ಬೈಲಹೊಂಗಲ

‘ವಚನ ಸಾಹಿತ್ಯಬಸವಾದಿ ಶರಣರು ವಿಶ್ವಕ್ಕೆ ನೀಡಿದ ಕೊಡುಗೆ’

‘ವಚನ ಸಾಹಿತ್ಯಬಸವಾದಿ ಶರಣರು ವಿಶ್ವಕ್ಕೆ ನೀಡಿದ ಕೊಡುಗೆ’

ಬೈಲಹೊಂಗಲ 20: ಬಸವಾದಿ ಶರಣರು ವಿಶ್ವಕ್ಕೆ ನೀಡಿದ ಕೊಡುಗೆಯಾದ ವಚನ ಸಾಹಿತ್ಯ ಪ್ರತಿ ಮನೆ-ಮನಕ್ಕೆ ಮುಟ್ಟಿದರೆ ಸಮಾಜ ವಿಶ್ವ ಕುಟುಂಬವಾಗಲು ಸಾಧ್ಯವಾಗಲಿದೆ ಎಂದು ಬೆಳಗಾವಿ-ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.  

ಅವರು ಬೆಳಗಾವಿಯ ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಕದಳಿ ಮಹಿಳಾ ವೇದಿಕೆ, ಬೈಲಹೊಂಗಲದ ಪತ್ರಿ ಬಸವನಗರ ಅಭಿವೃದ್ಧಿ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಪಟ್ಟಣದ ಶ್ರೀನಗರ ಬಡಾವಣೆಯಲ್ಲಿ ಹಮ್ಮಿಕೊಂಡ ಪತ್ರಿ ಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವ ಹಾಗೂ ವಚನ ಪಿತಾಮಹ ಫ.ಗು. ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವ, ಮನೆ-ಮನೆಗೆ ವಚನ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. 

ಶರಣ ಡಾ.ನಿಂಗನಗೌಡ ಪಾಟೀಲ ಮಾತನಾಡಿ, ಮನುಕುಲದ ಸವಾಂರ್ಗೀಣ ಪ್ರಗತಿ ಗಮನದಲ್ಲಿಟ್ಟುಕೊಂಡು ಶರಣರು ರಚಿಸಿದ ವಚನ ಸಾಹಿತ್ಯ ವಿಶ್ವ ಕುಟುಂಬ ಸಾರುತ್ತಿವೆ. ವಿಶ್ವ ಮೌಲ್ಯ ತತ್ವಗಳುಳ್ಳ ವಚನ ಪ್ರತಿಯೊಬ್ಬರಲ್ಲೂ ಪಚನವಾದರೆ ಜೀವನ ಸಾರ್ಥಕವಾಗಲಿದೆ. ಈಗಾಗಿ ವಚನ ಸಾಹಿತ್ಯ ರಕ್ಷಿಸಿದರೆ ಮನುಕುಲದ ರಕ್ಷಣೆ ಸಾಧ್ಯ ಎಂದರು. 

ಜಾಗತಿಕ ಲಿಂಗಾಯತ ಮಹಾಸಭಾ ಸಂಘಟಣೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಮಾಟೊಳ್ಳಿ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಿರಿಯ ಉಪಾಧ್ಯಕ್ಷ ಎ.ವಾಯ್‌.ಬೆಂಡಿಗೇರಿ, ಕಜಾಪ ಜಿಲ್ಲಾಧ್ಯಕ್ಷ ಮೋಹನ್ ಗುಂಡ್ಲೂರ, ಬೆಳಗಾವಿ ನಗರ ಘಟಕದ ಕಾರ್ಯದರ್ಶಿ ಸಿ.ಎನ್‌. ಬೂದಿಹಾಳ, ತಾಲೂಕ ಘಟಕದ ಅಧ್ಯಕ್ಷ ಉಮೇಶ ಬೋಳೆತ್ತಿನ, ನಗರ ಘಟಕದ ಅಧ್ಯಕ್ಷ ಮಹೇಶ ಕೋಟಗಿ, ಡಾ. ಸಚೇತನಾ ಡಾ. ಶಿವರಾಜ್ ಪಾಟೀಲ್, ಬೈಲವಾಡದ ಕದಳಿ ಮಹಿಳಾ ವೇದಿಕೆ ಗ್ರಾಮ ಘಟಕ ಅಧ್ಯಕ್ಷೆ ಶಾರದಾ ಪಾಟೀಲ, ಎಲ್‌ಐಸಿ ಪ್ರತಿನಿಧಿ ಸೋಮಲಿಂಗ ಸುಂಕದ, ಈಶ್ವರ್ ಬೆನ್ನಿ, ಅಭಿಯಂತರ ವಿನಾಯಕ ಪಾಟೀಲ, ಶಿಕ್ಷಕ ಎಸ್‌.ಎಂ. ಪಾಟೀಲ್, ಮಹಾಂತೇಶ ರಾಜಗೋಳಿ, ಉಮೇಶ ಬೋಗೂರ ಉಪಸ್ಥಿತರಿದ್ದರು. 

ವೈದ್ಯೆ ಕರುಣಾ ಸಂಸುದ್ದಿ, ಸುಶೀಲಾ ಕಂಠಿ, ರಾಜೇಶ್ವರಿ ಹಿರೇಮಠ, ನೀಲಮ್ಮ ಶೆಟ್ಟರ ಹಾಗೂ ಪತ್ರಿ ಬಸವ ನಗರ ಅಭಿವೃದ್ದಿ ಸಂಘದ ಸದಸ್ಯರು, ಮುಕ್ತಾಯಕ್ಕ, ಅಜಗಣ್ಣ ಬಳಗದ ಸದಸ್ಯರು, ಶ್ರೀನಗರ ಬಡಾವಣೆಯ ನಾಗರಿಕರು ಪಾಲ್ಗೊಂಡಿದ್ದರು. 

ಶರಣೆ ಪ್ರೇಮಕ್ಕ ಅಂಗಡಿ ಸ್ವಾಗತಿಸಿದರು. ಜಿಲ್ಲಾ ವಿಜ್ಞಾನ ಪರಿಷತ್ತಿನ ನಿರ್ಧೇಶಕಿ ಮೀನಾಕ್ಷಿ ಕುಡಸೋಮಣ್ಣವರ ನಿರೂಪಿಸಿದರು. ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷೆ ಸುವರ್ಣ ಬಿಜಗುಪ್ಪಿ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸಂಘಟಣೆಗಳಿಂದ ಡಾ.ಅಲ್ಲಮಪ್ರಭು ಶ್ರೀಗಳನ್ನು ಸನ್ಮಾನಿಸಲಾಯಿತು. ಬಸವ ಪೂಜೆ ನೆರವೇರಿಸಲಾಯಿತು. 


ಸುದ್ದಿ ಓದಿ