ಗೋಕಾಕ್

ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ದೊರೆತಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ

ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ದೊರೆತಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ

ಶಿಂಧಿಕುರಬೇಟ 08: ಸರಕಾರಿ ಬಾಲಕಿಯರ ಪ್ರೌಢಶಾಲೆ ಶಿಂಧಿಕುರಬೇಟ ತಾ ಗೋಕಾಕ ಇಲ್ಲಿ ಸಾಂಸ್ಕೃತಿಕ ಸಂಘದಡಿಯಲ್ಲಿ ಜೀವನದ ಮೌಲ್ಯಗಳು ವಿಷಯ ಕುರಿತು ಗಂಗಾಧರ ವಿ ಮಳಗಿ ನಿವೃತ್ತ ಕನ್ನಡ ಪ್ರಾಧ್ಯಾಪಕರು ಗೋಕಾಕ ಇವರು ಅ.08ರಂದು ಉಪನ್ಯಾಸ ನೀಡಿದರು. 

ವಿದ್ಯಾರ್ಥಿನಿಯರಿಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ದೊಂದಿಗೆ ಉನ್ನತ ಶಿಕ್ಷಣ ದೊರೆತಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದರು. 

ಎಸ್ ಬಿ ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿಂಗಪ್ಪ ಬೆಂಬಲವಾಗಿ, ಶ್ರೀಕಾಂತ ಹಿರೇಮಠ, ಜಯಶ್ರೀ ಮಳಗಿ, ವಿಠ್ಠಲ ಕರೋಶಿ, ಉಪಸ್ಥಿತರಿದ್ದರು. ಶಿಕ್ಷಕಿ ಮಂಕಾಳೆಯವರು ಸ್ವಾಗತಿಸಿದರು. ಬಾಗವಾನರವರು ವಂದಿಸಿದರು. ಶಿಕ್ಷಕ ಪಟ್ಟಣಶೆಟ್ಟಿಯವರು ನಿರೂಪಿಸಿದರು. 


ಸುದ್ದಿ ಓದಿ