ಜಮಖಂಡಿ

ಪ್ರವೇಶ ಪರೀಕ್ಷಾ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಭೇಟಿ

ಪ್ರವೇಶ ಪರೀಕ್ಷಾ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಭೇಟಿ

ಲೋಕದರ್ಶನ ವರದಿ,

ಜಮಖಂಡಿ 29: ನಗರದ ಕಡಪಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಇಲಕಲ್ಲ ಸಹಯೋಗದಲ್ಲಿ ನಡೆದ 2023-24ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿ ದಾಖಲಾತಿಗಾಗಿ ನಡೆದ ಪ್ರವೇಶ ಪರೀಕ್ಷಾ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸನ್ನವರ ಭೇಟಿ ನೀಡಿದರು.

ಆದರ್ಶ ವಿದ್ಯಾಲಯದ 6ನೇ ತರಗತಿ ದಾಖಲಾತಿಗಾಗಿ ನಡೆದ ಪ್ರವೇಶ ಪರೀಕ್ಷೆ ನಗರದ ಕಡಪಟ್ಟಿ ಪ್ರೌಢ ಶಾಲೆ, ಸರಕಾರಿ ಬಾಲಕರ ಪದವಿಪೂರ್ವ ಕಾಲೇಜು, ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಜ್ಞಾನಗಂಗೋತ್ರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸೇರಿದಂತೆ ಐದು ಕೇಂದ್ರಗಳನ್ನು ಪರೀಕ್ಷೆಗಳು ನಡೆದವು. ಆದರ್ಶ ವಿದ್ಯಾಲಯದ 6ನೇ ತರಗತಿ ದಾಖಲಾತಿಗಾಗಿ ನಡೆದ ಪ್ರವೇಶ ಪರೀಕ್ಷೆಗೆ 764 ವಿದ್ಯಾರ್ಥಿಗಳು, 630 ವಿದ್ಯಾರ್ಥಿನಿಯರು ಸಹಿತ 1394 ವಿದ್ಯಾರ್ಥಿಗಳಲ್ಲಿ 731 ವಿದ್ಯಾರ್ಥಿಗಳು, 609 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 1340 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯಶಿಕ್ಷಕರಾದ ಎನ್.ಎಂ.ಚೌರ, ಎ.ಎ.ಪಾನಪರೋಶ, ಮಾತೇಂಶ ನರಸನಗೌಡರ, ಎಚ್.ಎಂ.ಅರಕೇರಿ, ಆರ್.ಎಸ್.ತಳ್ಳಿ ಪಾರದರ್ಶಕ ಪರೀಕ್ಷೆಗೆ ಎಲ್ಲ ರೀತಿ ಸಿದ್ದತೆ ಮಾಡಿದ್ದರು.



ಸುದ್ದಿ ಓದಿ