ಯರಗಟ್ಟಿ

ಪಾಮರರಿಗೆ ಆನಂದ ನೀಡುವ ಮಾಡಮಗೇರಿ ಶ್ರೀ ಪರಮಾನಂದ

ಪಾಮರರಿಗೆ ಆನಂದ ನೀಡುವ ಮಾಡಮಗೇರಿ ಶ್ರೀ ಪರಮಾನಂದ
ಶ್ರೀ ಮಾಡಮಗೇರಿ ಪರಮಾನಂದ ದೇವರ ಗದ್ದುಗೆ

ಲೋಕದರ್ಶನ ವರದಿ

ನಾಳೆಯಿಂದ ಸುಕ್ಷೇತ್ರ ಮಾಡಮಗೇರಿ ಶ್ರೀ ಪರಮಾನಂದ ಜಾತ್ರಾ ಮೂಹೋತ್ಸವ ಹಾಗೂ ಭವ್ಯ ರಥೋತ್ಸವ

ಯರಗಟ್ಟಿ: ತಾಲೂಕಿನ ಪುಣ್ಯಕ್ಷೆತ್ರ ಮಾಡಮಗೇರಿ ಗ್ರಾಮದಲ್ಲಿ ಸದ್ಗುರು ಅಲ್ಲಿಪುರ ಮಹಾದೇವ ತಾತನವರ ಹಾಗೂ ಗದುಗಿನ ವೀರೇಶ್ವರ ಪುಣ್ಯಾಶ್ವರಮದ ಶ್ರೀ ಪುಟ್ಟರಾಜ ಗವಾಯಿಗಳ ಕೃಪಾಶೀರ್ವಾದದಿಂದ ಶನಿವಾರ ದಿ.25 ರಿಂದ ಬುಧವಾರ ದಿ. 1 ರವರೆಗೆ ಜರುಗುವ 12ನೇ ವರ್ಷದ ಈ ಜಾತ್ರೆಯು ಶ್ರೀ ಪರಮಾನಂದ ದೇವರು ಶಿವನ ಇನ್ನೊಂದು ಪ್ರತಿರೂಪ ಶ್ರೀಕ್ಷೇತ್ರವು ಜಿಲ್ಲೆಯಾದ್ಯಂತ ಪರಿಚಿತವಿದ್ದು. ಸಾವಿರಾರು ಭಕ್ತರು ಪ್ರತಿ ಅಮವಾಸ್ಯೆಗೆ ಹಾಗೂ ಪ್ರತಿ ಸೋಮವಾರ ಶ್ರಾವಣ ಸೋಮವಾರರಂದು ಇಲ್ಲಿ ಭಕ್ತರು ಸೇರುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಅನ್ಯೋನ್ಯವಾದ ಆನಂದ ನೀಡುವ ದೇವರು ಮಾಡಮಗೇರಿ ಶ್ರೀ ಪರಮಾನಂದ. 

ಶ್ರಾವಣ ಮಾಸದಂದು ಪೂರ್ಣ ಭಜನೆ, ಭಕ್ತರಿಂದ ತುಂಬಿ ತುಳುಕುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಪ್ರತಿರೂಪವಾದ ಶಿವನ ಕ್ಷೇತ್ರವೇ ಈ ಮಾಡಮಗೇರಿ ಶ್ರೀ ಪರಮಾನಂದ ದೇವರು. ಈ ಕ್ಷೇತ್ರದಲ್ಲಿ ನೀರಿನ ವ್ಯವಸ್ಥೆ ಇನ್ನಿತರ ಹಲವಾರು ಸೌಲಭ್ಯಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ ಭಕ್ತಾಧಿಗಳಿಗೆ ಪರಮಾನಂದನ ಮೆಚ್ಚುಗೆಯಾಗಿದೆ. ಪರಮಾನಂದನ ಕೃಪಾಶೀವರ್ಾದದ ಬಲದಿಂದ ಎಲ್ಲ ಕಾರ್ಯಗಳು ಸುಚಿತಿತವಾಗಿ ನೆರವೇರುವುದರಿಂದ ಇಲ್ಲಿಗೆ ಬರುವ ಭಕ್ತರು ತಮ್ಮ ಸಾಧ್ಯವಾದ ಮಟ್ಟಿಗೆ ಧನ ಸಹಾಯ ನೀಡಿ ಶ್ರೀ ಕ್ಷೇತ್ರದ್ರ ಅಭಿವೃಧ್ಧಿಗೆ ಶ್ರಮಿಸುತ್ತಾರೆ.

