ಜಮಖಂಡಿ

ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವ ಕೆಲಸ ಅಧಿಕಾರಿಗಳ ಮೇಲಿದೆ: ಕಾಮಗೌಡ

ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವ ಕೆಲಸ ಅಧಿಕಾರಿಗಳ ಮೇಲಿದೆ: ಕಾಮಗೌಡ

ಲೋಕದರ್ಶನ ವರದಿ,

ಜಮಖಂಡಿ: 31: ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವ ಕೆಲಸ ಅಧಿಕಾರಿಗಳ ಮೇಲಿದೆ. ಪರೀಕ್ಷೆ ಕೇಂದ್ರಗಳಲ್ಲಿ ಸಂಪೂರ್ಣವಾಗಿ ಮೊಬೈಲ್ ನಿಷೇಧ ಮಾಡಲಾಗಿದೆ. ಯಾವುದೇ ಅಧಿಕಾರಿ ಕೂಡ ಪರೀಕ್ಷೆ ಸಮಯದಲ್ಲಿ ಬಳಕೆ ಮಾಡುವಂತಿಲ್ಲ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.

ನಗರದ ಕಡಪಟ್ಟಿ  ಬಸವೇಶ್ವರ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಗಳ ಸಿದ್ಧತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾ. 31 ರಿಂದ ಎ. 13ರವರೆಗೆ ನಡೆಯಲಿರುವ ಪರೀಕ್ಷೆಗಳನ್ನು ಯಾವುದೇ ಆಕ್ಷಪಣೆಗಳಿಲ್ಲದೆ ನೇಮಕ ಆಗಿರುವ ಅಧಿಕಾರಿಗಳ ಕೆಲಸ ಮಾಡಬೇಕು. ರಾಜ್ಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಘೋಷಣೆ ಆಗಿರುವ ಎರಡು ಕರ್ತವ್ಯಗಳನ್ನು ನಿಭಾಯಿಸಬೇಕು. ನಕಲು ಮುಕ್ತ ಪರೀಕ್ಷೆ ನಡೆಸಲು ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸನ್ನವರ ಮಾತನಾಡಿ, ಜಮಖಂಡಿ ಮತ್ತು ರಬಕವಿ-ಬನಹಟ್ಟಿ ಅವಳಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳಿಗಾಗಿ ಒಟ್ಟು 28 ಪರೀಕ್ಷಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅವಳಿ ತಾಲೂಕಿನಲ್ಲಿ ಒಟ್ಟು 8334 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, ಅದರಲ್ಲಿ 4058 ವಿದ್ಯಾರ್ಥಿಗಳು, 4276 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಮುಖ್ಯ ಅಧಿಕ್ಷಕರಾಗಿ 28 ಅಧಿಕಾರಿಗಳು, ಉಪ ಮುಖ್ಯ ಅಧಿಕ್ಷಕರಾಗಿ 5, ಕಸ್ಟೋಡಿನಗಳಾಗಿ 28, ಮಾರ್ಗಾಧಿಕಾರಿಗಳಾಗಿ 9, ವಿಕ್ಷಕರಾಗಿ 28, ಸ್ಥಾನಿಕ ಜಾಗೃತ ದಳದಲ್ಲಿ 28, ಸಂಚಾರಿ ಜಾಗೃತ ದಳದಲ್ಲಿ 15, ಮೊಬೈಲ್ ಸ್ವಾಧೀನಾಧಿಕಾರಿಗಳಾಗಿ 28, ಕೊಠಡಿ ಮೇಲ್ವಿಚಾರಕರಾಗಿ 580 ಮತ್ತು 90 ಜನ ನೌಕರರನ್ನು ಪರೀಕ್ಷೆ ಅವಧಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಉಷ್ಣಾಂಶ ಪರೀಕ್ಷೆ ಉಪಕರಣ ಅಳವಡಿಕೆ ಮಾಡಲಾಗಿದೆ. ಪರೀಕ್ಷೆ ಕೇಂದ್ರ 200 ಮೀಟರ ಸುತ್ತಲು ನಿರ್ಬಂಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಪರೀಕ್ಷೆ ಕೊಠಡಿಗಳಲ್ಲಿ ಎಲ್ಲ ಮಾಧ್ಯಮದವರಿಗೆ ಅನುಮತಿ ಇರುವದಿಲ್ಲ. ಪರೀಕ್ಷೆ ಕೇಂದ್ರದ ಸುತ್ತಮುತ್ತಲು ಪೊಲೀಸ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗದಿಂದ ಆಗಮಿಸುವ ವಿದ್ಯಾಥರ್ಿಗಳಿಗೆ ಉಚಿತ ಬಸ್ ಸಂಚಾರ ಮಾಡಲಾಗಿದ್ದು, ಪರೀಕ್ಷೆ ಬರೆಯುವ ವಿದ್ಯಾಥರ್ಿಗಳು ಪ್ರವೇಶ ಪತ್ರ ತೋರಿಸಬೇಕು. ನಿರ್ಭಯದಿಂದ ಪರೀಕ್ಷೆ ಬರೆಯಲು ಎಲ್ಲ ರೀತಿ ಸಿದ್ಧತೆ ಮಾಡಲಾಗಿದೆ ಎಂದರು.

ವೇದಿಕೆಯಲ್ಲಿ ಜಮಖಂಡಿ ತಹಶೀಲ್ದಾ ಸದಾಶಿವ ಮಕ್ಕೋಜಿ, ರಬಕವಿ-ಬನಹಟ್ಟಿ ಉಪತಹಶೀಲ್ದಾರ ಸದಾಶಿವ ಕಾಂಬಳೆ, ತಾ.ಪಂ.ಅಧಿಕಾರಿ ರಾಮ ಅಗ್ನಿ, ಆರೋಗ್ಯ ಇಲಾಖೆ ಹಿರಿಯ ಮೇಲ್ವಿಚಾರಕ ಎಂ.ಎಚ್.ಕಡ್ಲಮಟ್ಟಿ, ವಾಯುವ್ಯ ಸಾರಿಗೆ ಘಟಕ ವ್ಯವಸ್ಥಾಪಕ ಮಟೋಳಿ, ಕ್ರೈಂ ಪಿಎಸ್.ಐ ಸುನಗದ ಸಹಿತ ಹಲವರು ಇದ್ದರು.


ಸುದ್ದಿ ಓದಿ