ಜಮಖಂಡಿ

ಮಹಿಳೆಯರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ: ಲಕ್ಷ್ಮೀ

ಮಹಿಳೆಯರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ: ಲಕ್ಷ್ಮೀ

ಲೋಕದರ್ಶನ ವರದಿ

ಜಮಖಂಡಿ 11: ಪ್ರತಿಯೊಬ್ಬ ಮಹಿಳೆ ಸ್ವಾಭಿಮಾನಿಯಾಗಿ,ಉತ್ತಮ ಗೃಹಿಣ  ಸ್ಥಾನ ಪಡೆದುಕೊಳ್ಳಬೇಕು. ಇಂದಿನ ಮಹಿಳೆಯರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ,ಸಮಾಜ ಸುಧಾರಣೆಯಲ್ಲಿ ಮುಂಚೂಣಯಲ್ಲಿರಬೇಕೆಂದು ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಕರೆ ನೀಡಿದರು. 

ನಗರದ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯೂಟಿ ಪಾರ್ಲರ್ ಸಂಘದ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

 ಇಂದಿನ ದಿನಮಾನದಲ್ಲಿ ಮಹಿಳಾ ಸಂಘಟನೆಗಳು ಅವಶ್ಯವಾಗಿದ್ದು, ಸಂಘಟನೆ ಶಕ್ತಿಯಾಗಿದೆ. ಮಹಿಳಾ ಸಂಘಟನೆಯಿಂದ ಒಗ್ಗೂಡಿ ಸಮಾಜ ಸುಧಾರಣೆ ನಡೆಸಬೇಕು. ದೀನ-ದಲಿತ, ಬಡವರ ಸಹಾಯಕ್ಕೆ ಮಹಿಳಾ ಸಮಘಟನೆಗಳು ಮುಂದೆ ಬರಬೇಕು. ಮಹಿಳೆಯರು ಪ್ರತಿದಿನ ಲವಲವಿಕೆಯಿಂದ ಇದ್ದು, ಕರ್ತವ್ಯಪ್ರಜ್ಞೆ ಹೊಂದಬೇಕು.ಅಲ್ಲದೇ ಸಮಾಜದಲ್ಲಿ ಆಗು-ಹೋಗುವ ಬಗ್ಗೆ ತಿಳುವಳಿಕೆ ಹೊಂದಬೇಕು.ಇಂದು ಮಹಿಳೆಯರು ಪುರುಷರನ್ನು ಹೇಗೆ ಗೌರವಿಸುತ್ತಾರೋ ಹಾಗೆನೆ ಪುರುಷರು ಮಹಿಳೆಯರನ್ನು ಗೌರವಿಸಬೇಕು.ಸಮಾಜದಲ್ಲಿ ಮಹಿಳಾ ಸಬಲೀಕರಣಗೊಂಡು ಪ್ರತಿಯೊಬ್ಬ ಮಹಿಳೆಗೆ ಜವಾಬ್ದಾರಿ ನೀಡುವ ಕಾರ್ಯ ನಡೆಯಬೇಕು. ಬ್ಯೂಟಿ ಪಾರ್ಲರ್ಗಳನ್ನು ನಡೆಸಬೇಕಾದರೆ ತರಬೇತಿಯನ್ನು ಪಡೆದುಕೊಂಡು ನಡೆಸಬೇಕು. 

ಮುಖದ ಚರ್ಮಕ್ಕೆ ಯಾವುದೆ ರೀತಿಯಿಂದ ತೊಂದರೆಯಾಗದಂತೆ ಬ್ಯೂಟಿ ಪಾರ್ಲರ್ಗಳನ್ನು ನಡೆಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.ಅತಿಥಿಗಳಾಗಿದ್ದ ವಿಜಯಪೂರ ನಳಂದ ಶಾಲೆ ಮುಖ್ಯಶಿಕ್ಷಕಿ ಮಿನಾಕ್ಷಿ ಉಟಗಿ, ರಾಣ  ಚೆನ್ನಮ್ಮಾ ಮಹಿಳಾ ಸಂಘದ ಅಧ್ಯಕ್ಷೆ ಆಶಾ ಗುಡಗುಂಟಿ, ಬ್ಯೂಟಿ ಪಾರ್ಲರ್ ಸಂಘದ ಅಧ್ಯಕ್ಷೆ ಪದ್ಮಾ ಹಜಾರೆ, ಉಪಾಧ್ಯಕ್ಷೆ ಶೋಭಾ ಬಡಚಿ, ಸುಜಾತಾ ರಾಠೋಡ ಮಾತನಾಡಿದರು, ಸುಜಾತಾ ಭಜಂತ್ರಿ ಸ್ವಾಗತಿಸಿದರು, ನುಖಿತಾ ಜೋಗದಂಡೆ ನಿರೂಪಿಸಿದರು, ಜ್ಯೋತಿ ವಾಣ  ವಂದಿಸಿದರು, ಮಹಿಳೆಯರಿಂದ ವಿವಿಧ ಮನರಂಜನೆ ಕಾರ್ಯಕ್ರಮ ನಡೆದವು. 


ಸುದ್ದಿ ಓದಿ