ಯರಗಟ್ಟಿ

ಮುರಗೋಡ ಪೊಲೀಸರಿಂದ ದೇವಸ್ಥಾನ ಕಳ್ಳರಿಬ್ಬರ ಬಂಧನ

ಮುರಗೋಡ ಪೊಲೀಸರಿಂದ ದೇವಸ್ಥಾನ ಕಳ್ಳರಿಬ್ಬರ ಬಂಧನ

ಯರಗಟ್ಟಿ 23: ಇತ್ತೀಚಿಗೆ ಮುತವಾಡ ಗ್ರಾಮದ ಹಣಮಂತ ದೇವರ ದೇವಸ್ಥಾನ ಮತ್ತು ಮುಗಳಿಹಾಳ ಗ್ರಾಮದ ಲಕ್ಷ್ಮೀದೇವರ ದೇವಸ್ಥಾನ ಕಳ್ಳತನ ಮಾಡಿದ ಇಬ್ಬರು ಆರೋಪಿತರಿಗೆ ಮುರಗೋಡ ಪೊಲೀಸರು ಬಂದಿಸಿ ಎರಡೂ ಪ್ರಕರಣಗಳನ್ನು ಬೇಧಿಸಿ ಆರೋಪಿತರಿಂದ ಮುತವಾಡ ಗ್ರಾಮದ ಹಣಮಂತ ದೇವರ ದೇವಸ್ಥಾನದಲ್ಲಿ ಇಟ್ಟಿದ್ದ ಮತ್ತು ದುರ್ಗಮ್ಮಾದೇವಿ ಮೂರ್ತಿ ಯ ಕೊರಳಲ್ಲಿನ ತಲಾ 2.5 ಗ್ರಾಂ. ತೂಕದ ಬಂಗಾರದ ತಾಳಿ ಎರಡು ಮತ್ತು 250 ಗ್ರಾಂ. ತೂಕದ ಬೆಳ್ಳಿಯ ದುರ್ಗಾದೇವಿ ಮುಖ ಒಂದು ಹಾಗೂ ಮುಗಳಿಹಾಳ ಗ್ರಾಮದ ಶ್ರೀ ಲಕ್ಷ್ಮೀದೇವರ ದೇವಸ್ಥಾನದಲ್ಲಿ ನ 400 ಗ್ರಾಂ. ತೂಕದ ಬೆಳ್ಳಿಯ ಬೆತ್ತಗಳು ಎರಡು, 100 ಗ್ರಾಂ ತೂಕದ ಬೆಳ್ಳಿಯ ಹಸ್ತಗಳು ಎರಡು, 2 ಗ್ರಾಂ, ತೂಕದ ಬಂಗಾರದ ತಾಳಿ ಒಂದು,  2 ಗ್ರಾಂ, ತೂಕದ ಬಂಗಾರದ ಮೂಗನತ್ ಒಂದು ಈ ಪ್ರಕಾರ ಒಟ್ಟು 1,30,500 ರೂ. ಕಿಮ್ಮತ್ತಿನ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಹಾಗೂ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ ವಶಪಡಿಸಿಕೊಂಡಿರುತ್ತಾರೆ.

ರಾಮನಗೌಡ ಹಟ್ಟಿ ಡಿ.ಎಸ್.ಪಿ ರಾಮದುರ್ಗ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಮೌನೇಶ್ವರ ಮಾಲಿ ಪಾಟೀಲ, ಪೊಲೀಸ್ ಇನ್ಸಪೆಕ್ಟರ ಮತ್ತು ಐ.ಎಮ್ ಹಿರೇಗೌಡರ, ಪಿ.ಎಸ್.ಐ ಮುರಗೋಡ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಜನರಾದ ಜನರಾದ ಕೆ.ಬಿ ಅಲಗರಾವುತ, ಆರ್.ಬಿ ಸಸಾಲಟ್ಟಿ, ಎಸ್.ಬಿ ಮಠದ, ಸುರೇಶ ಹುಂಬಿ, ಮತ್ತು ವಿನೋದ ದೇಸಾಯಿಪಟ್ಟಿ,  ಬಿ. ಎಮ್. ಮಠದ ಇದ್ದರು.

ಈ 02 ಪ್ರಕರಣಗಳನ್ನು ಪತ್ತೆ ಮಾಡಿದ್ದ ತಂಡಕ್ಕೆ ಹಾಗೂ ಎಲ್ಲ ಸಿಬ್ಬಂದಿ ವರ್ಗ ಎಸ್.ಪಿ ಬೆಳಗಾವಿ ಅವರ ಕಾರ್ಯ ವೈಖರಿ ಬಗ್ಗೆ ಪ್ರಶಂಸೆದ್ದಾರೆ 

ಸುದ್ದಿ ಓದಿ