ಯುವ ಕ್ರೀಡಾಕೂಟ ವಿಜೇತರ ವಿವರ

ಯುವ ಕ್ರೀಡಾಕೂಟ ವಿಜೇತರ ವಿವರ

ಬಳ್ಳಾರಿ 11: ಭಾರತ ಸಕರ್ಾರದ ನೆಹರು ಯುವ ಕೇಂದ್ರ, ಜಿಲ್ಲಾ ಯುವ ಸಮನ್ವಯಾಧಿಕಾರಿಗಳ ಕಾಯರ್ಾಲಯ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಸಾಯಿರಾಂ ಯುವಕರ ಸೇವಾ ಸಂಘ ಇವರ ಸಂಯುಕ್ತಾಶ್ರದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಅಂತರ ಯುವ ಸಂಘಗಳ ಜಿಲ್ಲಾ ಯುವ ಕ್ರೀಡಾಕೂಟದ ಫಲಿತಾಂಶ ಪ್ರಕಟಿಸಲಾಗಿದೆ.

    ಕ್ರೀಡಾಕುಟವನ್ನು ಸೋಮಸಮುದ್ರ ಗ್ರಾಮದ ಕಾಶಿ ವಿಶ್ವ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಯುವಕರಿಗಾಗಿ ನಡೆದ 100ಮೀ. ಓಟದ ಸ್ಪಧರ್ೆಯಲ್ಲಿ ಎನ್.ಜನಾರ್ಧನ್ ಅವರಿಗೆ ಪ್ರಥಮ ಸ್ಥಾನ, ದ್ವಿತೀಯ ದೊಡ್ಡಲಿಂಗ ಹಾಗೂ ತೃತಿಯ ಸ್ಥಾನ ಪಿ.ನಂದೇಶ್ ಅವರು ಪಡೆದರು. ಕಬ್ಬಡ್ಡಿಯಲ್ಲಿ 20 ತಂಡಗಳು ಭಾಗವಹಿಸಿ ಪ್ರಥಮ ಸ್ಥಾನವನ್ನು ಸೋಮಸಮುದ್ರದ ಸಾಯಿರಾಂ ಯುವಕ ತಂಡ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಯರ್ರಂಗಳಿಗೆ ಗ್ರಾಮದ ವಾಯು ಭದ್ರತಾ ತಂಡ ಪಡೆದುಕೊಂಡಿತು. ವಾಲಿಬಾಲ್ ವಿಭಾಗದಲ್ಲಿ ಸೋಮಸಮುದ್ರದ ಫ್ರೇಂಡ್ಸ್ ತಂಡ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರೆ, ದ್ವಿತೀಯಾ ಸ್ಥಾನವನ್ನು ಕಪ್ಪಗಲ್ ತಂಡ ಪಡೆದುಕೊಂಡಿತು. ಇದರೊಂದಿಗೆ ಅಗ್ಗ ಜಗ್ಗಾಟ, ಕೋಕೋ, ಹಾಗೂ ಇತರೆ ಆಟಗಳನ್ನು ನಡೆಸಲಾಯಿತು.

     ಈ ಸಂದರ್ಭದಲ್ಲಿ ಸೋಮಸಮುದ್ರ ಗ್ರಾ.ಪಂ ಅಧ್ಯಕ್ಷರಾದ ಲಕ್ಷ್ಮೀದೇವಿ ಅಧ್ಯಕ್ಷತೆ ವಹಿಸಿದ್ದರು. ಉಪಧ್ಯಾಕ್ಷರು, ಸದಸ್ಯರುಗಳು, ಎಸ್ ರಾಮಚಂದ್ರ, ಬಿ.ಮಂಜುನಾಥ ಗೌಡ, ಎನ್ ಉಮೇಶ, ಎನ್.ದೊಡ್ಡ ಲಿಂಗಪ್ಪ, ಎಂ ಶಿವ ಪ್ರಸಾದ, ಸಾಯಿರಾಂ ತಂಡದ ಸದಸ್ಯರು ಸೇರಿದಂತೆ ಇತರರು ಇದ್ದರು.

 

ಸುದ್ದಿ ಓದಿ