ಮಾಡಮಗೇರಿ ಶ್ರೀ ಪರಮಾನಂದ ಕ್ಷೇತ್ರದ ಹಿನ್ನೆಲೆ:- ಮಾಡಮಗೇರಿ ಹಾಗೂ ಸುತ್ತುಮುತ್ತಲಿನ ಗ್ರಾಮಗಳ ಜನರು ಶಿವ ಪರಮಾತ್ಮನೆಂದು ವಿಗ್ರಹ ಪೂಜಿಸುತ್ತಾ ಬಂದಿದ್ದಾರೆ. ಹಾವು ಕಡಿದಾಗ ಆ ವಿಗ್ರಹ ಪೂಜಿಸಿದ ವಿಗ್ರಹದ ತೀರ್ಥ ಕುಡಿದಾಗ ವಿಷವೇರದೇ ಗುಣಮುಖರಾದ ಎಸ್ಟೋ ಉದಾಹರಣೆಗಳು ಇವೆ. ಈಗಲೂ ಸಹ ಈ ಕ್ಷೇತ್ರದಲ್ಲಿ  ಯಾವುದೇ ರೀತಿಯ ಗಾಳಿ, ಭೂತ ಹಾಗೂ ದೇವ್ವ ಹಿಡಿದವರನ್ನು ಗುಣಪಡಿಸುವ ಶಕ್ತಿ ಹೊಂದಿರುವದು ಮತ್ತು ಮೇಲಾಗಿ ಹಾವು ಕಚ್ಚಿದವರಿಗೆ ಆ ಶಿವನ ಕೃಪೆಯಿಂದ ಯಾವ ಆಪಾಯವು ಇಲ್ಲಿಯವರಿಗೆ ಆಗಿಲ್ಲಾ ಆದ್ದರಿಂದ ಈ ಮಾಡಮಗೇರಿ ಪರಮಾನಂದನ ದೇವರ ದೇವಸ್ಥಾನಕ್ಕೆ ಹಲವಾರು ಊರುಗಳಿಂದ ಭಕ್ತರು ಆಗಮಿಸುತ್ತಾರೆ. ದೇವರಲ್ಲಿ ಭಕ್ತಾಧಿಗಳು ಬೇಡಿಕೊಂಡು ತೀರ್ಥ ಕುಡಿದರೆ  ಯಾವುದೇ ತರಹದ ರೋಗ ರುಜಿಣುಗಳು ಬರುವುದಿಲ್ಲ, ದೇವರಲ್ಲಿ ಪತ್ರಿ ಹಚ್ಚಿ ನೀರು, ಭೂಮಿ ಖರೀದಿ, ವಧು ವರರ ಸಮಸ್ಯೆ ಎನೇ ಇದ್ದರು ದೇವರಲ್ಲಿ ಕೇಳಿದ್ದು ನಂಬಿಕೆಗಳು ಸಹ ಇವೆ. ಶ್ರೀಕ್ಷೇತ್ರ ವಿಶಾಲವಾದ ಪ್ರಾಂಗನ ಹೋದಿದ್ದು ಸುತ್ತಲೂ ಇರುವ ವನಸಿರಿಯಿಂದ  ಸಂಸಾರದ ವಿವಿಧ ಚಿಂತೆ ಕೆಲಸ ತಾಪತ್ರೆಯಗಳನ್ನು ಮರೆತು ಆನಂದ ನಿಡುವ ಈ ಕ್ಷೇತ್ರವು ಸುಪ್ರಸಿದ್ದವಾಗಿದೆ. 

