ಜಮಖಂಡಿ

ಕಾಂಗ್ರೆಸ್ ತಮ್ಮಗೆ ಗ್ಯಾರಂಟಿ ಇಲ್ಲದ ಗ್ಯಾರಂಟಿ ಕಾರ್ಡ ನೀಡುತ್ತಿದ್ದಾರೆ: ಮುನಿಸ್ವಾಮಿ

ಕಾಂಗ್ರೆಸ್ ತಮ್ಮಗೆ ಗ್ಯಾರಂಟಿ ಇಲ್ಲದ ಗ್ಯಾರಂಟಿ ಕಾರ್ಡ ನೀಡುತ್ತಿದ್ದಾರೆ: ಮುನಿಸ್ವಾಮಿ

ಲೋಕದರ್ಶನ ವರದಿ,

ಜಮಖಂಡಿ 21: ಕಾಂಗ್ರೆಸಿಗರು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ತಮ್ಮಗೆ ಗ್ಯಾರಂಟಿ ಇಲ್ಲದ ಗ್ಯಾರಂಟಿ ಕಾರ್ಡಗಳನ್ನು ನೀಡುತ್ತಿದ್ದಾರೆ. ಅದನ್ನು ಯಾರು ನಂಬಬೇಡಿ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ನಗರದ ಬಸವ ಭವನದಲ್ಲಿ ನಡೆದ ಜಿಲ್ಲಾ ಬಿಜೆಪಿ ಪಕ್ಷದ ಎಸ್.ಸಿ ಮೋರ್ಚಾ  ಸಮಾವೇಶದಲ್ಲಿ ಮಾತನಾಡಿದರು.

 ಮಾಜಿ ಸಿಎಂ ಸಿದ್ಧರಾಮಯ್ಯನವರು ಯಾವ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದೆ ಅತಂತ್ರ ಪರಿಸ್ಥಿತಿಯಲ್ಲಿ ಇದ್ದಾರೆ. ಮುಂದಿನ ಸಿಎಂ ಎಂದು ಹೇಳುವ ಸಿದ್ರಾಯ್ಯನವರು ಬದಾಮಿ ಕ್ಷೇತ್ರವನ್ನು ಅಭಿವೃದ್ಧಿ ಮಾಡದವರು ಮೂರು ಕಡೆಗಳಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಪ್ರಶ್ನೀಸಿದ ಅವರು. ಕಾಂಗ್ರೆಸ್ ಸುಡುವ ಮನೆಯಾಗಿದೆ. ಡಿಕೆಸಿ ಕಾಲು ಸಿದ್ರಾಮಯ್ಯ ಏಳೆದರೆ. ಇತ್ತ ಡಿಕೆಸಿ ಸಿದ್ರಾಮಯ್ಯನ ಕಾಲು ಏಳೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ. ದಲಿತರು, ಅಲ್ಪಸಂಖ್ಯಾತರರು ಬಗ್ಗೆ ಯಾವುದೇ ಅಭಿವೃದ್ಧಿಗಳ ಕೆಲಸ ಮಾಡದೆ. ಕೇವಲ ಓಟಬ್ಯಾಂಕ್ ಕೆಲಸ ಮಾಡಿದ್ದಾರೆಂದು ಲೇವಡಿ ಮಾಡಿದರು.

ಅಂಬೇಡ್ಕರ ಅವರ ಹೆಸರು ಹೇಳಿಕೊಂಡು ಮತವನ್ನು ಸೆಳೆಯುತ್ತಿದ್ದಾರೆ. ದಲಿತರಿಗೆ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರವರ ಶವ ಸಂಸ್ಕಾರಕ್ಕೆ 6,3 ಅಡಿ ಜಾಗವನ್ನು ನೀಡದ ಕಾಂಗ್ರೇಸಿಗರು. ಇವಾಗ ದಲಿತರು ನೆನಪಾಗುತ್ತಾರೆ. ಅಂಬೇಡ್ಕರನ್ನು ಚುನಾವಣೆಯಲ್ಲಿ ಸೋಲಿಸಿದು ಕಾಂಗ್ರೇಸನವರು. ದಲಿತ ಕೇರಿಗೆ ಬಂದರೆ ಅವನ್ನು ನಂಬಬೇಡಿ. ವಿದ್ಯುತ್ ಉಚಿತವಾಗಿ ನೀಡುತ್ತೇವೆಂದು ಹೇಳುವರು. ಈ ಹಿಂದೆ ಡಿಕೆಸಿ ಸಚಿವರಾಗಿದ ಸಮಯದಲ್ಲಿ ಯಾಕೆ ಮಾಡಲಿಲ್ಲ ಎಂದು ಪ್ರಶ್ನೀಸಿದರು.

ದೇಶದ ಪ್ರಧಾನಿಯವರು ಯಾವ ಜಾತಿ ಕೇಳದೆ ಅಭಿವೃದ್ಧ್ದಿ ಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜ್ಯ ಮತ್ತು ಕೇಂದ್ರದಿಂದ ಸಾಕಷ್ಟು ಕೆಲಸಗಳು ಅಭಿವೃದ್ಧಿಯಾಗಿದ್ದಾವೆ. ಬಿಜೆಪಿ ಜಾತಿ,ಮತವನ್ನು ಕೇಳದ ಪಕ್ಷವಾಗಿದೆ. ಈ ಭಾರಿ ಮತ್ತೆ ನಿಮ್ಮ ಆಶರ್ೀವಾದದಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

ಬೆಂಗಳೂರು ಉತ್ತರ ಜಿಲ್ಲೆ ಪ್ರಧಾನ ಕಾರ್ಯದರ್ಶಿ  ಜಿ.ಎನ್.ಮಂಜುನಾಥ, ಮಾಜಿ ಶಾಸಕ ಶ್ರೀಕಾಂತ ಕುಲಕಣರ್ಿ, ಮಾಜಿ ವಿಪ ಸದಸ್ಯ ಜಿ.ಎಸ್.ನ್ಯಾಮಗೌಡ ಮಾತನಾಡಿದರು,

 ವೇದಿಕೆಯಲ್ಲಿ ಎಮ್.ಬಿ.ನ್ಯಾಮಗೌಡ, ಪ್ರಕಾಶ ಕಾಳೆ, ಡಾ ವಿಜಯಲಕ್ಷ್ಮೀ ತುಂಗಳ, ರಾಜು ನಾಯ್ಕರ, ಈಶ್ವರ ಆದೆಪ್ಪನವರ, ಯಲ್ಲಪ್ಪಾ ನಾರಾಯಣಿ, ಅಜೇಯ ಕಡಪಟ್ಟಿ, ಯಮನೂರ ಮೂಲಂಗಿ, ಮಹೇಶ ಮಾದರ, ಸಾಗರ ಬಂಡಿ, ನಾಗಪ್ಪಾ ಅಂಬಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಇದ್ದರು. ಪ್ರಕಾಶ ಹುಗ್ಗೇನವರ ನಿರೂಪಿಸಿದರು. ಶಿವಾನಂದ ಟವಳಿ ಸ್ವಾಗತಿಸಿದರು. ರಮೇಶ ಆಲಬಾಳ ವಂದಿಸಿದರು.


ಸುದ್ದಿ ಓದಿ