ಪಿಎಸ್ಐ ಮಾತ್ರ ಬಿಜೆಪಿ ಕಾರ್ಯಕರ್ತನಂತೆ ವರ್ತಿಸಿದ್ದು ಖಂಡನೀಯ: ಶಾಸಕ ನ್ಯಾಮಗೌಡ
ಲೋಕದರ್ಶನ ವರದಿ,
ಜಮಖಂಡಿ: 20: ನಗರಸಭೆಯಲ್ಲಿ ಠರಾವು ಮಾಡಿ, ಪರವಾಣಿಗೆ ಪಡೆದು ನಗರದ ಮುಧೋಳ ರಸ್ತೆಯಲ್ಲಿ ಮೌಲಾನಾ ಅಬುಲ್ ಕಲಾಂ ವೃತ್ತ ನಿರ್ಮಾಣವಾಗಿದೆ, ಅದನ್ನು ಮರು ನಿರ್ಮಾಣ ಸಂದರ್ಭದಲ್ಲಿ ಪಿಎಸ್ಐ ನನ್ನ ಜೊತೆ ಅನುಚಿತವಾಗಿ ವರ್ತಿಸಿ, ಬಿಜೆಪಿಯವರ ಕೈಗೊಂಬೆಯಂತೆ ಕರ್ತವ್ಯ ನಿರ್ವಹಿಸಿ, ಪಿಎಸ್ಐ ಬಿಜೆಪಿಯ ಕಾರ್ಯಕರ್ತನಾಗಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿದ್ದಾರೆ, ಅವರನ್ನೂ ಕೂಡಲೇ ಅಮಾನತ್ತು ಮಾಡಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಆಗ್ರಹಿಸಿದರು.
ನಗರದ ರಮಾ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಸಾಮಾನ್ಯ ಸಭೆಯಲ್ಲಿ 19-12-2000ರಂದು ಮೌಲಾನಾ ಅಬುಲ್ ಕಲಾಂ ಆಜಾಧ ಅವರ ವೃತ್ತ ನಿರ್ಮಾಣಕ್ಕೆ ಸರ್ವ ಸದಸ್ಯರು ಸೇರಿ ಠರಾವು ಮಾಡಿದ್ದಾರೆ, 2007ರಲ್ಲಿ ಪರವಾಣಿಗೆ ಪಡೆದುಕೊಂಡಿದ್ದಾರೆ, ರಸ್ತೆ ಅಗಲೀಕರಣ ಸಂದರ್ಭದಲ್ಲಿ ನಾಮಫಲಕವನ್ನು ರಸ್ತೆ ಬದಿಗೆ ಅಳವಡಿಸಲಾಗಿತ್ತು. ರಸ್ತೆ ಕಾಮಗಾರಿ ಮುಗಿದ ನಂತರ ವೃತ್ತಕಾಗಿ ಮೀಸಲಿಟ್ಟ ಸ್ಥಳದಲ್ಲಿ ನಾಮಫಲಕ ಅಳವಡಿಸುವಕ್ಕೆ ಯಾವ ಸಮುದಾಯ, ಸಂಘಟನೆಯವರ ವಿರೋಧ ಇಲ್ಲದಿದ್ದರೂ ಪಿಎಸ್ಐ ಬಸವರಾಜ ಕೊಣ್ಣೂರೆ ಅವರೊಬ್ಬರೆ ಅಡ್ಡಿಪಡಿಸಿ ನನ್ನ ಜೋತೆ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದರಿಂದ ನಾನು ಸ್ವಲ್ಪ ಜೋರಾಗಿ ತಿಳಿ ಹೇಳಬೇಕಾಯಿತು, ಒಬ್ಬ ಅಧಿಕಾರಿಯಾಗಿ ಜನಪ್ರತಿನಿಧಿ ಜೊತೆಗೆ ಹೇಗೆ ವರ್ತಿಸಬೇಕು ಹಾಗೆ ವರ್ತಿಸಬೇಕು ಅದೇ ಸಂದರ್ಭದಲ್ಲಿ ಡಿವೈಎಸ್ಪಿ ಅವರ ಜೊತೆಗೂ ನಾನು ಸೌಮ್ಯವಾಗಿಯೇ ಕೇಳಿಕೊಂಡಿದ್ದೆನೆ. ಪಿಎಸ್ಐ ಮಾತ್ರ ಬಿಜೆಪಿ ಕಾರ್ಯಕರ್ತನಂತೆ ವರ್ತಿಸಿದ್ದು ಖಂಡನೀಯ ಎಂದರು.
