ಸಂಗೀತಾಳ ಮದುವೆ ಸಂಜಯನ ಜೊತೆಗೆ ಎರಡು ವರ್ಷಗಳ ಹಿಂದೆ ಆಗಿತ್ತು. ಅವಳಿಗೆ ಇನ್ನೂ ಮಕ್ಕಳಾಗಿರಲಿಲ್ಲ. ಮನೆಯಲ್ಲಿ ಗಂಡ, ಅತ್ತೆ ಮತ್ತು ಮಾವ ಅವಳಿಗೆ ಮಗು ಆಗುವುದನ್ನೆ ಕಾಯುತ್ತಿದ್ದರು. ಆ ಶುಭ ಸಂದರ್ಭ ಬಂದೇ ಬಿಟ್ಟಿತು. ಸಂಗೀತಾ ಮೂರು ತಿಂಗಳ ಗಭರ್ಿಣಿ ಎಂದು ಹೇಳಿದಾಗ ಮನೆಯವರಿಗೆಲ್ಲ ತುಂಬಾ ಸಂತಸವಾಯಿತು. ದಿನವೂ ಮನೆಯಲ್ಲಿ ಸಡಗರವೇ ಸಡಗರ. ಎಲ್ಲರಿಗೂ ಮನೆಯಲ್ಲಿ ಅವಳಿಗೆ ಗಂಡು ಮಗುವೇ ಆಗಲಿ ಎಂಬ ಆಶೆ. ಸಂಗೀತಾ ನಿನಗೆ ಗಂಡ ಆಗಬೇಕವಾ ಎಂದು ಮೇಲಿಂದ ಮೇಲೆ ಅವಳೆದುರುಗೆ ಅನ್ನುತ್ತಿದ್ದರು. ಸಂಗೀತಾಳಿಗೆ ಅಯ್ಯೋ ಹೆಣ್ಣಾದರೆ ಏನ ಅಂತಾರೋ ಏನೋ ಎಂಬ ಚಿಂತೆ ಅವಳನ್ನು ಕಾಡುತ್ತಿತ್ತು.
ಹೆರಿಗೆ ದಿನ ಬಂದೇ ಬಿಟ್ಟಿತು. ಎಲ್ಲರಿಗೂ ಕಾತರದ ನಿರೀಕ್ಷಣೆ ಹೆಣ್ಣೋ ಗಂಡೋ ಎಂದು. ಹೆರಿಗೆಯಾದ ಮೇಲೆ ಹೆಣ್ಣು ಮಗು ಆಗಿದೆ. ಮಗು ಆರೋಗ್ಯದಿಂದಿದೆ ಎಂದು ಡಾಕ್ಟರ್ ಹೇಳಿದರು. ಹೆಣ್ಣಾಗಿದೆ ಎಂಬುದನ್ನು ಕೇಳಿ ಗಂಡನ ಹಾಗೂ ಗಂಡನ ಮನೆಯವರ ಮುಖಗಳು ಕಳಾಹೀನವಾದವು. ಅಯ್ಯೊ ಹೆಣ್ಣಾತು ಗಂಡಾಗಿದ್ದರೆ ಚುಲೋ ಆಗತ್ತಿತ್ತು ಅಂತೆ ವಟಗುಡುತ್ತಾ ಹೊರಟು ಹೋದರು. ಸಂಗೀತಾ ತವರು ಮನೆಯಲ್ಲಿ ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ಹೋದಳು. ಗಂಡನ ಮನೆಯಲ್ಲಿ ಸಂಪೂರ್ಣ ನಿರಾಶಾದಾಯಕ ವಾತಾವರಣ. ಹೊಸ ಮಗುವನ್ನು ಸಂತಸದಿಂದ ಬರಮಾಡಿಕೊಳ್ಳುವ ಮನಸ್ಸುಗಳೇ ಅಲ್ಲಿರಲಿಲ್ಲ. ಕಾಟಾಚಾರಕ್ಕೆ ಸಂಪ್ರದಾಯ ಮುಗಿಸಿ ಮಗುವನ್ನು ಮನೆಯೊಳಗೆ ಕರೆದುಕೊಂಡರು.
