ಜಮಖಂಡಿ

ಇಂದಿನ ದಿನಮಾನದಲ್ಲಿ ಮಹಿಳೆಯರಿಗೆ ಶಿಕ್ಷಣವೆ ಮುಖ್ಯ: ತುಂಗಳ

ಇಂದಿನ ದಿನಮಾನದಲ್ಲಿ ಮಹಿಳೆಯರಿಗೆ ಶಿಕ್ಷಣವೆ ಮುಖ್ಯ: ತುಂಗಳ

ಲೋಕದರ್ಶನ ವರದಿ,

ಜಮಖಂಡಿ : 19: ಮಹಿಳೆಯರಿಗೆ ಶಿಕ್ಷಣವೆ ಮುಖ್ಯವಾಗಿದೆ. ಉನ್ನತ ಶಿಕ್ಷಣವನ್ನು ಪಡೆದ ಮಹಿಳೆಯರು ಮಾತ್ರ ಮುಂದೆ ಬರಲು ಸಾಧ್ಯ. ಉಳಿದವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂದಿನ ದಿನಮಾನದಲ್ಲಿ ಶಿಕ್ಷಣವೆ ಮುಖ್ಯವಾಗಿದೆ ಎಂದು ಡಾ,ವಿಜಯಲಕ್ಷ್ಮೀ ತುಂಗಳ ಹೇಳಿದರು.

ಕುಂಚನೂರ ರಸ್ತೆಯಲ್ಲಿರುವ ಹೇಮರೆಡ್ಡಿ ಕಲ್ಯಾಣ ಮಂಟಪದಲ್ಲಿ ನಡೆದ ರೆಡ್ಡಿ ಸಮುದಾಯದ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಮಂಡಳದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಸಂಘಟನೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದರೂ ಸಹ ಒಗ್ಗಟ್ಟು ಮತ್ತು ಶಿಸ್ತಿನಿಂದ ಮಹಿಳಾ ಮಂಡಳವನ್ನು ಬೆಳೆಸುತ್ತಾರೆ ಎಂಬ ನಂಬಿಕೆ ಇದೆ. ಸರಕಾರದಿಂದ ಸಾಕಷ್ಟು ಮಹಿಳೆಯರಿಗೆ ಉದ್ಯೋಗ ಮಾಡಲು ಸಾಲವನ್ನು ನೀಡುತ್ತಿದೆ. ಅದರ ಸದುಪಯೋಗವನ್ನು ಪಡೆದುಕೊಂಡು ಸ್ವಯಂ ಉದ್ಯೋಗವನ್ನು ಮಾಡಿ. ಉಪಜೀವನವನ್ನು ನಡೆಸಿಕೊಂಡು ಹೋಗಬಹುದು. ಇಲ್ಲಿರುವ ಮಹಿಳೆಯರು ಸಂಘಟನೆಯನ್ನು ಬೆಳೆಸಿ ಸಮಾಜ ಸೇವೆ, ಬಡವರಿಗೆ ಶಿಕ್ಷಣ ನೀಡುವದು, ಮಹಿಳೆಯರಿಗೆ ಉದ್ಯೋಗ ನೀಡುವದು ಹೀಗೆ ಸಮಾಜಕ್ಕೆ ಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

ಡಾ. ರೇಣುಕಾ ಸೋನವಾಲ್ಕರ, ಲಕ್ಷ್ಮೀ ನಾಯಕ, ತನುಜಾ ಸಂಕರೆಡ್ಡಿ, ಶಾರದಾ ತುಳಸಿಗೇರಿ, ಹೇಮಾ ಜೈನಾಪುರ, ನಂದಾ ಪಾಟೀಲ, ನಾಗರತ್ನಾ ನಾಗರೆಡ್ಡಿ, ಜ್ಯೋತಿ ದೇವರೆಡ್ಡಿ, ಕುಮುದಾ ಉದಪುಡಿ, ಅಕ್ಷತಾ ಸಂಗನ್ನವರ, ಸುಜಾತಾ ಚೌರೆಡ್ಡಿ ಹಾಗೂ ನಗರದ ವಿವಿಧ ಮಹಿಳಾ ಸಂಘದ ಅದ್ಯಕ್ಷ ಹಾಗೂ ಉಪಾದ್ಯಕ್ಷರು ಇದ್ದರು. ಸಂಘದ ಅಧ್ಯಕ್ಷೆನಿ ಸುಧಾ ಉದಪುಡಿ ಪ್ರಾಸ್ತಾವಿಕ ಮಾತನಾಡಿದರು. ರೋಹಿಣಿ ಉದಪುಡಿ ನಿರೂಪಿಸಿದರು, ಜ್ಯೋತಿ ಪಾಟೀಲ ಸ್ವಾಗತಿಸಿದರು, ಪುಷ್ಪಾ ಶಿರೋಳ ವಚನ ಪಠಣ ಮಾಡಿದರು, ಶ್ವೇತಾ ಬಣ್ಣದ ವಂದಿಸಿದರು.


ಸುದ್ದಿ ಓದಿ