ಯರಗಟ್ಟಿ

ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಯಕ್ಷಗಾನ ಅತ್ಯಂತ ಪ್ರಮುಖ: ಮಂಗಲಾ ಮೆಟಗುಡ್ಡ

ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಯಕ್ಷಗಾನ ಅತ್ಯಂತ ಪ್ರಮುಖ: ಮಂಗಲಾ ಮೆಟಗುಡ್ಡ

ಯರಗಟ್ಟಿ 05: ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ ಹಾಗೂ ಹೊಟೇಲ್ ಮಾಲೀಕರ ಸಂಘದವರು, 32 ವರ್ಷಗಳಿಂದ ಇಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಕಸಾಪ ಜಿಲ್ಲಾಧ್ಯಕ್ಷ ಮಂಗಲಾ ಮೆಟಗುಡ್ಡ ಹೇಳಿದರು. 


ಸ್ಥಳೀಯ ಶ್ರೀ ದುರದುಂಡಿದ್ದರ ಮಠದಲ್ಲಿ ಕಸಾಪ ತಾಲೂಕು ಘಟಕ ಮತ್ತು ಹೋಟೆಲ್ ಮಾಲೀಕರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. 


ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಾಹಿತ್ಯಾ ಆಲದಕಟ್ಟಿ ಮಾತನಾಡಿ, ನಿರ್ದಿಷ್ಟ ಗುರಿ ಇಟ್ಟುಕೊಂಡು ಸತತ ಕಠಿಣ ಪರಿಶ್ರಮ ಪಟ್ಟರೆ ಸಾಧನೆ ಶಿಖರ ಏರಬಹುದು. ಶ್ರಮದ ಪ್ರತಿಫಲವೇ ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ. ಯಾರೂ ಕೂಡಾ ಶಿಕ್ಷಣವಂಚಿತರಾಗದಂತೆ ಪಾಲಕರು ನೋಡಿಕೊಳ್ಳಬೇಕು ಎಂದರು. 


ಎ. ಕೆ. ಜಮಾದಾರ ಹೋಟೆಲ್ ಉದ್ಯಮದಲ್ಲಿ ನೂರಾರು ಜನರಿಗೆ ಕೆಲಸ ನೀಡಿ ಸಾಕಷ್ಟು ಸಾಧನೆ ಮಾಡಿದ ಬಹಳಷ್ಟು ಜನರು ಇದ್ದಾರೆ. ಆದ್ದರಿಂದ ಮಕ್ಕಳನ್ನು ಒಂದೇ ರೀತಿಯಾಗಿ ನೋಡದೆ ವಿಭಿನ್ನ ದೃಷ್ಟಿಕೋನದಿಂದ ಬೆಳೆಸಿ ಸಾಧನೆಗೆ -ಪ್ರೇರೇಪಿಸಬೇಕು ಅಲ್ಲದೆ ಕಳೆದ 32 ವರ್ಷಗಳಿಂದ ಯರಗಟ್ಟಿ ಪಟ್ಟಣದಲ್ಲಿ ನಮ್ಮ ಹೊಟೇಲ್ ಮಾಲಕರ ಸಂಘದಿಂದ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡು ಪ್ರಾಚೀನ ಕಾಲದ ಕಲೆಯಾದ ಯಕ್ಷಗಾನ ಉಳಿಸಿ ಬೆಳೆಸುತ್ತಿದ್ದಾರೆ ಎಂದರು. 


ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ತಾಲೂಕು ಕಸಾಪ ಅಧ್ಯಕ್ಷ ಟಿ. ಎಂ. ಕಾಮಣ್ಣವರ, ಪಪಂ ಸದಸ್ಯ ಅಜಿತಕುಮಾರ ದೇಸಾಯಿ, ಮಹಾಂತೇಶ ಜಕಾತಿ, ವಿಶಾಲಗೌಡ ಪಾಟೀಲ, ರಾಘವೇಂದ್ರ ಮಯ್ಯ, ಜೆ. ರತ್ನಾಕರ ಶೆಟ್ಟಿ, ರವಿ ಶೆಟ್ಟಿ, ವಿ. ಎಂ. ಮರಡಿ, ಶಿವಕುಮಾರ ಜಕಾತಿ, ಆಶಾ ಪರೀಟ, ಡಾ. ರಾಜಶೇಖರ ಬಿರಾದಾರ, ಡಾ. ಕುಮಾರ ದಾಸರ, ಎಸ್‌. ಕೆ. ಗ್ರುಪ್‌ನ ಸದಸ್ಯರು ಇತರರು ಇದ್ದರು. 


ಸುದ್ದಿ ಓದಿ