ಅವಳನ್ನು ಕಳಿಸಲು ಹೋದವರಿಗೂ ಸರಿಯಾದ ಅದರಾತಿಥ್ಯ ದೊರಕಲಿಲ್ಲ. ಆದರೂ ಅವರೆಲ್ಲ ಸಹಿಸಿಕೊಂಡು ಕಳುಹಿಸಿ ಬಂದರು. ಮನೆಯಲ್ಲಿ ಸಂಗೀತಾಳಿಗೆ ಹಾಗೂ ಅವಳ ಮಗುವಿಗೆ ಮನೆಯಲ್ಲಿ ಎಲ್ಲರೂ ತಾತ್ಸಾರ ಭಾವನೆಯಿಂದ ಕಾಣುತ್ತಿದ್ದರು. ಸರಿಯಾಗಿ ಅವಳ ಹಾಗೂ ಮಗುವಿನ ಉಪಚಾರ ಹಾಗೂ ಆರೋಗ್ಯದ ಕಡೆ ಕೂಡಾ ಗಮನಹರಿಸುತ್ತಿರಲಿಲ್ಲ. ಗಂಡನ ಮನೆಯಲ್ಲಿ ಅವಳಿಗಾಗುವ ಹಿಂಸೆಯನ್ನು ಕಂಡು ತವರು ಮನೆಯವರಿಗೆ ತುಂಬಾ ವೇದನೆಯಾಗುತ್ತಿತ್ತು.
ಆದರೇನು ಮಾಡುವುದು? ಬಿಸಿ ತುಪ್ಪ ಉಗುಳೋಕೂ ಆಗದು. ನುಂಗೋಕು ಆಗದು ತಿನ್ನೊ ಪರಿಸ್ಥಿತಿಯಲ್ಲಿ ತವರು ಮನೆಯವರು. ಹೆಣ್ಣೆಗೆ ಗಂಡನ ಮನೆಯೇ ಗತಿಯೆಂದು ಯಾವುದೇ ಕಷ್ಟ ಕೊಟ್ಟರೂ ಸಹಿಸಿಕೊಂಡಿದ್ದಳು. ಮೊದಲನೆ ಮಗು ಹೆಣ್ಣು ಆತ ಎರಡನೆ ಮಗೂನೂ ಹೆಣ್ಣಾದರೆ ನಿನ್ನ ಬಿಟ್ಟ ಬಿಡಾವ್ರು. ನೀ ತವರ ಮನಿಯಾಗ ಇರಬೇಕ. ನನ್ನ ಮಗಗ ಬೇರೆ ಮದವಿ ಮಾಡ್ತಿವಿ ಎಂದು ಎಂದು ಅತ್ತೆಯಾದವಳು ಕಾಡುತ್ತಿದ್ದರೂ. ಅತ್ತೆಯ ತಾಳಕ್ಕೆ ಗಂಡ ಹಾಗೂ ಮಾವ ಕುಣಿಯುತ್ತಿದ್ದರು.
ಹೆಣ್ಣುಮಗು ಎರಡು ವರ್ಷದ್ದಾಯಿತು. ಸಂಗೀತಾಳಿಗೆ ಬಯಕೆ ಕಾಟ ಪ್ರಾರಂಭವಾಗಿ ಎರಡನೆ ಮಗುವಿನ ಗರ್ಭದರಿಸಿದಳು. ತಿಂಗಳು ತಿಂಗಳು ತುಂಬಿದ ಹಾಗೆ ಅವಳಿಗೆ ಮನದ ದುಗುಡ ಹೆಚ್ಚಾಗುತ್ತಿತ್ತು. ಇದೂ ಹೆಣ್ಣು ಆಗಬಾರದು. ಇದು ಗಂಡ ಆಗಬೇಕು ಎಂದು ಕಂಡ ಕಂಡ ದೇವರಿಗೆ ಕೈಮುಗಿದು ಬೇಡಿದ್ದೆ ಬೇಡಿದ್ದು. ಅವಳ ತವರು ಮನೆಯವರಿಗೂ ಇದೂ ಹೆಣ್ಣಾದ್ರ ಹೆಂಗಪ್ಪಾ ಅನ್ನೊ ವೇದನೆ ಕಾಡತೊಡಗಿತ್ತು. ಗಂಡನ ಮನೆಯವರ ಗಂಡು ಮಗುನೇ ಬೇಕು ಬೇಕು ಎನ್ನುವ ಇಚ್ಚೆ ಅತಿಯಾಗ ತೊಡಗಿತ್ತು. ಗಂಡ ಮಗು ಹುಟ್ಟದೇ ಇದ್ರೆ ಎಲ್ಲ ಇವಳನ್ನು ಕೊಂದೆ ಹಾಕುತ್ತಾರೆ ಅನ್ನೋ ಹಾಗೆ ಅವಳನ್ನು ಪೀಡಿಸುತ್ತಿದ್ದರು. ಹೆರಿಗೆ ಬೇನೆ ಸಂಗೀತಾಳಗೆ ಪ್ರಾರಂಭವಾದವು. ಬೇನೆಗಳು ಹೆಚ್ಚಾದ ಹಾಗೆ ಸಂಗೀತಾಳಿಗೆ ಮನದ ನೋವೂ ಹೆಚ್ಚಾಗತೊಡಗಿತ್ತು.
