ಯಕ್ಷಗಾನ, ಬಯಲಾಟ ಪ್ರದರ್ಶನ: ಪ್ರಶಸ್ತಿ ಪ್ರದಾನ ಸಮಾರಂಭ
ಜಮಖಂಡಿ 28: ನಗರದ ಬಸವ ಭವನದಲ್ಲಿ ಹೋಟೆಲ್ ಮಾಲೀಕರ ಸಂಘ ಹಾಗೂ ಕಾನಿಪ ಜಮಖಂಡಿ ಸಹಯೋಗದೊಂದಿಗೆ ಯಕ್ಷಗಾನ, ಬಯಲಾಟ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಮಹಾಗಣಪತಿ ಪ್ರವಾಸಿ ಯಕ್ಷಗಾನ ಹಾಲಾಡಿ, ಕುಂದಾಪೂರ ತಾಲ್ಲೂಕಿನ ಕಲಾವಿದರಿಂದ ರಂಗನಾಯಕಿ ಕಲೆೆ ಮೂಲಕ ವಿಜಯನಗರ ಸಾಮ್ರಾಜ್ಯದ ಕಥಾಭಾಗವನ್ನು ಯಕ್ಷಗಾನ ಮೂಲಕ ಪ್ರದರ್ಶನ ನೀಡಿದರು. ಬಾಲಕಿ ವೈಷ್ಣವಿ ಶೆಟ್ಟಿ ಯಕ್ಷಗಾನ ನೃತ್ಯ ಗಮನ ಸೆಳೆಯಿತು. ಯಕ್ಷಗಾನ, ನೃತ್ಯ, ಸಂಗೀತ, ನಾಟಕ, ಭಾರವಾದ ವೇಷಭೂಷಣಗಳನ್ನು ತೊಟ್ಟು ಮುಖವೆಲ್ಲ ಬಣ್ಣ ಬಳೆದು ಕಣ್ಣಿನಲ್ಲೇ ಭಾವನೆ ವ್ಯಕ್ತಪಡಿಸಿ ಕಾಲಿನಲ್ಲಿ ಗೆಜ್ಜೆ ಧರಿಸಿ ಗೆಜ್ಜೆಯ ನಾದದ ಮೂಲಕ ಜನರ ಮನಗೆಲ್ಲುವ ಕಲೆ ಗಮನ ಸೆಳೆಯಿತು.
ಕಳೆದ 20 ವರ್ಷಗಳಿಂದ ನಗರದ ಹೋಟೆಲ್ ಮಾಲೀಕರ ಸಂಘ ಉತ್ತರಕರ್ನಾಟಕ ಜನತೆಗೆ ಯಕ್ಷಗಾನದ ಸವಿ ನೀಡುತ್ತಿದೆ. ಹೋಟೆಲ ಉದ್ಯಮೆಯಲ್ಲ್ಲಿ ವಿಶೇಷ ಸಾಧಕ ನಗರದ ಆನಂದ ಭವನ ಹೋಟೆಲ ಮಾಲಿಕ ವಿಠ್ಠಲರಾವ ಗೋಪಾಲರಾವ ಪ್ರಭು ಅವರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಹೋಟೆಲ ಉದ್ಯಮಿ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಸಿಪಿಐ ಗುರುನಾಥ ಚವ್ಹಾಣ, ಕಾನಿಪ ಅಧ್ಯಕ್ಷ ಅಪ್ಪು ಪೋತರಾಜ, ಪಿಡಿಓ ಸಂಘದ ರಾಜ್ಯಾಧ್ಯಕ್ಷ ರಾಜು ವಾರದ, ಪತ್ರಕರ್ತ ಮೋಹನ ಸಾವಂತ, ಹೋಟೆಲ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ರಾಜು ಮೇಲಿನಕೇರಿ, ಸಂತೋಷ ಶೆಟ್ಟಿ, ಜಯವಂತ ಘಾಟಗೆ, ವಿಶ್ವನಾಥ ಶೆಟ್ಟಿ, ಆನಂದ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವಿನಯ ಶೆಟ್ಟಿ, ವಿಜಯ ಶೆಟ್ಟಿ, ಕೃಷ್ಣಾ ಶೆಟ್ಟಿ, ಗೀರೀಶ ನಾಯರಿ, ಬಾಬು ದೇವಾಡಿಗ, ಗೋವಿಂದ ಶೆಟ್ಟಿ, ಬಾಸ್ಕರ ದೇವಾಡಿಗ, ಸಂತೋಷ ಶೆಟ್ಟಿ, ಪ್ರೋ.ಗದ್ಯಾಳ ಅನೇಕರು ಇದ್ದರು.
ಪೋಟೋ : ಎ, ಬಿ, ಜಮಖಂಡಿ: ನಗರದ ಬಸವ ಭವನದಲ್ಲಿ ಆನಂದ ಭವನ ಹೋಟೆಲ ಮಾಲಿಕ ವಿಠ್ಠಲರಾವ ಗೋಪಾಲರಾವ ಪ್ರಭು ಅವರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಹೋಟೆಲ ಉದ್ಯಮಿ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.