ಯಲ್ಲಾ ಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ

ಯಲ್ಲಾ ಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ

ಬಳ್ಳಾರಿ 15: ಹಂದಿಹಾಳು ಗ್ರಾಮದ ಶ್ರೀ ಮಹದೇವತಾತನವರ ಮಠದಲ್ಲಿ ಪ್ರತಿ ವರ್ಷದಂತೆ 23ನೇ ವರ್ಷದ ಮಹಾಮಹಿಮ ಮುಗುಳುಕೋಡುದ ಮಹಾಬೆಳಕು ಶ್ರೀ ಪ್ರಭು ಎಲ್ಲ ಲಿಂಗೇಶ್ವರ ಪುರಾಣ ಪ್ರವಚನದಲ್ಲಿ ವಿಶೇಷ ಧಾಮರ್ಿಕ ಉಪನ್ಯಾಸಕರಾಗಿ ಆಗಮಿಸಿದ ಕೆ. ಪರಶುರಾಮ್ ಹಂದ್ಯಾಳು ರವರು ಸೇರಿರುವ ಭಕ್ತಾದಿಗಳಿಗೆ ಮಾನವ ಜನ್ಮದ ವಿಶೇಷತೆ ಕುರಿತು ಮಾತನಾಡಿದರು, ಶ್ರೀ ಶಿವಪ್ಪತಾತನವರು ರಚಿಸಿರುವ ಪರತತ್ವ ಕಾವ್ಯದ ಕೆಲವು ತತ್ವಗಳ ಮುಖಾಂತರ ಮಾನವ ಜನ್ಮದ ಅವಶ್ಯಕತೆ ಏನು ಮಾನವ ಜಗತ್ತಿಗೆ ಏತಕ್ಕಾಗಿ ಬಂದ, ಏನು ಮಾಡಬೇಕು, ಇಲ್ಲಿಂದ ಮತ್ತೆ ಪರಮಾತ್ಮನಲ್ಲಿ ಹೇಗೆ ಐಕ್ಯವಾಗಬೇಕು ಇದನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ, ಗುರುಗಳ ಭೋದಾಮೃತ ಮನುಷ್ಯನಿಗೆ ಅತ್ಯವಶ್ಯಕ.  ಜಗತ್ತಿಗೆ ಬಂದಿರುವ ಮಹಾತ್ಮರು, ಶರಣರು, ಸಂತರು, ಧಾರ್ಷನಿಕರು, ಪ್ರವಾದಿಗಳು, ಪ್ರವಕ್ತರು, ಎಲ್ಲಾ ಮಹನಿಯರು, "ಗುರುವಿನ ಗುಲಾಮನಾಗುವ ತನಕ, ದೊರಯದಣ್ಣ ಮುಕುತಿ" ಎನ್ನುವ ದಾಸರ ವಾಣಿಯಂತೆ ಮುಕ್ತಿ ಪಡೆದುಕೊಂಡರು. ಅಂತಹ ಮಹಾತ್ಮರೇ ಗುರುವಿನ ಹೊಂದಿದರೆ ನಮ್ಮಂತಹ ಸಾಮಾನ್ಯ ಜನರಿಗೆ ಗುರುವಿನ ಅವಶ್ಯಕತೆ ಬೇಕೇ ಬೇಕು ಎನ್ನುತ್ತ ಇಂದಿನ ಯುವ ಪೀಳಿಗೆ ಮೊಬೈಲ್ ಟಿ.ವಿ.ಗಳ ಹಾವಳಿಗೆ ದಾಸರಾಗಿ ಸಂಬಂಧಗಳ ಬೆಲೆಯನ್ನು ಅರಿಯದೆ ಸಮಾಜವನ್ನು ದುಸ್ತಿತಿಗೆ ತರುತ್ತಿದ್ದಾರೆ, ಆದ್ದರಿಂದ ಪ್ರಜ್ಞಾವಂತ ಮಾನವರಾದ ನಾವು ಇಂತಹ ಪುರಾಣ ಪುಣ್ಯ ಕಥೆ ಚಿಂತನಗೋಷ್ಠಿಗಳು ಸಂಗೀತ ಸಾಹಿತ್ಯದೊಂದಿಗೆ ಸಮಾಜ ಪರಿವರ್ತನೆ ಕೆಲಸದಲ್ಲಿ ತೊಡಗಬೇಕೆಂದರು. ಸೇರಿರುವ ಭಕ್ತಾದಿಗಳು ಇವರ ಉಪನ್ಯಾಸವನ್ನು ಕೇಳಿ ನಮ್ಮೂರಿನಲ್ಲಿ ಇಂತಹ ಪ್ರತಿಭೆಗಳಿದ್ದಾರೆಂದು ಪ್ರಶಸ್ಮಿಸಿದ್ದು ವಿಶೇಷವಾಗಿತ್ತು. ಹಾಗೂ ಮಠದ ಟ್ರಸ್ಟ್ ನಿಂದ ಕೆ. ಪರಶುರಾಮ್ ಹಂದ್ಯಯಾಳುರವರನ್ನು ಗೌರವಪೂರ್ವಕ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಚರ್ೇಡು ಮಲ್ಲಪ್ಪತಾತನವರ ಪುತ್ರ ಅಶ್ವತ್ತಾಮ ಗುರುಗಳು ಸಾನಿದ್ಯವನ್ನು ವಹಿಸಿದ್ದರು, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಶಾಲಾ ಶಿಕ್ಷಕರು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.



ಸುದ್ದಿ ಓದಿ