ಬಿಜೆಪಿಯವರು ಎಸ್ಆರ್ಎ ಕ್ಲಬ್ ಹತ್ತಿರ ಮಾಡಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸದ ಪಿಎಸ್ಐ ಟಿಪ್ಪು ಸುಲ್ತಾನ ಸರ್ಕಲ್ನಲ್ಲಿನ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದನ್ನು ಕೇಳಿದಾಗ ನನಗೆ ತಪ್ಪು ಮಾಹಿತಿ ನೀಡಿದ್ದರು, ಸರ್ವಜನಾಂಗದ ಶಾಂತಿಯ ತೋಟದಂತಿರುವ ಜಮಖಂಡಿಯಲ್ಲಿ ಪಿಎಸ್ಐ ಬಸವರಾಜ ಕೊಣ್ಣೂರೆ ಜಾತಿಯ ವಿಷ ಬೀಜ ಬಿತ್ತುತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ನಾನು ಎಸ್ಪಿ ಅವರಿಗೆ ಮನವಿ ನೀಡಿದ್ದೆನೆ ಐಜಿ ಅವರಿಗೆ ಪತ್ರ ಬರೆದಿದ್ದೆನೆ, ಅವರ ಮೇಲೆ ಕ್ರಮ ಜರುಗಿಸದೆ ಇದ್ದರೆ ಮುಂದೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಪುಟ್ಟ ಬಾಲಕನ ಮಾತು ಕೇಳಿ ತಮ್ಮ ಗೌರವನ್ನು ಹಾಳು ಮಾಡಿಕೊಳ್ಳಬಾರದು, ರಾಯಲ್ ಪ್ಯಾಲೇಶ್ ಶಾಲೆಗೆ ಕೇಂದ್ರ ಅರಣ್ಯ ಇಲಾಖೆಯೆ 1 ಹೆಕ್ಟರ್ ಜಾಗೆಯನ್ನು ಮಂಜೂರಿ ಮಾಡಿದೆ ಒಂದು ಗುಂಟೆ ಜಾಗೆಯನ್ನು ಅತಿಕ್ರಮ ಮಾಡಿಕೊಂಡಿಲ್ಲ, ದಾಖಲೆಗಳನ್ನು ನೋಡಿ ಆರೋಪ ಮಾಡಬೇಕು ಅದನ್ನು ಬಿಟ್ಟು ಪುಟ್ಟ ಬಾಲಕನಂತೆ ಸುಳ್ಳು ಹೇಳಿ ಆರೋಪ ಮಾಡುವುದು ತಪ್ಪು. ತಾವು ಒಬ್ಬ ಮಾಜಿ ಶಾಸಕರಾಗಿ ಸಣ್ಣವರಂತೆ ಮಾತನಾಡಬಾರದು ಎಂದು ಟೀಕಿಸಿದರು.
ಜಮಖಂಡಿ ಸಕ್ಕರೆ ಕಾರ್ಖಾನೆಗೆ ಕೆಆಯ್ಎಡಿಬಿ ಅವರೆ ಜಮಿನನ್ನು ನೀಡಿರುತ್ತಾರೆ ಅದಕ್ಕೆ ಆ ಸಂಸ್ಥೆಗೆೆ ಹಣ ಸಂದಾಯ ಮಾಡಲಾಗಿದೆ, 30 ವರ್ಷ ಬಿಟ್ಟು ಈಗ ಕೇಳಿ. ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ. ಹೇಗಾದರು ಮಾಡಿ ಚುನಾವಣೆಯಲ್ಲಿ ಗೆಲವು ಸಾಧಿಸಬೇಕೆಂದಿದ್ದಾರೆ. ಜಮಖಂಡಿ ಸಕ್ಕರೆ ಕಾರ್ಖಾನೆಗೆ ನಿರ್ಮಾಣದಲ್ಲಿ ಎಲ್ಲ ರೈತರಿಗೆ ಭೂಮಿ ಪರಿಹಾರ ಕೆಆಯ್ಎಡಿಬಿ ಅವರೆ ನೀಡಿರುತ್ತಾರೆ. ಅದರಲ್ಲಿ ನಮ್ಮ ಪಾತ್ರ ಇರುವುದಿಲ್ಲ. ಅಷ್ಟು ತಿಳಿಯದ ಮಾಜಿ ಶಾಸಕ ಪುಟ್ಟ ಬಾಲಕನಂತೆ ಮಾತನಾಡುವುದನ್ನು ಬಿಡಬೇಕು. ಅವರು ಎಲ್ಲ ದಾಖಲೆಗಳನ್ನು ಓದಿ ಆರೋಪ ಮಾಡಬೇಕು ಎಂದರು.
ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ನನ್ನ ನಾಲ್ಕೂವರೆ ವರ್ಷದ ಅವಧಿಯಲ್ಲಿ 1632 ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯ ಮಾಡಿದ್ದೆನೆ. ತಾವು ಜನಸೇವೆ ಮಾಡುತ್ತೆನೆ ಎಂದು ಬಂದವರು ಕ್ಷೇತ್ರಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ಜನರು ತಿರ್ಮಾಣಿಸುತ್ತಾರೆ ಎಂದರು.
1,ಕೋಟಿ ರೂ, ಅನುದಾನದ ಗುರುದೇವ ರಾನಡೆ ಭವನ ಪೂರ್ಣಗೊಳಿಸಲು ಆಗಲಿಲ್ಲ ನಾವು 21 ಕೋಟಿ ರೂ ವೆಚ್ಚದ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಪೂರ್ಣಗೊಳಿಸಿದ್ದೆವೆ, ಆದರೂ ಗುರುದೇವ ರಾನಡೆ ಭವನಕ್ಕೆ 50 ಲಕ್ಷ ರೂ ಅನುದಾನ ನೀಡುವಂತೆ ಸಚಿವರಿಗೆ ಪತ್ರ ನೀಡಿದ್ದೆನೆ ಎಂದರು.
