ಐಸಿಎಸ್ಇ ಪಬ್ಲಿಕ್ ಶಾಲೆಗೆ ಶೇ.100ರಷ್ಟು ಫಲಿತಾಂಶ
ರಾಣೇಬೆನ್ನೂರು ಮೇ 18- ತಾಲೂಕಿನ ಕಮದೋಡ ಗ್ರಾಮದ ರೇನ್ ಭೂ ರೆಸಿಡೆನ್ಸಿಯಲ್ ಐಸಿಎಸ್ಇ ಪಬ್ಲಿಕ್ ಶಾಲೆಯ 2022 -23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಪ್ರಕಟವಾಗಿದ್ದು, ಸತತ 12ನೇ ವರ್ಷದ ಅವಧಿಯಲ್ಲಿ ಶಾಲೆಯು ಶೇ, 100ಕ್ಕೆ-100. ಫಲಿತಾಂಶ ಗಳಿಸಿ ಎಂದಿನಂತೆ ತನ್ನ ಸಾಧನೆ ಮೆರೆದಿದೆ.51 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 15 ಉನ್ನತ ಶ್ರೇಣಿ, 23 ಪ್ರಥಮ, 6 ದ್ವಿತೀಯ ಹಾಗೂ,7 ತೃತಿಯ. ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಲಿಖಿತ್ ಎನ್. ಎ. (ಶೇ.95.) ಶಾಲೆಗೆ ಪ್ರಥಮ. ಸಾಗರ್ ಬಿ.ಎಸ್.( ಶೇ, 91.17.) ದ್ವಿತೀಯ, ವಿಶಾಲ್ ಬಿ.ಪಿ. (ಶೇ. 90.83.) ತೃತಿಯ ಹಾಗೂ ಪ್ರಜ್ಞಾ ವ. ಹೆಚ್ ಹೆಚ್.( ಶೇ.90.33.) ಚತುರ್ಥ ಮತ್ತು ಶ್ರೀಯಾ ವೈ. (ಶೇ, 88.) ಚತುರ್ಥ. ತಮ್ಮ ಶೈಕ್ಷಣಿಕ ಸಾಧನೆ ಮೆರೆದು ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಅಧ್ಯಕ್ಷ ಡಾ : ಸುರೇಶ್ ಸಿ. ಟಿ., ಉಪಾಧ್ಯಕ್ಷೆ ಲಲಿತಾ ಸುರೇಶ್, ಕಾರ್ಯದರ್ಶಿ ಮಾಲತೇಶ್ ಐ. ಕೆ. ಖಜಾಂಚಿ ನಾಗರಾಜ್ ಎಸ್. ಕೆ. ಪ್ರಾಚಾರ್ಯರು, ಪ್ರಾಧ್ಯಾಪಕರು, ಮತ್ತು ಸಿಬ್ಬಂದಿ ತಮ್ಮ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