ಜಮಖಂಡಿ

ದೇಶದಲ್ಲಿ ಯುವಕರ ಪಾತ್ರ ಬಹಳಷ್ಟು ಮುಖ್ಯ

ದೇಶದಲ್ಲಿ ಯುವಕರ ಪಾತ್ರ ಬಹಳಷ್ಟು ಮುಖ್ಯ
ಜಮಖಂಡಿ ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಜಮಖಂಡಿ ಪ್ರೀಮಿಯರ್ ಲೀಗ್ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮತ್ತು ಸಂಗೀತ ಸಂಜ

ಲೋಕದರ್ಶನ ವರದಿ,

ಜಮಖಂಡಿ3: ಭಾರತ ವಿಶ್ವಗುರು ದಾಪುಗಾಲು ಇಡುವಲ್ಲಿ, ವಿವೇಕಾನಂದರ ಕನಸು ನನಸು ಮಾಡುವ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರಕಾರಗಳು ಕೆಲಸ ಮಾಡುತ್ತಿದ್ದು. ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಜಮಖಂಡಿ ಪ್ರೀಮಿಯರ್ ಲೀಗ್ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮತ್ತು ಕೊಪ್ಪಳದ ಕ್ಷಿತಿ ಮ್ಯೂಜಿಕಲ್ ಇವೆಂಟ್ಸ ತಂಡದ ಸಂಗೀತ ಸಂಜೆಯಲ್ಲಿ ಮಾತನಾಡಿದರು.

ದೇಹ ಸದೃಢವಾಗಿರಲು ಕ್ರೀಡೆಗಳಲ್ಲಿ ಭಾಗವಹಿಸಬೇಕು. ದೇಶಕ್ಕೆ ಯುವಶಕ್ತಿ ಹೆಚ್ಚಿನ ಪ್ರಮಾಣದಲ್ಲಿದ್ದು ದುಶ್ಚಗಳಿಗೆ ಬಲಿಯಾಗದೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಜಗತ್ತಿನಲ್ಲಿ ಸಂಗೀತಕ್ಕೆ ತಲೆದೂಗದ ವ್ಯಕ್ತಿ ಯಾರು ಇಲ್ಲ ಅಂತಹ ಶಕ್ತಿ ಸಂಗೀತದಲ್ಲಿದೆ ಎಂದರು.

ಉದ್ಯಮಿ ಜಗದೀಶ ಗುಡಗುಂಟಿ ಮಾತನಾಡಿ, ದೇಶದಲ್ಲಿ ಯುವಕರ ಪಾತ್ರ ಬಹಳಷ್ಟು ಮುಖ್ಯವಾಗಿದೆ. ಯುವಕರು ದೈಹಿಕ ಮತ್ತು ಮಾನಸಿಕ ಸದೃಢತೆ ಹೊಂದಲು ಕ್ರೀಡೆಗಳಲ್ಲಿ ಭಾಗವಹಿಸುವದು ಬಹಳ ಅವಶ್ಯಕ. ತಾಲೂಕಿನ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಿ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಕ್ರಿಕೆಟ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಅಂತರಾಷ್ಟಿಯಮಟ್ಟದಲ್ಲಿ ಪುಟ್ಬಾಲ್ ಕ್ರೀಡೆ ಗೆಲವು ಸಾಧಿಸಿದ ಕ್ರೀಡಾಪಟುಗಳಿಗೆ ನೀಡಿರುವ ಪ್ರಮಾಣಪತ್ರ ನೌಕರಿ ಪಡೆಯುವ ಸಂದರ್ಭದಲ್ಲಿ ಸಹಕಾರಿಯಾಗಲಿದೆ. ಅದೇ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದ್ದು ಯಶಸ್ವಿಯಾಗಿದೆ.