ಆನಂದ ನ್ಯಾಮಗೌಡ ಹಿಂದು ವಿರೋಧಿ ಎಂದು ಬಿಂಬಿಸುತಿದ್ದಾರೆ ಕನಕ ವೃತ್ತ ನಿರ್ಮಾಣ ಮಾಡುವುದು, ಬಸವ ಜಯಂತಿ ಆಚರಣೆ, ಹಲಗೆ ಹಬ್ಬ, ಗಣೇಶ ಉತ್ಸವ, ಹೊಳಿ ಉತ್ಸವ ಆಚರಣೆ ಸೇರಿದಂತೆ ಪ್ರತಿಯೊಂದು ಹಿಂದು, ಮುಸ್ಲಿಂ ಹಬ್ಬಗಳಲ್ಲಿ ಸರಿಸಮಾನವಾಗಿ ಭಾಗಿಯಾಗಿದ್ದೆನೆ, ನನ್ನನ್ನು ವಿರೋಧಿ ಎನ್ನುವವರೆ ಯಾವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಭೀತು ಪಡಿಸಬೇಕು. ಆನಂದ ನ್ಯಾಮಗೌಡ ಒಡುವ ಕುದುರೆ ಅದನ್ನು ತಡೆಯುವ ಷಡ್ಯಂತ್ರ ಮಾಡಲು ಬಿಜೆಪಿಯವರು ಹೊರಟಿದ್ದಾರೆ ಅದನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ ಎಂದರು.
ಚುನಾವಣೆ ಸಮಿಪಿಸುತ್ತಿದ್ದಂತೆ ಕೊಮು- ಗಲಭೆ ಎಬ್ಬಿಸುವ ಕುತಂತ್ರ ಮಾಡುತ್ತಾರೆ, ಜಮಖಂಡಿಯಲ್ಲಿ ಪಕ್ಷಾತೀತ, ಜಾತ್ಯಾತಿತವಾಗಿ ಎಲ್ಲ ಜನಾಂಗದವರು ಸೇರಿ ಆಚರಿಸುವ ಸಂಪ್ರದಾಯ ಇದೆ, ಆದರೆ ಇದಕ್ಕೆ ಪುಷ್ಟಿಕೊಟ್ಟು ಸಂಬಂಧಗಳನ್ನು ಹಾಳು ಮಾಡುವ ಷಡ್ಯಂತ್ರ ಮಾಡುತಿದ್ದಾರೆ ಎಂದು ಹರಿಹಾಯ್ದರು.
*ನಮಗೆ ಕೋಮು - ಗಲಭೆ ಹಚ್ಚುವ ಅಧಿಕಾರಿಗಳು ಬೇಕಿಲ್ಲ, ಅಂತಹ ಅಧಿಕಾರಿಗಳನ್ನು ಬಿಜೆಪಿಯವರೆ ತಂದಿದ್ದಾರೆ, ಬಿಜೆಪಿ ಕೆಲ ಕಾರ್ಯಕರ್ತರು ತಮ್ಮ ವಿರುದ್ದ ಬರೆದ ಪತ್ರಿಕೆಗಳನ್ನು ಸುಡುವದರ ಮೂಲಕ ಗುಂಡಾಗಿರಿ ಸಂಸ್ಕೃತಿ ಮೆರೆದಿದ್ದಾರೆ, ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡುವ ಕ್ರಮ ಖಂಡನಿಯ. ರೌಡಿಶಿಟರ್ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೈ ಮುಗಿಯುತ್ತಾರೆ, ಇದು ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದರು.
-ಸುದ್ದಿಗೋಷ್ಠಿಯಲ್ಲಿ ಜವಳಿ ನಿಗಮದ ಮಾಜಿ ಉಪಾಧ್ಯಕ್ಷ ನಜೀರ ಕಂಗನೊಳಿ,
ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ದಾನೇಶ ಘಾಟಗೆ, ಈಶ್ವರ ಕರಬಸನ್ನವರ, ಈಶ್ವರ ವಾಳೆನ್ನವರ, ಅರ್ಜುನ ದಳವಾಯಿ, ರಫಿಕ ಬಾರಿಗಡ್ಡಿ, ಸಿದ್ದು ಮೀಶಿ, ಕಿರಣ ಪಿಸಾಳ, ಪರಮಾನಂದ ಗೌವರೋಜಿ, ರವಿ ಯಡಹಳ್ಳಿ, ದಿಲಾವರ ಶಿರೋಳ, ಕಾಸಿಂಸಾಬ ಅವಟಿ, ಬಸವರಾಜ ನ್ಯಾಮಗೌಡ, ಎ.ಆರ್.ಶಿಂಧೆ, ಮಲ್ಲಪ್ಪ ಚಾಮೋಜಿ, ರಿಯಾಜ ಅವಟಿ ಇತರರು ಇದ್ದರು.