ಇಂಡಿ

ಮನರೇಗಾ ಕಾಮಗಾರಿ ಸ್ಥಳದಲ್ಲಿ ವಿಶ್ವ ಯೋಗ ದಿನಾಚರಣೆ

ಮನರೇಗಾ ಕಾಮಗಾರಿ ಸ್ಥಳದಲ್ಲಿ ವಿಶ್ವ ಯೋಗ ದಿನಾಚರಣೆ

ಲೋಕದರ್ಶನ ವರದಿ  

ಇಂಡಿ 21 : ತಾಲೂಕಿನ ಇಂಗಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದ ಹತ್ತಿರ ಕೆರೆ ಹೂಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದ್ದು ಒಟ್ಟು 40 ಜನ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ. ಸದರಿ ಕಾಮಗಾರಿ ಸ್ಥಳದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಜೊತೆಗೆ ಇಂಡಿ ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡ ಎಲ್ಲ ಅಮೃತ ಸರೋವರಗಳಲ್ಲಿ ವಿಶ್ವ ಯೋಗ ದಿನಾಚರಣೆ ಆಚರಣೆ ಮಾಡಲಾಯಿತು. 

ಜೊತೆಗೆ ಏಕಾಗ್ರತೆ, ಮನಸ್ಸಿನ ನೆಮ್ಮದಿಗಾಗಿ, ರೋಗ ನಿರೋಧಕ ಶಕ್ತಿ ವೃದ್ಧಿ, ಸಲುವಾಗಿ ಎಲ್ಲರೂ ಪ್ರತಿ ದಿನ ಯೋಗ ಮಾಡಬೇಕು. ತಾಲೂಕಿನ ಝಳಕಿ ಪಂಚಾಯತ ವ್ಯಾಪ್ತಿಯ ಅರ್ಜನಾಳ, ಕೊಳೂರಗಿ ಪಂಚಾಯತ್ ವ್ಯಾಪ್ತಿಯ ಸಾವಳಸಂಗ, ಹಾಗೂ ನಿಂಬಾಳ ಕೆಡಿ, ಚವಡಿಹಾಳ ಪಂಚಾಯತ್ ವ್ಯಾಪ್ತಿಯ ಚೋರಗಿ, ಹಾಗೂ ಅಂಜುಟಗಿ, ಬಬಲಾದ, ಮತ್ತು ಬಸನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ಯಾತನಕೇರಿ ಗ್ರಾಮದಲ್ಲಿ ಅಮೃತ ಸರೋವರಗಳ ನಿರ್ಮಾಣ ್ಘ ಅಭಿವೃದ್ಧಿ ಪಡಿಸಲಾಗಿದೆ.  ಈ ಸಮಯದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು,  ಗ್ರಾಮ ಕಾಯಕ ಮಿತ್ರರು, ಮೆಟ್ ಗಳು,  ನರೇಗಾ ಕೂಲಿಕಾರರು, ವಿದ್ಯಾರ್ಥಿಗಳು,  ಸಾರ್ವಜನಿಕರು,  ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