ಇದೇ ಸಂದರ್ಭದಲ್ಲಿ ಪ್ರಥಮ ಸ್ಥಾನ ಪಡೆದ ವೀರಮದಕರಿ ತಂಡಕ್ಕೆ  1 ಲಕ್ಷ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ಎಪಿಜಿ ಅಬ್ದುಲ್ ಕಲಾಂ ತಂಡಕ್ಕೆ 50 ಸಾವಿರ, ತೃತಿಯ ಸ್ಥಾನ ಪಡೆದ ಛತ್ರಪತಿ ಶಿವಾಜಿ ತಂಡಕ್ಕೆ 40ಸಾವಿರ ಹಾಗೂ 4ನೇ ಸ್ಥಾನ ಪಡೆದ ಚಂದ್ರಶೇಖರ ಆಜಾದ ತಂಡಕ್ಕೆ 30ಸಾವಿರ ನಗದು ಬಹುಮಾನದೊಂದಿಗೆ ಟ್ರೋಪಿ ನೀಡಲಾಯಿತು.

ಸಂಗೀತ ಸಂಜೆಯಲ್ಲಿ ಸ.ರಿ.ಗ.ಮ.ಪ ಖ್ಯಾತಿಯ ಶ್ರೀರಾಮ ಕಾಸರ, ಗಂಗಮ್ಮ ಕೊಪ್ಪಳ, ಎದೆತುಂಬಿ ಹಾಡುವೆನು ಖ್ಯಾತಿಯ ಗೀತಾ ದಾಂಡೇಲಿ, ಕನ್ನಡ ಕೋಗಿಲೆ ಖ್ಯಾತಿಯ ವನುಶ್ರೀ ಬೆಂಗಳೂರು, ಅರ್ಜುನ ಇಟಗಿ ಸುಮಧುರ ಹಾಡುಗಳು ಗಮನ ಸೆಳೆಯಿತು. ಮಾರೇಶ ಕೊಪ್ಪಳ ವಿಶೇಷ ಮಿಮಿಕ್ರಿ ಗಮನ ಸೆಳೆಯಿತು. ಡಾನ್ಸ ಕನರ್ಾಟಕ ಡಾನ್ಸದಲ್ಲಿ ದಾವಣಗೆರೆಯ ಶ್ರೇಯಾ ಗದಗ, ಪೂಜಾ ತಂಡದಿಂದ ನೃತ್ಯ ಪ್ರದರ್ಶನ ಜರುಗಿತು. 

ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಕೊಣ್ಣೂರ ಹೊರಗಿನಮಠದ ಡಾ.ವಿಶ್ವ ಪ್ರಭುದೇವರು ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಕಾಡು ಮಾಳಿ, ಯಮನೂರ ಮೂಲಂಗಿ, ಸುರೇಶಗೌಡ, ಡಾ. ರಾಕೇಶ ಲಾಡ, ಅಜಯ ಕಡಪಟ್ಟಿ, ಮಹಾದೇವ ನ್ಯಾಮಗೌಡ, ಗಣೇಶ ಶಿರಗನ್ಬವರ, ಅಪ್ಪಾಸಾಬ ಮನಗೂಳಿ, ರಾಜೇಸಾಬ ಕಡಕೋಳ, ದೇವಲ ದೇಸಾಯಿ, ವಿಜಯಲಕ್ಷ್ಮೀ ಉಕುಮನಾಳ, ಪೂಜಾ ವಾಳ್ವೇಕರ, ರಮೇಶ ಆಲಬಾಳ, ಧರೆಪ್ಪ ತೇಲಿ, ಮಹಾದೇವ ಇಟ್ಟಿ, ಹನಮಂತ ಬಿರಾದಾರ, ಗೀತಾ ಸೂರ್ಯವಂಶಿ, ಇಂದುಮತಿ ಮಾನೆ, ಸಿ.ಟಿ.ಉಪಾಧ್ಯೆ, ನಂದು ಗಾಯಕವಾಡ ಹಲವರು ಇದ್ದರು.


ಸುದ್ದಿ ಓದಿ