ಪರಮಾನಂದ ಜಾತ್ರೆಯ ನಿಮತ್ಯ ಕಾರ್ಯಕ್ರಮಗಳು: ಶನಿವಾರ ದಿ.25 ರಂದು ಬೆಳಿಗ್ಗೆ 5 ಘಂಟೆಗೆ ಹೋಮ ಹಾಗೂ ಬೆಳಿಗ್ಗೆ 6.30 ಕ್ಕೆ ತೇರಿನ ಕಳಸಾರೋಹನ ರಾತ್ರಿ 10 ಘಂಟೆಗೆ ನಾಗೇಶಿ (ಕುರಟ್ಟಿ ತಂಡ) ಹಾಗೂ ಹರದೇಶಿ (ಕುಳ್ಳೂರ ತಂಡ) ಇವರಿಂದ ಗೀ ಗೀ ಪದಗಳು ಜರುಗುವವು. ರವಿವಾರ ದಿ.26 ರಂದು ಬೆಳಿಗ್ಗೆ 7.30 ಕ್ಕೆ ಪರಮಾನಂದ ಮಠದಿಂದ ಗಜರಾಜ, ಕುಂಭ ಮೇಳ, ನಂದಿಕೊಲು, ಹಾಗೂ ವಿವಿಧ ವಾದ್ಯಮೇಳದೊಂದಿಗೆ ಪಲ್ಲಕ್ಕಿ ಉತ್ಸವವು ಪರಮಾಣಂದ ದೇವಸ್ಥಾನದವರೆಗೆ ಜರುಗುವುದು. ರಾತ್ರಿ 10 ಘಂಟೆಗೆ ಶ್ರೀ ಬಸವೇಶ್ವರ ನಾಟ್ಯ ಸಂಘದ ವತಿಯಿಂದ ಪೌರಾಣಿಕ ನಾಟಕ ಜರಗುವುದು. ಸೋಮವಾರ ದಿ.27 ರಂದು ಬ್ರಾಹ್ಮೀ ಮಹೂರ್ತದಲ್ಲಿ ಪರಮಾನಂದ ದೇವರಿಗೆ ಮಹಾ ರುದ್ರಾಭಿಷೇಕ ಬೆಳಿಗ್ಗೆ 7.30 ಕ್ಕೆ ಶ್ರೀ ವೀರಭದ್ರೇಶ್ವರ ಗುಗ್ಗಳೋತ್ಸವ ಜರುಗುವುದು. ಬೆಳಿಗ್ಗೆ 10.30 ಕ್ಕೆ ಪರಮಾನಂದ ದೇವರ ಕಲ್ಯಾಣೋತ್ಸವ ಮಧ್ಯಾಹ್ನ 3 ಘಂಟೆಗೆ ಶ್ರೀ ವೇ,ಮೂ, ಕಲ್ಲಯ್ಯಾ ಅಜ್ಜನವರ ತುಲಾಭಾರ ಕಾರ್ಯಕ್ರಮ ಜರುಗುವುದು. ಸಾಯಂಕಾಲ 5 ಘಂಟೆಗೆ  ಪರಮಾನಂದ ದೇವರ ಹಗ್ಗ ವಿಲ್ಲದ ಮಹಾರಥೋತ್ಸವ ಜರುಗುವುದು. ರಾತ್ರಿ 10 ಗಂಟೆಗೆ ರೈತನ ಹೆಸರು ನಾಡಿನ ಉಸಿರು ಎಂಬ ಸಾಮಾಜಿಕ ನಾಟಕ ಜರುಗುವುದು. ಮಂಗಳವಾರ ದಿ.28 ರಂದು ಸಂಜೆ 6 ಘಂಟೆಗೆ ಲಕ್ಷ ದೀಪೋತ್ಸವ ರಾತ್ರಿ 8 ಘಂಟೆಗೆ ಮಾಡಮಗೇರಿ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತೀಕ ಕಾರ್ಯಕ್ರಮಗಳು ಜರುಗುವವು. ಬುಧವಾರ ದಿ. 1 ರಂದು ಶ್ರೀ ಪರಮಾನಂದ ದೇವರ ರಥೋತ್ಸವದ ಕಳಸ ಇಳಿಸುವರೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುವುದು.

ಪ,ಪೂ,ವೇ,ಮೂ ಕಲ್ಲಯ್ಯ ಅಜ್ಜನವರ ದಿವ್ಯಸಾನಿಧ್ಯ ವಹಿಸುವರು, ಗ್ರಾಪಂ ಅಧ್ಯಕ್ಷೆ ಮಂಜುಳಾ ಬಂಡಿವಡ್ಡರ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಯಾಗಿ ವಿಶ್ವಾಸ ವೈದ್ಯ, ವಿರುಪಾಕ್ಷ ಮಾಮನಿ ಹಾಗೂ ಸೌರಭ ಚೋಪ್ರಾ ಕಾರ್ಯಕ್ರಮಕ್ಕೆ ಪಾಲ್ಗೋಳ್ಳುವರು.  



ಸುದ್ದಿ ಓದಿ