ರಾಣೆಬೆನ್ನೂರ

ಸಣ್ಣ ಪತ್ರಿಕೆಗಳನ್ನು ಮುನ್ನಡೆಸುವುದು ಸುಲಭವಲ್ಲ:ಶಿವಯೋಗಿ

ಸಣ್ಣ ಪತ್ರಿಕೆಗಳನ್ನು ಮುನ್ನಡೆಸುವುದು ಸುಲಭವಲ್ಲ:ಶಿವಯೋಗಿ

ರಾಣೆಬೆನ್ನೂರು : 20 ಆಧುನಿಕತೆಯ ಈ ಯುಗದಲ್ಲಿ ಹೆಚ್ಚುತ್ತಿರುವ ಅತಿಯಾದ ತಾಂತ್ರಿಕತೆ ಮತ್ತು ದೊಡ್ಡ ಪತ್ರಿಕೆಗಳಲ್ಲಿನ ದರದ  ಪೈಪೋಟಿಯಿಂದಾಗಿ ಸಣ್ಣ ಪತ್ರಿಕೆಗಳನ್ನು ಮುನ್ನಡೆಸುವುದು ಅಷ್ಟು ಸುಲಭವಲ್ಲ ಎಂದು ಸುಕ್ಷೇತ್ರ ಗುಡ್ಡದ ಆನ್ವೇರಿಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

ಸ್ಥಳೀಯ ಶಿಡ್ಲು ದಿನಪತ್ರಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.  ಸಣ್ಣಪತ್ರಿಕೆಗಳನ್ನು ಮುನ್ನಡೆಸುವಲ್ಲಿ ಬರುವ ಸಂಕಷ್ಟಗಳು ಅಸಂಖ್ಯಾತ ಎಂದು ಶ್ರೀಗಳು ತಿಳಿಸಿದರು. ಬಹುತೇಕ ಸಣ್ಣ ಪತ್ರಿಕೆಗಳು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಇದರ ಜೊತೆ ಪತ್ರಿಕೆಗಳ ಮಾಲಕರು, ಸಂಪಾದಕರು ಸ್ಥಳೀಯ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಅನಿವಾರ್ಯವಾಗಿ ಪತ್ರಿಕೆಗಳನ್ನು ಮುನ್ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರು. 

ಪತ್ರಿಕೆಗಳು ವಸ್ತು ನಿಷ್ಠ ಹಾಗೂ ನೈಸ್ ವರದಿಗಳನ್ನು ಪ್ರಕಟಿಸುವುದರ ಜೊತೆಗೆ ಸಾಮಾಜಿಕ ಕಳಕಳಿ ಎನ್ಟ್ಟುಕೊಂಡು ಉತ್ತಮ ಲೇಖಗಳನ್ನು ಬರೆಯುವುದರ ಮೂಲಕ ಸಮಾಜದ ಅಂಕ ಡೊಂಕುಗಳನ್ನು ಮುಂದಾಗಬೇಕು ಎಂದರು. ಪತ್ರಿಕೆಯ ಸಂಪಾದಕ ಆರ್ ಜಿ ಮಹಾನುಭಾವಿಮಠ ಅಧ್ಯಕ್ಷತೆ ವಹಿಸಿದ್ದರು ವೆಂಕಟೇಶ ಕಾಕಿ, ಎಲ್ಜಿ ಶೆಟ್ರ, ರಾಜಶೇಖರ ಅಜ್ಜೋಡಿಮಠ ಸೇರಿದಂತೆ ಮತ್ತಿ ತರರು ಇದ್ದರು. ಇದೇ ಸಂದರ್ಭದಲ್ಲಿ ಮಹಾಂತೇಶ್ ಚಿಕ್ಕಮಠ ಮತ್ತು ಪ್ರಿಯಾಂಕಾ ರೆಡ್ಡಿಯವರಿಂದಸಂಗೀತ ಸುಧೆ ನಡೆಯಿತು. 

ಪತ್ರಿಕೆಯ ಅನೇಕ ಓದುಗರುಗಳು ಅಭಿಪ್ರಾಯಗಳನ್ನು ಹಂಚಿಕೊಂಡರು.  ಆರಂಭದಿಂದ ಅಂತ್ಯದವರೆಗೂ ಮಳೆರಾಯನ ಸಿಂಚನವು ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅಡ್ಡಿಯಾಗಲಿಲ್ಲ. ಶಿವಯೋಗಿ ಮಹಾನುಭಾವಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಸ್ವಾಮಿ ಮಾನುಭಾವಿಮಠ ನಿರೂಪಿಸಿದರು. ಎಸ್ ಸಿ ಷಡಕ್ಷರಿ ಮಠ ಸ್ವಾಗತಿಸಿದರು. ಮುರುಗೇಶ್ ಮಹಾನುಭಾವಿಮಠ  ವಂದಿಸಿದರು. ಪತ್ರಿಕೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಎಂ.ಚಿರಂಜೀವಿ, ಕೆ. ಎಸ್ ನಾಗರಾಜ್, ಬಾಪು ನಂದಿಹಳ್ಳಿ, ಮಲ್ಲಿಕಾಜರ್ುನ ಕೆಂಚರೆಡ್ಡಿ, ಎಂ. ಎನ್. ಸಣ್ಣಿಂಗಣ್ಣನವರ  ಮತ್ತಿತರರನ್ನು ಶ್ರೀಗಳು ಸನ್ಮಾನಿಸಿದರು 

ಸುದ್ದಿ ಓದಿ