ಬಿಜೆಪಿ ಕಾರ್ಯಕರ್ತೆಗೆ ಖಾಸಗಿ ಚಾನಲ್ ವರದಿಗಾರ ಬ್ಲಾಕ್ಮೇಲ್ ಆರೋಪಿಯ ಬಂಧನ
ಲೋಕದರ್ಶನ ವರದಿ
ಜಮಖಂಡಿ: ಖಾಸಗಿ ಚಾನಲ್ ವರದಿಗಾರನೆಂದು ಹೇಳಿಕೊಂಡು ಓಡಾಡುತ್ತಿದ್ದ ಜಮಖಂಡಿಯ ಬಂದೇನವಾಜ ಸರಕಾವಸ ಬಿಜೆಪಿ ಕಾರ್ಯಕರ್ತೆಗೆ ಅಶ್ಲೀಲ್ ವಿಡಿಯೋ ಇದೆ ಎಂದು ಬ್ಲಾಕಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿ ಪೀಡಿಸುವ ಹಿನ್ನಲೆಯಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಖಾಸಗಿ ಶಾಲೆಯ ಶಿಕ್ಷಕಿ, ಬಿಜೆಪಿ ಮಹಿಳಾ ನಗರ ಮಂಡಲ ಅಧ್ಯಕ್ಷೆ ಗೀತಾ ಸೂರ್ಯವಂಶಿಗೆ ನಿಮ್ಮ ಅಶ್ಲೀಲ್ ವಿಡಿಯೋ ಇದೆ ಎಂದು ಅವರ ಮೊಬೈಲ್ಗೆ ಎಡಿಟ್ ಮಾಡಿದ ಪೋಟೋದಲ್ಲಿ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಬಿಜೆಪಿ ಕಾರ್ಯಕರ್ತೆಯ ರಾಸಲೀಲೆ ಎಂದು ತಲೆಬರಹ ನೀಡಿ ಅಸಂಬದ್ದ ಹಾಡನ್ನು ಹಾಕಿ ಕಳಿಸಿ. ನಿಮ್ಮ ರಾಸಲೀಲೆ ವಿಡಿಯೋ ವೈರಲ್ ಮಾಡಬಾರದು ಎಂದರೆ ಹಣ ನೀಡಿ ಇಲ್ಲದಿದ್ದರೆ ವೈರಲ್ ಮಾಡುವದಾಗಿ ತಿಳಿಸಿದ್ದಾನೆ.
ಈ ಕುರಿತು ಜಮಖಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ನಾಗರಾಜ ಖಿಲಾರೆ ಆರೋಪಿಯನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.