ಅಂತೂ ಇಂತೂ ಹೆರಿಗೆ ಆಯಿತು. ಎರಡನೆಯದೂ ಹೆಣ್ಣು ಮಗುವೇ ಆಯಿತು. ಗಂಡನ ಮನೆಯವರಾರು ಈ ಕಡೆಗೆ ಸುಳಿದೇ ಇರಲಿಲ್ಲ. ಪೋನ್ ಮೂಲಕ ಹೆಣ್ಣಾಗಿದೆ ಎಂದು ತಿಳಿಸಿದಾಗ ಯಾವುದೇ ಪ್ರತಿಕ್ರಿಯೇ ಅವರಿಂದ ಬರಲಿಲ್ಲ. ಸಂಗೀತಾ ಮತ್ತು ಆ ಎರಡೂ ಹೆಣ್ಣು ಕೂಸುಗಳು ಮನೆಯ ಪೀಡೆಗಳು ಎಂದು ಮೂದಲಿಸತೊಡಗಿದರು. ಕೂಸಿಗೆ ಐದನೇ ತಿಂಗಳು ಪ್ರಾರಂಭವಾದರೂ ಗಂಡನ ಮನೆಯವರು ಸಂಗೀತಾ ಕರೆದುಕೊಂಡು ಹೋಗುವ ಸೂಚನೆಯೇ ಕಾಣಲಿಲ್ಲ. ಒತ್ತಾಯಪೂರ್ವಕವಾಗಿ ತವರು ಮನೆಯ ಹಿರಿಯರು ಗಂಡನ ಮನೆಗೆ ಸಂಗೀತಾಳನ್ನು ಗಂಡನ ಮನೆಯವರಿಗೆ ತಿಳಿಹೇಳಿ ಕಳುಹಿಸಿ ಬಂದರೂ. ಆದರದು ಏನೂ ಉಪಯೋಗವಾಗಲಿಲ್ಲ. ಕ್ಷಣಕ್ಷಣಕ್ಕೆ ಸಂಗೀತಾಳನ್ನು ಹಾಗೂ ಮಕ್ಕಳನ್ನು ಕಾಡಿಸಿ ಪೀಡಿಸತೊಡಗಿದರು. ಪತಿಯ ಮನೆ ಸಂಗೀತಾಳಿಗೆ ನರಕಸದೃಶವಾಯಿತು. ಗತಿಯಿಲ್ಲದೆ ಬಂದು ಮತ್ತೇ ತವರು ಮನೆ ಸೇರಬೇಕಾಯಿತು.
ತವರು ಮನೆಯಲ್ಲಿ ಎರಡು ಮಕ್ಕಳನ್ನು ಕರೆದುಕೊಂಡು ಉಳಿಯುವುದು ಸಂಗೀತಾಳಿಗೆ ದಿನದಿಂದ ದಿನಕ್ಕೆ ಬೇಸರವಾಗತೊಡಗಿತು. ಬೇರೆ ಒಂದು ಸಣ್ಣ ಮನೆ ಮಾಡಿ ನಾಲ್ಕು ಮನೆಗಳ ಕಸಮುಸರೆ ಮಾಡಿ ಸಂಗೀತಾ ತನ್ನ ಜೀವನ ನಡೆಸತೊಡಗಿದಳು. ಬಂದ ಕಷ್ಟಕಾರ್ಪಣ್ಯಗಳಿಗೆ ಎದೆ ಕೊಟ್ಟುನಿಲ್ಲಲು ಗಟ್ಟಿಯಾದಳು. ಇದೇಕೆ ಹೀಗೆ ಅಂತಾ! ಸಂಗೀತಾ ಅಷ್ಟೇ ಅಲ್ಲ ಹೀಗೆ ಇನ್ನುಳಿದ ಹೆಣ್ಣುಮಕ್ಕಳು ಗಂಡಾಗಲಿಲ್ಲ ಎಂದು ಎಷ್ಟೋ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ಹೆಣ್ಣು ಗಂಡು ಒಂದೇ ಅಲ್ಲವೇ? ಎರಡಕ್ಕೂ ಜೀವವಿದೆ ಅಲ್ಲವೇ? ಎರಡೂ ಜೀವಗಳ ಭಾವನೆಗಳು ಒಂದೇ ಅಲ್ಲವೇ? ಜನಪದದಲ್ಲಿ ಹೇಳ್ತಾರೆ. "ಹೆಣ್ಣು ನನ್ನ ಮಗಳು ಒಳಗಿರಲು ಕನ್ನಡಿ ಹಾಂಗ ಹೊಳೆಯುವಳು. ಸಂಚಿಹೊನ್ನಮ್ಮ ಕೇಳ್ತಾರೆ "ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು. ಒಳಗೆ ಸುಳಿವ ಆತ್ಮ ಒಂದೇ" ಎಂದು.
