ಮಹಿಳೆಯರಿಗೆ ಇಷ್ಟವಾದ ರಂಗೋಲಿ ಸ್ಪಧರ್ೆ ನಡೆಯಲಿ: ಕಲ್ಯಾಣಸ್ವಾಮಿ

ಮಹಿಳೆಯರಿಗೆ ಇಷ್ಟವಾದ ರಂಗೋಲಿ ಸ್ಪಧರ್ೆ ನಡೆಯಲಿ: ಕಲ್ಯಾಣಸ್ವಾಮಿ

ಬಳ್ಳಾರಿ,ಜ.13: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ನಗರದ ಸತ್ಯನಾರಾಯಣ ಪೇಟೆಯ ಎಂ.ಎಂ.ಟಿ.ಸಿ ಕಾಲೋನಿಯ ಪಾರ್ಕ ಬಳಿ 18ನೇ ವಾಡರ್ಿನ ಮಹಿಳೆಯರಿಗಾಗಿ ರಂಗೋಲಿ ಜಾತ್ರೆ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಕಮ್ಮರಚೇಡು ವ್ಮಠದ ಕಲ್ಯಾಣಸ್ವಾಮಿಗಳು ಒಲೆಗೆ ಅಗ್ನಿಸ್ಪರ್ಷ ನೀಡಿ ಅನ್ನಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಈ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ದಿವಾಕರ್, ಜನತಾಪಕ್ಷದ ಬಳ್ಳಾರಿ ನಗರ ಯುವಮೋರ್ಚ ಅಧ್ಯಕ್ಷ ಕೆ.ಎಸ್ ಅಶೋಕಕುಮಾರ ಮತ್ತಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ಹಿಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಒಲೆಯ ಮೇಲೆ ಅಡುಗೆ ಮಾಡುವ ವ್ಯೆವೆಸ್ಥೆ ಇತ್ತು. ಆಗ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಅಂತಹ ಒಂದು ಹಿಂದು ಸಂಸ್ಸೃತಿಯನ್ನು ಮತ್ತೆ ಈ ರಂಗೋಲಿ ಸ್ಪಧರ್ೆ ಜಾತ್ರೆಯಲ್ಲಿ ಅಳವಡಿಸಿರುವುದು ನೋಡಿಗರಿಗೆ ಮತ್ತು ಸ್ಪಧರ್ೆಗೆ ಅಹ್ವಾನಿಸಿದ ಮಹಿಳೆಯರಿಗು ಇದು ಪ್ರೇರಣೆಯಾಗಬೇಕು ಎಂದರು. ಈ ರಂಗೋಲಿ ಜಾತ್ರೆಯನ್ನು ಪ್ರತೀ ವರ್ಷ ನಿರಂತರವಾಗಿ ನಡೆಯಲಿ ಎಂದು ಕೋರಿದರು. ಹಳ್ಳಿಯ ಸ್ವಡಗನ್ನು ಬಿಂಬಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಿಗೆ ಎಲ್ಲಾ ಬಡಾವಣೆಗಳಲ್ಲಿಯೂ ನಡೆಯಲಿ ಎಂದರು. ಈ ರಂಗೋಲಿ ಸ್ಪಧರ್ೆಗೆ 122 ಮಹಿಳೆಯರು ಭಾಗವಹಿಸಿದ್ದು. ಇದು ಚುಕ್ಕಿಯ ರಂಗೋಲಿಯನ್ನು ಹಾಕುವ ಮೂಲಕ ಸ್ಪಧರ್ೆಗೆ ಸಮಯವನ್ನು ನಿಗದಿ ಮಾಡಿ ಎರಡು ತಾಸಿನೊಳಗಡೆ ರಂಗೋಲಿಯನ್ನು ಬಿಡಿಸಬೇಕು ಎಂದು ಹಾಗೂ ಅದಕ್ಕೆ ಸಂಬಂಧಿಸಿದ ಒಂಬತ್ತು ನಿಯಮ ನಿಬಂಧೆನೆಗಳನ್ನು ಸ್ಪಧರ್ಿಗಳಿಗೆ ತಿಳಿಸಿದ್ದರು. ಅದೇ ರೀತಿ ಸ್ಪಧರ್ಿಗಳು ರಂಗೋಲಿಯನ್ನು ಬಿಡಿಸಿ ನಂತರ ನಾಲ್ಕೂ ಜನ ಮಹಿಳಾ ತೀಪರ್ುದಾರರಾದ ಸಾವಿತ್ರಮ್ಮ, ವಿಜಯಶ್ರಿ, ಚಂದ್ರಕಲಾ, ಮತ್ತು ಶಾಂತಿ ಶಶು ವಿಹಾರದ ಲಕ್ಷ್ಮಿ, 

