ಜಮಖಂಡಿ

ರುದ್ರಾವಧೂತರ ಪುಣ್ಯಾರಾಧನೆ : ಪಲ್ಲಕ್ಕಿ ಉತ್ಸವ

ರುದ್ರಾವಧೂತರ ಪುಣ್ಯಾರಾಧನೆ : ಪಲ್ಲಕ್ಕಿ ಉತ್ಸವ

ಜಮಖಂಡಿ 25: ನಗರದ ರುದ್ರಾವಧೂತ ಮಠದಲ್ಲಿ ರುದ್ರಾವಧೂತರ ಪುಣ್ಯಾರಾಧನೆ ಹಾಗೂ ವೇದಾಂತ ಪರಿಷತ್ ಕಾರ್ಯಕ್ರಮದ ಮೂರನೇ ದಿನದ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. 

ಸಾವಿರಾರು ಮಹಿಳೆಯರು ತಲೆಯ ಮೇಲೆ ಬುಟ್ಟಿಯನ್ನು ಹೊತ್ತು ಚುರಮುರಿ ಹಾಗೂ ಖಾರಿಕ, ಬೆಂಡು-ಬೆತ್ತಾಸುಗಳನ್ನು ರುದ್ರಾವಧೂತರ ಪಲ್ಲಕಿಯ ಮೇಲೆ ಹಾರಿಸುತ್ತಿದ್ದರು. ಪಲ್ಲಕಿಯ ಸುತ್ತಮುತ್ತ ಕರಡಿ ಮಜಲು ಮತ್ತು ವಿವಿಧ ವಾದ್ಯಮೇಳಗಳ ಸದ್ದು ಜೋರಾಗಿ ಕಳುತ್ತಿತು. ಅಲ್ಲಿ ಸೇರಿದ ಸಾವಿರಾರು ಭಕ್ತರು ಓಂ ನಮಃ ಶಿವಾಯ ಎಂದು ಘೋಷಣೆಯನ್ನು ಕೂಗುತ್ತಿರುವದು ಸಾಮಾನ್ಯವಾಗಿತು. ರುದ್ರಾವಧೂತರ ಪಲ್ಲಕಿಯೋತ್ಸವ ವಿವಿಧ ಬಗ್ಗೆಯ ಹೂವಿನಿಂದ ಅಲಂಕಾರಿಸಿ ಶೃಂಗಾರಗೊಂಡು ಸುಂದರವಾಗಿ ಕಂಗೊಳಿಸುತ್ತಿತ್ತು.  

ಬೆಳಗ್ಗೆ ರುದ್ರಾವಧೂತ ಮಠದ ಪೀಠಾಧಿಕಾರಿ ಕೃಷ್ಣಾನಂದ ಅವಧೂತರು ಹಾಗೂ ಸಹಜಾನಂದ ಅವಧೂತರು ಸೇರಿದಂತೆ ವಿವಿಧ ಮಠಾಧೀಶರಿಂದ ಪ್ರವಚನ ಕಾರ್ಯಕ್ರಮ ಜರುಗಿತು. ನಂತರ ಮಠಕ್ಕೆ ಬಂದ ಸಾವಿರಾರೂ ಭಕ್ತರಿಂದ ಅನ್ನಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ರಾಯಚೂರ ಜಿಲ್ಲೆಯ ಭಕ್ತರು ಮೂರು ಸಾವಿರಕ್ಕೂ ಅಧಿಕವಾಗಿ ಬಿಳಿಜೋಳದ ಖಡಕ ರೊಟ್ಟಿಯ ಜೊತೆಗೆ ಪುಂಡಿಪಲ್ಲೆಯನ್ನು ತಂದು ಅನ್ನಪ್ರಸಾದಕ್ಕೆ ತಮ್ಮ ಸೇವೆಯನ್ನು ಅರ​‍್ಿಸಿದರು. 


ಸುದ್ದಿ ಓದಿ