ಜಮಖಂಡಿ

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಕೊಲೆ, ಎಸ್ಪಿ ಭೇಟಿ

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಕೊಲೆ, ಎಸ್ಪಿ ಭೇಟಿ

ಜಮಖಂಡಿ 06: ತಾಲ್ಲೂಕಿನ ಕೆಡಿ.ಜಂಬಗಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊರ್ವಳನ್ನು ಮೂರು ಜನ ಸಂಬಂಧಿಕರೆ ಸೇರಿಕೊಂಡು ಕೊಲೆ ಮಾಡಿರುವ ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರೀಶೀಲನೆ ಮಾಡಿದರು. 

ಆರತಿ ಶಿಂಗೆ (35) ಕೊಲೆಯಾದ ದುರ್ದೈವಿ. ಅವಳ ಮಗ ಸಿದ್ದು ಶಿಂಗೆ ಯುವಕ ಕೆ.ಡಿ.ಜಂಬಗಿ ಕ್ರಾಸ್‌ನಲ್ಲಿರುವ ಗ್ಯಾರೆಜ್‌ನಲ್ಲಿ ಕೆಲಸ ಮಾಡುತ್ತಿದ್ದನು, ಅಲ್ಲಿ ಅವನು ಬೈಕ್ ತೊಳೆಯುತ್ತಿದ್ದಾಗ ಪೈಪನಲ್ಲಿನ ನೀರು ವಿನೋದ ಶಿಂಗೆ ಎಂಬಾತನ ಮೈಮೇಲೆ ಬಿದ್ದಿದ್ದರಿಂದ ಸಿಟ್ಟಿಗೆದ್ದು ಸಿದ್ದು ಶಿಂಗೆಯನ್ನು ಹೊಡೆದಿರುತ್ತಾನೆ. 

ಸಿದ್ದು ಶಿಂಗೆ ಹೊಡೆಸಿಕೊಂಡು ಮನೆಗೆ ಬಂದು ತನ್ನ ತಂದೆ ರಮೇಶ ಸದಾಶಿವ ಶಿಂಗೆ ಮತ್ತು ತಾಯಿ ಆರತಿ ಶಿಂಗೆಗೆ ಈ ವಿಷಯವನ್ನು ಹೇಳಿದಾಗ ಮೂವರು ಸೇರಿ ವಿನೋದ ಶಿಂಗೆ ಮನೆಯ ಹೊರಗೆ ನಿಂತು ನಿಮ್ಮ ಮಗ ವಿನೋದ ಹೀಗೆ ಮಾಡಿದ್ದಾನೆ ಎಂದು ಕೇಳಲು ಹೋದಾಗ ಎರಡು ಕುಟುಂಬಗಳ ನಡುವೆ ವಾಗ್ವಾದ ತಾರಕಕ್ಕೇರಿ ವಿನೋದ ಹಾಗೂ ಅವನ ತಾಯಿ ಮಾಲಾ ಸಾಬು ಶಿಂಗೆ, ಪತ್ನಿ ಸ್ವಪ್ನಾ ಶಿಂಗೆ ಮೂರು ಜನ ಸೇರಿ ಆರತಿ ಶಿಂಗೆಯನ್ನು ಕೊಲೆ ಮಾಡಿದ್ದಾರೆಂದು ಜಿಲ್ಲಾ ಎಸ್‌ಪಿ, ಅಮರನಾಥ ರೆಡ್ಡಿ ತಿಳಿಸಿದರು. 

ಜಮಖಂಡಿ ಡಿವಾಯ್‌ಎಸ್‌ಪಿ. ಶಾಂತವೀರ ಈ, ಸಿಪಿಐ ಮಲ್ಲಪ್ಪ ಮಡ್ಡಿ ತನಿಖೆಯನ್ನು ಕೈಗೊಂಡಿದ್ದು ಮೂರು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಸಲಾಗಿದೆ. ಈ ಕುರಿತು ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು. 


ಸುದ್ದಿ ಓದಿ