ಜಮಖಂಡಿ

ವಿದ್ಯಾರ್ಥಿನಿ ನೇಹಾಗೆ ಸನ್ಮಾನ

ವಿದ್ಯಾರ್ಥಿನಿ ನೇಹಾಗೆ ಸನ್ಮಾನ

ಲೋಕದರ್ಶನ ವರದಿ,

ಜಮಖಂಡಿ 01: ಈಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ ನೌಕರರ ಪತ್ತಿನ ಸಹಕಾರ ಸಂಘದ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಕೊಣ್ಣೂರ ಗ್ರಾಮದ ವಕೀಲ ನಿಂಗಪ್ಪ ಗಸ್ತಿ ಅವರ ಪುತ್ರಿ ನೇಹಾ ಗಸ್ತಿ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಶೇ.91.83 ರಷ್ಟು ಅಂಕ ಪಡೆದು ಸಾಧನೆಗೈದ ಹಿನ್ನಲೆಯಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ಬಾಗಲಕೋಟ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ತಾಂತ್ರಿಕ ಹಿರಿಯ ಅಧಿಕಾರಿ ಪಿಂಕಿ, ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ ನೌಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ,ಜಯರಾಮ, ಚಂದ್ರಕಲಾ ಎಂ,ಪಿ, ನಿಂಗಪ್ಪ ಗಸ್ತಿ ಅನೇಕರಿದ್ದರು. 


ಸುದ್ದಿ ಓದಿ