:
ಬೈಲಹೊಂಗಲ 20: ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದರೆ, ಅಪಘಾತ ಹಾಗೂ ಅದರಿಂದಾಗುವ ಹಾನಿಯನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಸಿಪಿಐ ಪಂಚಾಕ್ಷರಿ ಸಾಲಿಮಠ ಹೇಳಿದರು.
ಅವರು ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಪಾಲಿಟೆಕ್ನಿಕ (ಡಿಪ್ಲೋಮಾ) ಮತ್ತು ಐ.ಟಿ.ಐ ಕಾಲೇಜು ಬೈಲಹೊಂಗಲದಲ್ಲಿ ಸ್ಪರ್ಶ 2023 ವಾರ್ಷಿಕ ಸ್ನೇಹ ಸಮ್ಮೆಳನ, ಅಂತಿಮ ವರ್ಷದ ಡಿಪ್ಲೋಮಾ ಮತ್ತು ಐ.ಟಿ.ಐ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಹಾಗೂ ನೂತನ ಉಪಹಾರ ಗೃಹದ ಉದ್ಘಾಟನಾ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಖಾಯಿಲೆಗೆ ತುತ್ತಾಗಿ ಜೀವ ಕಳೆದುಕೊಂಡವರಿಗಿಂತ ಜಾಸ್ತಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆಯೇ ಜಾಸ್ತಿ, ಕಾರಣ ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ಯಾವುದೇ ರೀತಿಯ ದುಶ್ಚಟಗಳಿಗೆ ಅಂಟಿಕೊಳ್ಳದೇ, ಸರಿಯಾದ ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಿ, ಒಳ್ಳೆಯ ಗುಣಗಳನ್ನು ರೂಪಿಸಿಕೊಂಡು ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಸಂಸ್ಥೆಯ ಹಾಗೂ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಕೆಎಲ್ಇ ಸಂಸ್ಥೆ ನಿರ್ದೇಶಕ ಎಸ್. ಸಿ. ಮೆಟಗುಡ ಕಾರ್ಯಕ್ರಮ ಉದ್ಘಾಟಿಸಿದರು. ಕೆಎಲ್ಇ ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್.ತಟವಟಿ ಅಧ್ಯಕ್ಷತೆ ವಹಿಸಿದ್ದರು. ಮುರಗೋಡ ದುರದುಂಡೇಶ್ವರಮಠ ನೀಲಕಂಠ ಸ್ವಾಮಿಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಾಚಾರ್ಯ ಪ್ರೋ. ಶ್ರೀಧರ ನಿರಡಿ ವಾಷರ್ಿಕ ವರದಿಯನ್ನು ಮಂಡಿಸಿದರು.
ಕೆ. ಎಲ್. ಇ. ಪಿಯು ಕಾಲೇಜಿನ ಪ್ರಾಚಾರ್ಯ ಪ್ರೋ. ಎಸ್. ಬಿ. ತಟವಟಿ ಆಯ್. ಎನ್. ಹಾದಿಮನಿ, ಎಚ್.ಆಯ್.ಸಂಕಣ್ಣವರ ಸವಿತಾ ಖನಗೌಡರ, ಎಸ್. ಎಸ್. ಶರಣಪ್ಪನವರ, ಎ. ಎಮ್. ಪಾಟೀಲ, ವಿ. ಬಿ. ಪಾಟೀಲ, ಎಸ್. ಎಮ್. ಕಳಸಣ್ಣವರ, ಆರ್. ಪಿ. ದೊಡ್ಡಹುಬ್ಬಳ್ಳಿ, ಎಮ್. ಎ. ಸವದತ್ತಿಮಠ, ವಿ. ಎಸ್. ಗೋದಿ, ಎಸ್. ಎಸ್. ಶಹಾಪುರ, ಎಮ್. ಬಿ. ಕಡಬಿ, ಎಸ್. ಎಸ್. ಬಿಳ್ಳುರ, ವಿ. ಆರ್. ಶಿದ್ನಾಳ, ಎಸ್. ಎಸ್. ಹಳ್ಳೂರ, ಎಸ್. ಆರ್. ಪಾಟೀಲ, ವಿ. ಎ. ಬಡಿಗೇರ, ಎಮ್. ಎ. ಮಗದುಮ್ಮ ಹಾಗೂ ಡಿಪ್ಲೋಮಾ ಮತ್ತು ಆಯ್.ಟಿ.ಆಯ್ ಕಾಲೇಜಿನ ವಿದ್ಯಾರ್ಥಿಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು