‘ಗ್ರಾಮಗಳ ಆರೋಗ್ಯ ಗ್ರಾಮ ಪಂಚಾಯತ್ ಜವಾಬ್ದಾರ’
ಇಂಡಿ 12: ಗ್ರಾಮಗಳಲ್ಲಿರುವ ಸಾರ್ವಜನಿಕರ ಆರೋಗ್ಯಕ್ಕಾಗಿ ಗ್ರಾಮದ ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಧಾರ್ಮಿಕ ಮುಖಂಡರು ಸಹಕರಿಸಬೇಕೆಂದು ಗ್ರಾಮ ಪಂಚಾಯತ ಅಧ್ಯಕ್ಷ ಆಸ್ಮ ರಜಾಕ್ ಹೇಳಿದರು.
ತಾಲೂಕಿನ ತಾಂಬಾ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿರುವ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ ಎಂ ಪೂಜಾರ ಮಾತನಾಡಿ ಆರೋಗ್ಯ ಮತ್ತು ಅಭಿವೃದ್ಧಿ ಗ್ರಾಪಂ ಸಹಾಯ ಮತ್ತು ಬೆಂಬಲದೊಂದಿಗೆ ಕ್ರಿಯಾಯೋಜನೆ ಸಿದ್ಧಪಡಿಸಿಲು ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯಿತಿಯ ಮುಖ್ಯ ನಿರ್ವಹಣಾ ಅಧಿಕಾರಿಗಳ ನೇತೃತ್ವದಲ್ಲಿ ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಆರೋಗ್ಯ ಇಲಾಖೆ, ಮೂರು ಇಲಾಖೆಯ ಸಂಬಂಧಿಸಿದ ಮುಖ್ಯಸ್ಥರು ಅಧಿಕಾರಿಗಳು ಸಹಭಾಗಿತ್ವದಲ್ಲಿ ಕೆ ಹೆಚ.ಪಿ.ಟಿ. ಸಂಸ್ಥೆಯ ಅಧ್ಯಯನದ ಆಧಾರಿತವಾಗಿ ಸಮುದಾಯದ ಯೋಗ ಕ್ಷೇಮಕ್ಕಾಗಿ ಕಾರ್ಯಪಡೆಗಳಿಗೆ ತರಬೇತಿ ನೀಡಲು ಪ್ರಾವೀಣ್ಯತೆಯ ತರಬೇತಿ ಪಡೆದಿರುವ ತ್ರಿವಳಿ ಇಲಾಖೆ ಮುಖ್ಯಸ್ಥರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ಅಧಿಕಾರಿಗಳು ಒಳಗೊಂಡಂತೆ ನೀಡುತ್ತಾ ಬಂದಿದೆ.
ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಂಪತ್ ಕುಮಾರ್ ಗುಣಾರಿ, ಜಿಲ್ಲಾ ಆರಸಿಹೆಚ್ ಅಧಿಕಾರಿ ಡಾ ರತನಸಿಂಗ ಗುಂಡಬ್ಬಾಡಿ, ತಾಲೂಕ ಆರೋಗ್ಯ ಅಧಿಕಾರಿ ಡಾ ಅರ್ಚನಾ ಕುಲಕರ್ಣಿ ಹಾಗೂ ಇಂಡಿ ತಾಲೂಕ ಕಾರ್ಯನಿರ್ವಹಣಾಧಿಕಾರಿ ಸಂಪತ್ ಕುಮಾರ್ ಇವರು ಸಿದ್ದಪಡಿಸಿದ ಕ್ರಿಯಾ ಯೋಜನೆ ಪ್ರಕಾರ ಪಂಚಾಯತಿ ಮಟ್ಟದಲ್ಲಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ.