ಜೋಡಗುಡಿಯ ಕಾರ್ತಿಕ ಮಾಸದ ಪ್ರಯುಕ್ತ ಮರುಳಸಿದ್ದೇಶ್ವರ ಜಾತ್ರೆ ನಿಮಿತ್ತವಾಗಿ ಬೃಹತ್ ಜಾನುವಾರುಗಳ ಜಾತ್ರೆ
ಜೋಡಗುಡಿಯ ಕಾರ್ತಿಕ ಮಾಸದ ಪ್ರಯುಕ್ತ ಮರುಳಸಿದ್ದೇಶ್ವರ ಜಾತ್ರೆ ನಿಮಿತ್ತವಾಗಿ ಬೃಹತ್ ಜಾನುವಾರುಗಳ ಜಾತ್ರೆ
ಇಂಡಿ 15 : ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿಯ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಮರುಳಸಿದ್ದೇಶ್ವರ ಜಾತ್ರೆ ನಡೆಯುತ್ತದೆ.ಜಾತ್ರೆ ನಿಮಿತ್ತವಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಅದೇ ರೀತಿ ಇದೆ ತಿಂಗಳು ದಿನಾಂಕ 20-11-2024 ರಿಂದ 26-11-2024 ವರಿಗೆ, ಈ ವರ್ಷದಿಂದ ವಿನೂತನವಾಗಿ *ಬೃಹತ್ ಜಾನುವಾರುಗಳ ಜಾತ್ರೆಯನ್ನು* ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಜಿಲ್ಲೆಯ, ತಾಲ್ಲೂಕಿನ ಹಾಗೂ ಸುತ್ತಮುತ್ತಲಿನ ರೈತರು ಈ ದನಗಳ ಜಾತ್ರೆಯ ಲಾಭವನ್ನು ಪಡೆಯಬೇಕು, ಹಾಗೂ ಜಾತ್ರೆ ಪ್ರತಿ ವರ್ಷದಂತೆ ವಿಜೃಂಭಣೆಯಿಂದ ನಡೆಯುತ್ತದೆ.ಈ ಜಾತ್ರೆಯನ್ನ ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಬರೋದು ವಾಡಿಕೆ.ಹಾಗೇ ವಿಶೇಷ ಅಂದ್ರೆ ಜಾನುವಾರುಗಳಿಗಾಗಿಯೇ ಇಲ್ಲಿ ಪ್ರತ್ಯೇಕ ಜಾತ್ರೆಯು ನಡೆಯುತ್ತದೆ.ಹಾಗೂ ಉತ್ತಮ ತಳಿಯ ಜಾನುವಾರುಗಳನ್ನು ಗುರುತಿಸಿ ಪಶು ಸಂಗೋಪನಾ ಇಲಾಖೆ ಹಾಗೂ ಕಮೀಟಿ ಸಹಯೋಗದಲ್ಲಿ ಪಾಸ್ ಮತ್ತು ಬಹುಮಾನವನ್ನು ನೀಡಲಾಗುವುದು ಎಂದು ಜಾತ್ರೆ ಕಮೀಟಿ ಅಧ್ಯಕ್ಷರಾದ ಶ್ರೀ ಮಳಸಿದ್ದಪ್ಪ ಖಸ್ಕಿ ಹಾಗೂ ಉಪಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಇಂಡಿ ಹಾಗೂ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಇಂಡಿ ಅವರು ಜಂಟಿಯಾಗಿ ತಿಳಿಸಿದ್ದಾರೆ.