ಹೆಣ್ಣು ಮಕ್ಕಳು ಗಂಡುಮಕ್ಕಳಿಗಿಂತ ಕಡಿಮೆಯಿಲ್ಲ. ಗಂಡಸಿಗೆ ಸರಿಸಮಾನವಾಗಿ ಸಾಧನೆಯ ಮೆಟ್ಟಿಲುಗಳನ್ನು ಏರಿದ್ದನ್ನು ನಾವು ಅನೇಕ ಕ್ಷೇತ್ರಗಳಲ್ಲಿ ಕಾಣುತ್ತೇವೆ. ಸಂಗೀತಾಳನ್ನು ಅವಳ ಗಂಡ ಹಾಗೂ ಗಂಡನ ಮನೆಯವರು ಕಾಡಿದ ಹಾಗೆ ಕಾಡಬೇಡಿ. ಹೆಣ್ಣಾಗಲಿ ಗಂಡಾಗಲಿ ಒಪ್ಪಿಕೊಳ್ಳಿ ಅಪ್ಪಿಕೊಳ್ಳಿ. ಅವುಗಳಲ್ಲಿ ಬೇಧಭಾವ ಮಾಡುವುದು ಮಾನವೀಯ ಲಕ್ಷಣವಲ್ಲ. ಪ್ರತಿ ಹೆಣ್ಣೂ ಮನೆಯ ಲಕ್ಷ್ಮೀ ಮನೆಯ ದೇವತೆ. ಚೆನ್ನಾಗಿ ಬೆಳೆಸಿ ವಿದ್ಯೆಯನ್ನು ನೀಡಿ. ಅವರ ಕಾಲಮೇಲೆ ಅವರು ನಿಂತು ಸ್ವಾವಲಂಭಿಯಾಗಿ ಬದುಕುವಂತೆ ಆಥರ್ಿಕ ಬೆನ್ನು ಹತ್ತಿ ಬರುತ್ತವೆ. ಯಾವುದೇ ಜೀವಿಯ ಮನವ ನೊಯಿಸಬೇಡಿ. ಪ್ರೀತಿ ಹಾಗೂ ಸ್ಪೂತರ್ಿಯ ಸೆಲೆ ನೀಡಿ ಹೆಣ್ಣುಮಕ್ಕಳನ್ನು ಬೆಳೆಸಿದರೆ ನಿಮ್ಮ ಜೀವನ ಸಾರ್ಥಕವು. ಹೀಗಾದರೆ ಪ್ರತಿ ಹೆಣ್ಣ ಜೀವಿಗೆ ತನ್ನದೇ ಗುರಿಯನ್ನು ಸಾಧಿಸಿ ಧನ್ಯತೆಯ ಭಾವ ಹೊಂದುವ ಅವಕಾಶ ಸಿಗುತ್ತದೆ. ಆದ್ದರಿಂದ ಹೆಣ್ಣುಗಂಡು ಸರಿಸಮ ಇದುದೇ ಜೀವನ ಸರಿಗಮ ಎಂಬುದು ಎಲ್ಲರಲಿ ಮೂಡಿಬಂದು ಹೆಣ್ಣುಮಗು ಜೀವನನದ ಯಶಸ್ವಿನ ಮಜಲುಗಳು ಎಂಬುದೇ ನನ್ನ ಮನದ ಉತ್ಕಟ ಇಚ್ಛೆ.