ಪಂಚಾಯತಿ ಅಧ್ಯಕ್ಷರು ಸದಸ್ಯರು, ಸಂಘ-ಸಂಸ್ಥೆಗಳ ಸ್ಥಳೀಯ ಮುಖಂಡರ ಸಹಭಾಗಿತ್ವದಲ್ಲಿ ಪ್ರಮುಖ ಆರೋಗ್ಯ ಸಂಬಂಧಿತ ಸಮಸ್ಯೆಗಳು ಪರಿಹಾರ ಮತ್ತು ಅನುಷ್ಠಾನ ಗೊಳಿಸಲು ಗ್ರಾಮ ಪಂಚಾಯತಿಯ ಪ್ರಮುಖ ಜವಾಬ್ದಾರಿಗಳು 1ಗ್ರಾಮ ಆರೋಗ್ಯ ಮತ್ತು ನೀರು ನೈರ್ಮಲ್ಯ 2 ಕ್ಷಯ ಮುಕ್ತ ಗ್ರಾಮ ಪಂಚಾಯಿತಿ 3 ಬಿಪಿ ಶುಗರ್ ಸ್ಕ್ರೀನಿಂಗ್ ಕ್ಯಾಂಪ್4 ಆಪೌಷ್ಟಿಕತೆ ಮತ್ತು ರಕ್ತ ಹೀನತೆ ಮುಕ್ತ ಗ್ರಾಮ ಪಂಚಾಯಿತಿ 5 ಬಾಲ್ಯ ವಿವಾಹ. ತಡೆಗಟ್ಟುವಿಕೆ ಮುಟ್ಟಿನ ನೈರ್ಮಲ್ಯ ಅರಿವು 6 ಮನೋ ಸಾಮಾಜಿಕ ಯೋಗ ಕ್ಷೇಮಕ್ಕಾಗಿ ಮಾನಸಿಕ ಆರೋಗ್ಯ ಕಾರ್ಯಕ್ರಮ ಕುರಿತು ಹೇಳುತ್ತಾ ಪಂಚಾಯತ್ ರಾಜ್ಯ ನಿಯಮಾವಳಿ ಪ್ರಕಾರ 15 ನೆಯ ಹಣಕಾಸನಲ್ಲಿ ಆರೋಗ್ಯಕ್ಕಾಗಿ ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮಾರ್ಗಸೂಚಿ ಪ್ರಕಾರ ಆರೋಗ್ಯಕ್ಕೆ ಸೇವೆಗಳು ಗ್ರಾಮ ಪಂಚಾಯತಿಯ ಡಾಟಾ ಎಂಟ್ರಿ ಆಪರೇಟರ್ ಮೂಲಕ ತಂತ್ರಾಂಶದಲ್ಲಿ ಪ್ರತಿ ತಿಂಗಳ ನಮೂದಿಸಿದಾಗ ಗ್ರಾಮ ತಾಲೂಕು ಜಿಲ್ಲೆಯ ಅಭಿವೃದ್ಧಿ ಸೂಚ್ಯಂಕಗಳು ಗುರುತಿಸಲು ಸಾಧ್ಯ ಎಂದು ಹೇಳಿದರು.
ವಿಷಯ ಆಧಾರಿತವಾಗಿ ಆಪ್ತ ಸಮಾಲೋಚಕ ರಾಮಗೊಂಡ ಪ್ರಾಥಮಿಕ ಆರೋಗ್ಯ ಸುಕ್ಷಾಧಿಕಾರಿಗಳು, ಟಿ ಏ ಪಿಂಜಾರ. ಎಸ್ ಆರ್ ಬಿರಾದರ್ ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರವೀಣ, ಪ್ರಶಾಂತ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಗ್ರಾಪಂ ಸದಸ್ಯ ಯೋಗಪ್ಪ ಸಿದ್ದಪ್ಪ ಅವಟೆ, ಪರ್ಸು ಗೌಡ, ರವೀಂದ್ರ ಅರ್ಜುನ್ ಕ್ಷತ್ರಿಯ, ದಾನಪ್ಪ ಏಳುಕೋಟಿ, ಬಿ ಎಚ್ ತೋಟದ್ ಮತ್ತು ಗ್ರಾಮ ಪಂಚಾಯತಿ ಸದಸ್ಯರುಗಳು ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಸರೋಜಿನಿ ಕಂಬಾರ ನಿರೂಪಿಸಿದರು, ಟಿ. ಎಚ್. ಪಿಂಜಾರ. ಮತ್ತು ಸುವರ್ಣ ರಾಂಪುರೆ ಪ್ರಾರ್ಥಿಸಿದರು. ಕಾಶಿಬಾಯಿ ಸೋಮಲಿಂಗ. ಸ್ವಾಗತಿಸಿದರು. ಎಸ್ ಆರ್ ಬಿರಾದಾರ್ ವಂದಿಸಿದರು.