ಅಥಣಿ

ಕೆ.ಎ.ಲೋಕಾಪುರ ಪದವಿ ಮಹಾವಿದ್ಯಾಲಯಕ್ಕೆ A+ ನ್ಯಾಕ್ ಮಾನ್ಯತೆ

ಕೆ.ಎ.ಲೋಕಾಪುರ ಪದವಿ ಮಹಾವಿದ್ಯಾಲಯಕ್ಕೆ A+ ನ್ಯಾಕ್ ಮಾನ್ಯತೆ

ಅಥಣಿ 20: ಅಥಣಿ ಜಾಧವಜಿ ಶಿಕ್ಷಣ ಸಂಸ್ಥೆಯ ಕೆ.ಎ.ಲೋಕಾಪುರ ಪದವಿ ಮಹಾವಿದ್ಯಾಲಯಕ್ಕೆ ಇದೇ ಪ್ರಥಮ ಬಾರಿಗೆ A+  ನ್ಯಾಕ್ ಮಾನ್ಯತೆ ದೊರಕಿದ್ದು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಮಹಾವಿದ್ಯಾಲಯದ ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಪಟಾಕಿ ಸಿಡಿಸಿ ಮಹಾವಿದ್ಯಾಲಯದ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು. 

ಜಾಧವಜಿ ಶಿಕ್ಚಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ  ಮಾತನಾಡಿ ನಮ್ಮ ಮಹಾವಿದ್ಯಾಲಯಕ್ಕೆ A+  ಮಾನ್ಯತೆ ಬಂದಿರುವ ಸಂಗತಿ ನಮಗೆಲ್ಲ ಹೆಮ್ಮೆ ತಂದಿದೆ ಎಂದ ಅವರು ಈ ಮಾನ್ಯತೆ ಬರಲು ಮಹಾವಿದ್ಯಾಲಯದ ಅಧ್ಯಾಪಕ ವರ್ಗದ ಶ್ರಮ ಮೆಚ್ಚುವಂತಹದ್ದು. ನ್ಯಾಕ್ ಮಾನ್ಯತೆಗೆ ಶ್ರಮುಸಿದ ಮಹಾವಿದ್ಯಾಲಯದ ಪ್ರಾಧ್ಯಾಪಕರಿಗೆ ಮತ್ತು ಡಿ ವರ್ಗದ ನೌಕರರಿಗೂ ಸಂಸ್ಥೆಯ ವತಿಯಿಂದ ಸತ್ಕರಿಸಲಾಗುವುದು ಎಂದು ಹೇಳಿದರು. 

        ಸಂಸ್ಥೆಯ ಸಂಚಾಲಕ ಮಂಡಳಿ ಸದಸ್ಯ ಅರವಿಂದರಾವ ದೇಶಪಾಂಡೆ ಮಾತನಾಡಿ, ಉತ್ತರ ಕರ್ನಾಟಕದಲ್ಲಿಯೇ ಅನುದಾನ ರಹಿತ ಪದವಿ ಮಹಾವಿದ್ಯಾಲಯಗಳಲ್ಲಿ ನಮ್ಮ ಸಂಸ್ಥೆಯ ಲೋಕಾಪುರ ಮಹಾವಿದ್ಯಾಲಯಕ್ಕೆ ಮಾತ್ರA+  ಮಾನ್ಯತೆ ದೊರಕಿದೆ. 2015 ರಲ್ಲಿ ಇದೇ ನಮ್ಮ ಮಹಾವಿದ್ಯಾಲಯಕ್ಕೆ A+  ನ್ಯಾಕ್ ಮಾನ್ಯತೆ ದೊರಕಿತ್ತು ಅಂದಿನಿಂದಲೇ ನಮ್ಮ ಅಧ್ಯಾಪಕ ವರ್ಗ ತಯಾರಿ ನಡೆಸಿದ ಪರಿಣಾಮವೇ A+  ನ್ಯಾಕ್ ಮಾನ್ಯತೆ ದೊರಕಿದೆ ಎಂದರು. 

        ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಮ್.ದೇವರೆಡ್ಡಿ ಮಾತನಾಡಿ, ನ್ಯಾಕ್ ಮಾನ್ಯತೆಗಾಗಿ ಪ್ರಮುಖವಾಗಿ 7 ಅಂಶಗಳ ಮಾನ ದಂಡಗಳನ್ನು ಪರಿಗಣಿಸಲಾಗುತ್ತದೆ ಈ ಪೈಕಿ ಮಹಾವಿದ್ಯಾಲಯದ ಪಠ್ಯಕ್ರಮಕ್ಕೆ ನ್ಯಾಕ್ ಸಮಿತಿ 3.37, ಕಲಿಕೆ, ಕಲಿಸುವ ವಿಧಾನ ಮತ್ತು ಮೌಲ್ಯಮಾಪನಕ್ಕೆ 3.37, ಸಂಶೋಧನಾ ಉಪನ್ಯಾಸಕರು ಮತ್ತು ಉಪನ್ಯಾಸಕರ ಉನ್ನತ ಶಿಕ್ಷಣ ಮಾನದಂಡಕ್ಕೆ 2.18, ಮಹಾವಿದ್ಯಾಲಯದ ಕಟ್ಟಡ, ಸೌಲಭ್ಯಗಳು ಸೇರಿದಂತೆ ಇನ್ಫ್ರಾಸ್ಟ್ರಕ್ಚರ್ ಗಾಗಿ 3.4, ವಿದ್ಯಾರ್ಥಿಗಳ ಗುಣಮಟ್ಟ ಹಾಗೂ ಹಿಂದಿನ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ 3.61, ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚಟುವಟಿಕೆಗಳಿಗೆ  3.21 ಹಾಗೂ ಕೊನೆಯದಾಗಿ ಮೌಲ್ಯಾಧಾರಿತ ಶಿಕ್ಷಣಕ್ಕೆ 3.4  ಅಂಕಗಳು ನೀಡಿದ್ದು, ಒಟ್ಟು ಸರಾಸರಿ 3.3 ಅಂಕಗಳು ಲಭಿಸುವ ಮೂಲಕA+  ಮಾನ್ಯತೆ ದೊರಕಿದೆ ಎಂದ ಅವರು ಈ ನ್ಯಾಕ್ ಮಾನ್ಯತೆ ಮುಂದಿನ 5 ವರ್ಷಗಳ ವರೆಗೆ ಚಾಲನೆಯಲ್ಲಿರುತ್ತದೆ ಎಂದು ಹೇಳಿದರು. 

    ಅನೀಲ ದೇಶಪಾಂಡೆ(ಹಿಡಕಲ್), ಎಸ್.ವಿ.ಜೋಶಿ, ಆರ್ಬಿ.ದೇಶಪಾಂಡೆ, ಅವಿನಾಶ ಸೋಲಾಪುರ, ಡಾ.ಶ್ರೀವತ್ಸ ಕುಲಕರ್ಣಿ, ಸಂಜೀವ ಪಾಟೀಲ, ಮಕರಂದ ನಾಯಿಕ, ಜಿ.ಎಮ್.ಕುಲಕರ್ಣಿ, ಬಿ.ಎ.ಬೊಮನಾಳೆ ಉಪಸ್ಥಿತರಿದ್ದರು 

ಸುದ್ದಿ ಓದಿ