ಈ ರಂಗೋಲಿಗಳನ್ನು ವಿಕ್ಷಿಸಿ ಸ್ಪಧರ್ೆಯಲ್ಲಿ ಮೊದಲ ಮೂರು ಬಹುಮಾನಕ್ಕೆ ವಿಜೇತರನ್ನು ಆಯ್ಕೆ ಮಾಡಿದರು. ಆಯ್ಕೆಯಾದಂತಹ ವಿಜೇತರಿಗೆ ಶ್ರೀಮತಿ ವಿಜಯ ಸೋಮಶೇಖರರೆಡ್ಡಿ ಅವರು ಬಹುಮಾನ ವಿತರಣೆ ಮಾಡಿದರು. ಕುಮಾರಿ ಉಷಾರಾಣಿ ಅವರಿಗೆ ಪ್ರಥಮ ಬಹುಮಾನ ಒಂದು ಪ್ರೀಡ್ಜ್ನ್ನು ಪಡೆದರು, ಎರಡನೇ ವಿಜೆತರಾಗಿ ಕುಮಾರಿ ಶೃತಿ ಅವರಿಗೆ ವಾಸಿಂಗ್ ಮಷಿನ್, ಮೂರನೇ ವಿಜೇತರಾದಂತ ಶ್ರೀಮತಿ ಪಲ್ಲವಿ ಅವರಿಗೆ ರುಬ್ಬುವ ಗ್ರೈಂಡರ್ನ್ನು ಸ್ಪಧರ್ೆಯಲ್ಲಿ ಬಹುಮಾನ ಪಡೆದರು. ಅಲ್ಲದೇ ಸ್ಪಧರ್ೆಯಲ್ಲಿ ಭಾಗವಹಿಸಿರುವ ಇತರರಿಗೂ ಕೂಡಾ ಸಮದಾನಕರ ಬಹುಮಾನ ನೀಡಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಘಟಕದ ನಗರ ಉಪಾಧ್ಯಕ್ಷೆ ಜೋತಿಪ್ರಕಾಶ್, ಸುಮಾರೆಡ್ಡಿ, ಲಕ್ಷ್ಮಮ್ಮ, ಶಶಿಕಲಾ, ಪದ್ಮಾವತಿ, ಸುಗುಣ, ಶ್ರೀದೇವಿ, ಅಲವೇಲು, ಯುವಮೊರ್ಚದ ಹುಂಡೆಕರ್ ರಾಜೇಶ್, ಯರಿಸ್ವಾಮಿ, ನೇಮ್ಕಲ್ರಾವ್, ಶಿವಕುಮಾರ, ಮುರಳಿಧರ, ರವಿತೇಜ, ಶಂಕರ, ಗೋಪಿಕೃಷ್ಣ, ಜಿಲ್ಲಾಧ್ಯಕ್ಷ ಪ್ರಕಾಶರೆಡ್ಡಿ, ಶ್ರೀನಿವಾಸ್ ಮೋತ್ಕರ್, ಸೇರಿದಂತೆ ಸಾವಿರಾರು ಜನ ಬಿಜೆಪಿ ಮುಖಂಡರುಗಳು, ಕಾರ್ಯಕರ್ತರು, ಅಚ್ಚುಕಟ್ಟಾದ ವ್ಯೆವೆಸ್ಥೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಸುದ್ದಿ ಓದಿ