ಬೈಲಹೊಂಗಲ

ಮಲ್ಲಮ್ಮನ ಬೆಳವಡಿಯಲ್ಲಿ ಲಾಕ್‌ಡೌನ್ ಪಾಲನೆ ಮೇಲೆ ನಿಗಾ

ಮಲ್ಲಮ್ಮನ ಬೆಳವಡಿಯಲ್ಲಿ ಲಾಕ್‌ಡೌನ್ ಪಾಲನೆ ಮೇಲೆ ನಿಗಾ
ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಸರ್ಕಲನಲ್ಲಿ ಕಿತ್ತೂರು ಸಿಪಿಐ ಮಂಜುನಾಥ ಕುಸುಗಲ್ಲ ಸೆಮಿ ಲಾಕ್‌ಡೌನ್ ಪರ

ಬೈಲಹೊಂಗಲ 25:  ಕೊರೊನಾ 2 ನೇ ಅಲೆ ಆರ್ಭಟ ಜೋರಾಗಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರದಿಂದ ಘೋಷಿಸಲಾಗಿರುವ ಸೆಮಿ ಲಾಕ್ ಡೌನ್ ಶನಿವಾರ 2 ನೇ ದಿನಕ್ಕೆ ಮುಂದುವರೆದಿದ್ದು ಕಿತ್ತೂರು ಸಿಪಿಐ ಮಂಜುನಾಥ ಕುಸುಗಲ್ಲ ಹಾಗೂ ದೊಡವಾಡ ಠಾಣೆ ಪಿಎಸ್‌ಐ ಆನಂದ ಕ್ಯಾರಕಟ್ಟಿ ಮಲ್ಲಮ್ಮನ ಬೆಳವಡಿ ಗ್ರಾಮದ ಮಲ್ಲಮ್ಮ ಸರ್ಕಲ್ ನಲ್ಲಿ ಜನ ಲಾಕ್ ಡೌನ್ ಪಾಲಿಸುತ್ತಿರುವ ಬಗ್ಗೆ ಪರೀಶೀಲನೆ ನಡೆಸಿದರು. ಬಳಿಕ ಮಾಸ್ಕ್‌ ಇಲ್ಲದೆ ಸಂಚರಿಸುತ್ತಿದ್ದ ಹಲವರಿಗೆ ಲಾಕ್ ಡೌನ್ ಉಲ್ಲಂಘಿಸಿದವರಿಗೆ ದಂಡ ವಿಧಿಸಿದರು.   

ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ಓಷಧ,ದಿನಸಿ, ಹೊಟೆಲ್ ಹೊರತುಪಡಿಸಿ ಬಟ್ಟೆ, ಮೋಬೈಲ್ ಸೇರಿದಂತೆ ಇನ್ನಿತರ ಅಂಗಡಿಗಳು ತೆರೆದಿದ್ದರೆ ಮುಚ್ಚಿಸುವಂತೆ ಸಿಬ್ಬಂದಿಗೆ ತಿಳಿಸಿದ್ದಾರೆ. ತುರ್ತು ಅಗತ್ಯಗಳಿಗೆ ಸಂಚರಿಸುತ್ತಿದ್ದ ಜನರಿಗೆ ಮಾಸ್ಕ್‌ ಧರಿಸುವಂತೆ ತಿಳಿಸಿದರು. ದೊಡವಾಡ ಸುತ್ತಲಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಧ್ವನಿ ವರ್ಧಕದ ಮೂಲಕ ಮಾಹಿತಿ ನೀಡಿ ಜಾಗೃತಗೊಳಿಸುವ ಕಾರ್ಯ ನಿರ್ವಹಿಸಿದರು. 

ಸುದ್ದಿ ಓದಿ