ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ಆಮ್ ಆದ್ಮಿ ಪಾರ್ಟಿ ಬಹಿರಂಗ ಸಭೆ

ರಾಣೇಬೆನ್ನೂರಲ್ಲಿ ಆಮ್ ಆದ್ಮಿ ಪಾರ್ಟಿ ಬಹಿರಂಗ ಸಭೆ

ರಾಣೇಬೆನ್ನೂರು 31:  ವಾಣಿಜ್ಯ ನಗರದ ಪ್ರಧಾನ ಅಂಚೆ ಕಚೇರಿ ಬಾಪೂಜೆ ವೃತ್ತದಲ್ಲಿ ಮಾ.31 2023 ರಂದು ಶುಕ್ರವಾರ ಮುಂಜಾನೆ 10 ಗಂಟೆಗೆ ಆಮ್ ಆದ್ಮಿ  ಪಾರ್ಟಿ  ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹನುಮಂತಪ್ಪ ಡಿ ಕಬ್ಬಾರ್ ಅವರ ಪ್ರಥಮ ಸಾರ್ವಜನಿಕ ಬಹಿರಂಗ ಸಭೆ ಹಾಗೂ ಬೈಕ್ ರಾಲಿ ನಡೆಯಲಿದೆ ಎಂದು ಅಭ್ಯರ್ಥಿ ಹನುಮಂತಪ್ಪ ಕಬ್ಬಾರ್ ಹೇಳಿದರು.

ಅವರು ಗುರುವಾರ ಕಾ. ನಿಪ ಸಂಘದ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.   

ಶುಕ್ರವಾರ ಮುಂಜಾನೆ 10 ಗಂಟೆಗೆ ನಗರ ದೇವತೆ ಗಂಗಾಜಲ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವುದರ ಮೂಲಕ ಆರಂಭವಾಗುವ ಬೈಕ್ ರ್ಯಾಲಿಯಲ್ಲಿ ಪ್ರಚಾರ ಮತ್ತು ಜನಸಂಪರ್ಕ ಸಭೆಯ ರಾಜ್ಯ ಅಧ್ಯಕ್ಷ ಡಾ: ಮುಖ್ಯಮಂತ್ರಿ ಚಂದ್ರು, ರಾಜ್ಯಾಧ್ಯಕ್ಷ  ಪೃಥ್ವಿ ರೆಡ್ಡಿ, ಉಪಾಧ್ಯಕ್ಷರೋಹನ್ ಐನಾಪುರ್, ವಿಜಯ ಶರ್ಮಾಜಿ, ರವಿಚಂದ್ರನ್ ಸೇರಿದಂತೆ ಪಕ್ಷದ ಅನೇಕ ಗಣ್ಯರು ಪಾಲ್ಗೊಳ್ಳವರು. ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಅಂಚೆ ಕಚೇರಿ ಬಳಿ ಸಾರ್ವಜನಿಕ ಸಭೆಯಾಗಿ ಮಾರ್ಪಡುವುದು. ಎಂದರು ಮಾಧ್ಯಮಗೋಷ್ಠಿಯಲ್ಲಿ ತಾಲೂಕ ಅಧ್ಯಕ್ಷ ಆನಂದ್ ಕಾಳೇರ ಮತ್ತಿತರರು ಇದ್ದರು. 

ಸುದ್ದಿ ಓದಿ