ಸಾಮಾನ್ಯ ಸಭೆ ಗದ್ದಲ, ಗಲಾಟೆ ಸದಸ್ಯರ ಮಧ್ಯೆ ಮಾತಿನ ತಕಮಕಿ
ರಾಣೇಬೆನ್ನೂರು 18: ಗುರುವಾರ ವಾಣಿಜ್ಯ ನಗರದ ನಗರಸಭೆಯ ಸರ್. ಎಂ. ವಿಶ್ವೇಶ್ವರಯ್ಯ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆ ಆರಂಭದಿಂದಲೂ ಪರಸ್ಪರ ಗದ್ದಲ ಗಲಾಟೆ ನಡೆದು, ಈ ಮಧ್ಯ ನಗರಸಭೆಯ ಅಧಿಕಾರಿಗಳ ಜನ ವಿರೋಧಿ, ಮತ್ತು ಕರ್ತವ್ಯ ನಿರ್ಲಕ್ಷತನದ ವಿರುದ್ಧ ಬಂಡಾಯವೆದ್ದ ಕೆಲ ಸದಸ್ಯರು, ಜನಸೇವೆಯ ವಿಳಂಬ ಧೋರಣೆಯನ್ನು ಖಂಡಿಸಿದರು. ಅದರ ಜೊತೆಗೆ ನಿಗದಿತ ಸಮಯದಲ್ಲಿ ಕಚೇರಿಗೆ ಹಾಜರಾಗಿ, ನಮ್ಮ ಪಾರಿನ ಕರ್ತವ್ಯವನ್ನು ಸರಿಯಾದ ಸಮಯಕ್ಕೆ ಮಾಡಿಕೊಡಲು ಸೂಚಿಸಿದರು. ಮೂಲಭೂತ ಸೌಲಭ್ಯಗಳ ಸರಬರಾಜು, ಸಮರ್ಪಕತೆ ಇಲ್ಲದೆ, ಜನರು ರೂಸಿ ಹೋಗಿದ್ದಾರೆ ಎಂದು ಆರೋಪಿಸಿ, ಎಳೆ ಎಳೆಯಾಗಿ ಬಿಡಿಸಿಟ್ಟ ಸದಸ್ಯರು ತೀರ್ವ ಪರಾಟೆಗೆ ಮುಂದಾಗಿದ್ದರು.
ದಿನದ 24 ಸರಬರಾಜು ಆಗುತ್ತಿದೆ. ಆದರೆ ಹೊಸದಾಗಿ ಪಡೆಯುವ ನಳ ಜೋಡಣೆಗೆ 13500, ಆಕರಣೆ ಜನಸಾಮಾನ್ಯರಿಂದ ಭರಣ ಮಾಡಲು ಸಾಧ್ಯವಾಗುವುದಿಲ್ಲ, ಇದನ್ನು ಪುನಹ ಪರಿಶೀಲಿಸಿ ವಿಶೇಷ ಸಭೆ ಕರೇದು, ಹೊರೆಯಾಗದಂತೆ, ಆಕರಿಸಲು ನಿರ್ಧರಿಸಬೇಕು ಅಲ್ಲದೆ ಕೇವಲ ಸೇವಾ ಶುಲ್ಕ ಮಾತ್ರ ಪಡೆದು, ನಳ ಸಂಪರ್ಕ ನೀಡಬೇಕು ಎಂದು ಸದಸ್ಯರು ಓಕ್ಕೊರಲ ಆಗ್ರಹಿಸಿದರು. ಬೀದಿ ದೀಪಗಳ ನಿರ್ವಹಣೆ ಸರಿಯಾಗಿಲ್ಲ, ಗುತ್ತಿಗೇ ದಾರ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಎಂದು ಆರೋಪಿಸದ ಸದಸ್ಯರಿಗೆ ಸ್ಪಷ್ಟೀಕರಣ ನೀಡಲು ಮುಂದಾದ ಅಧಿಕಾರಿಗಳಿಗೇ ಸ್ವತಹ ಪೌರಾಯುಕ್ತರೆ ನೇರವಾಗಿ ತಮ್ಮ ಮನೆಯ ಮುಂಭಾಗದಲ್ಲಿಯೇ ಬೀದಿ ದೀಪಗಳೆಲ್ಲ ಹೀಗಿರುವಾಗ ಸ್ಪಷ್ಟೀಕರಣದ ಮಾತೇಕೆ, ಎಂದು ತರಾಟೆಗೆ ತೆಗೆದುಕೊಂಡರು. ನಗರ ದೊಡ್ಡದಿದೆ ಅಷ್ಟೇ ದೊಡ್ಡ ಹೆಸರಿದೆ ಆದರೆ ಆ ಹೆಸರನ್ನು ಕೆಡಿಸಲು ಸ್ವಚ್ಛತೆಯ ವಾತಾವರಣ ಇಲ್ಲದ ಕಾರಣವೇ ಎಲ್ಲರ ಬಾಯಲ್ಲಿ ನಡೆಯುವಂತಾಗಿದೆ ಯಾರೋ ಮಾಡಿದ ತಪ್ಪಿಗೆ ವಾರ್ಡ್ಗ ಳ ಸದಸ್ಯರು, ಶಾಪಕ್ಕೆ ಗುರಿಯಾಗಬೇಕಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜನಸಾಮಾನ್ಯರಿಗೆ ಹೊರೆಯಾಗುವ ಯಾವುದೇ ಯೋಜನೆಗಳನ್ನು ಜಾರಿಗೆ ತರಲು ಆಡಳಿತ ಸದಸ್ಯರು ಒಪ್ಪಿಗೆ ನೀಡುವುದಿಲ್ಲ ಪೈಪ್ ಲೈನ್ ಮೂಲಕ ಅನಿಲ್ ಸಂಪರ್ಕ ಕಲ್ಪಿಸಲು ಮುಂದಾಗಿರುವ ಇಂಧನ ಇಲಾಖೆ ನಗರಸಭೆ ಯಾವುದೇ ಅನುಮತಿ ಪಡೆದಿಲ್ಲ ಇದರ ಚರ್ಚೆ ಇದೀಗ ಬೇಡ ಮುಂದಕ್ಕೆ ಹಾಕಿರಿ ಎಂದು ಸ್ಪಷ್ಟಪಡಿಸಿದರು, ಗದ್ದಲ ಗಲಾಟೆಗಳ ಮಧ್ಯೆ ಹಲವು ಕಾಮಗಾರಿಗಳ ಕುರಿತು ಚರ್ಚೆ ನಡೆದು ಒಪ್ಪಿಗೆ ಸೂಚಿಸಲಾಯಿತು. ಬಹು ಚರ್ಚೆ ಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಮಲ್ಲಿಕಾಜರ್ುನ ಅಂಗಡಿ, ಪ್ರಕಾಶ್ ಬರಡಿಕಟ್ಟಿ ನಿಂಗರಾಜ ಕೋಡಿಹಳ್ಳಿ ಶಶಿಧರ್ ಬಸೇನಾಯ್ಕರ್, ಎ. ಎಂ. ಕಂಬಳಿ,ಸಿದ್ದಪ್ಪ ಬಾಗಿಲವರ, ಪ್ರಕಾಶ್ ಪೂಜಾರ್, ಸೇರಿದಂತೆ ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು. ಅಧ್ಯಕ್ಷ ರೂಪಾ ಚಿನ್ನಿಕಟ್ಟಿ , ಉಪಾಧ್ಯಕ್ಷ ಪ್ರಭಾವತಿ ತಿಳುವಳಿ, ಮತ್ತು ನಗರಸಭೆಯ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು