ಅಥಣಿ

ರಾಘವೇಂದ್ರ ಸ್ವಾಮಿಗಳ ಆರಾಧನೆ: ವಿಜೃಂಭಣೆಯಿಂದ ರಥೋತ್ಸವ

ರಾಘವೇಂದ್ರ ಸ್ವಾಮಿಗಳ ಆರಾಧನೆ: ವಿಜೃಂಭಣೆಯಿಂದ ರಥೋತ್ಸವ

ಅಥಣಿ 22: ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಕೊನೆಯ ದಿನದ ಅಂಗವಾಗಿ ಸಾವಿರಾರು ಭಕ್ತರ ಜಯ ಘೋಷ, ಭಕ್ತಿ ಗೀತೆಗಳ, ದಾಸರ ಪದಗಳ ನಡುವೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.  

ಮೂರು ದಿನಗಳ ಆರಾಧನಾ ಮಹೋತ್ಸವ ದಲ್ಲಿ ರಾಯರು ವೃಂದಾವನ ಸ್ವೀಕರಿಸಿದ ಆರಾಧನಾ ಮಹೋತ್ಸವದಲ್ಲಿ ರಥೋತ್ಸವದ ಮೂಲಕ  ಕೊನೆಗೊಂಡಿತು. ಕೇದಿಗೆ, ಸೇವಂತಿ, ಮಲ್ಲಿಗೆ, ಗುಲಾಬಿ, ಕನಕಾಂಬರ, ಜಾಜಿ ಸೇರಿದಂತೆ ಅನೇಕ ವಿಧವಾದ ಹೂಗಳು, ಬಾಳೆಯ ದಿಂಡು, ತೆಂಗಿನ ಗರಿಗಳಿಂದ ಅಲಂಕೃತಗೊಂಡಿದ್ದ ರಥ ಭಕ್ತರ ಮನಸೂರೆ ಗೊಂಡಿತ್ತು. ಹೋಮ ಹವನಾದಿ, ಪೂರ್ಣಾಹುತಿ ನೀಡಿದ ನಂತರ ಪ್ರಾರಂಭಗೊಂಡ ರಥೋತ್ಸವ ತರುಣ ಭಕ್ತರ ಉತ್ಸಾಹ ಇಮ್ಮಡಿಗೊಳಿಸಿತ್ತು. ರಥಕ್ಕೆ ಟೆಂಗಿನ ಕಾಯಿ ಒಡೆದು ಉತ್ತತ್ತಿ, ಹಣ್ಣುಗಳನ್ನು ಅರ​‍್ಿಸುತ್ತಿರುವುದು ಸಾಮಾನ್ಯವಾಗಿತ್ತು.  

ಪ್ರಮುಖವಾಗಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮುಂಬೈ, ಬೆಂಗಳೂರು, ವಿಜಯಪುರ, ಧಾರವಾಡ, ಹುಬ್ಬಳ್ಳಿ, ಪುಣೆ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಿಂದ ಭಕ್ತರ ದಂಡು ಕೊನೆಯ ದಿನದ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿತ್ತು. ರಥೋತ್ಸವ ಪ್ರಾರಂಭವಾಗುತ್ತಿದ್ದಂತೆಯೇ ತರುಣ ಭಕ್ತರಿಂದ ವಾಸುದೇವ ಹರಿ ಎನ್ನುವ ಘೋಷಣೆ ಮುಗಿಲು ಮುಟ್ಟುವಂತಿತ್ತು. ಸುಧಾ ಭಜನಾ ಮಂಡಳದ ಸದಸ್ಯೆಯರಿಂದ, ಚಿಕ್ಕ ಮಕ್ಕಳಿಂದ ಕೋಲಾಟ ಸೇರಿದಂತೆ ಭಕ್ತರಿಂದ ಬಾರೋ ರಾಘವೇಂದ್ರಾ, ಊರಿಗೆ ಬಂದರೆ ರಾಘವೇಂದ್ರ ನಮ್ಮ ಕೇರಿಗೂ ಬಾ ರಾಘವೇಂದ್ರ, ಅಥಣಿಯೇ ಇಂದೆಮಗೆ ಮಂತ್ರಾಲಯ ಹೀಗೆ ಹತ್ತಾರು ಭಕ್ತಿ ಗೀತೆಗಳನ್ನು ಹಾಡಿ ಗಾಯನ ಸೇವೆ ಸಲ್ಲಿಸಿದರು.     ರಥೋತ್ಸವದ ನಂತರ ಸಾವಿರಾರು ಭಕ್ತರಿಗೆ ನಡೆದ ಅನ್ನಪ್ರಸಾದ ವಿತರಣೆಗೆ ನೂರಾರು ತರುಣ ಭಕ್ತರು ಟೊಂಕ ಕಟ್ಟಿ ನಿಂತಿದ್ದರು. ರಾಘವೇಂದ್ರ ಸ್ವಾಮಿಗಳ ಮಠದ ಮೂರು ದಿನಗಳ ಆರಾಧನಾ ಮಹೋತ್ಸವದ ಮೂರು ದಿನಗಳಲ್ಲಿ ಯಾವುದೇ ಭೇದ ಭಾವ ಇಲ್ಲದೆ 25 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯರಾದರು.  

ಉತ್ಸವ ಸಮಿತಿ ಅಧ್ಯಕ್ಷ ರಾಜು ಪಾಟೀಲ, ಟ್ರಸ್ಟ ಕಮೀಟಿಯ ಎಸ್‌.ವಿ.ಜೋಶಿ, ಅನೀಲ ದೇಶಪಾಂಡೆ, ಲಕ್ಷ್ಮೀಕಾಂತ ಕುಲಕರ್ಣಿ, ಅನೀಲ ದೇಶಪಾಂಡೆ (ಹಿಡಕಲ್) ಶ್ರೀನಿವಾಸ ಬಿಳ್ಳೂರ, ಗೋಪಾಲ ಪಾಟೀಲ ಸೇರಿದಂತೆ ಸಾವಿರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. 


ಸುದ್ದಿ ಓದಿ