ಜಮಖಂಡಿ

ಔಷಧಿಗಳಿಗೆ ನಾವುಗಳು ಅಂಟಿಕೊಂಡಿದ್ದೇವೆ: ಹನಮಂತ ಮಳಲಿ

ಔಷಧಿಗಳಿಗೆ ನಾವುಗಳು ಅಂಟಿಕೊಂಡಿದ್ದೇವೆ: ಹನಮಂತ ಮಳಲಿ

ಜಮಖಂಡಿ 28: ಇಂದಿನ ದಿನಗಳಲ್ಲಿ ಆರೋಗ್ಯ ಬಹಳ ಮುಖ್ಯವಾಗಿದೆ. ಅರವತ್ತು ವರ್ಷಗಳ ಕಾಲ ಹಿಂದೆ ಔಷಧಿ ಮಾತ್ರೆಗಳ ಅಂಗಡಿಗಳು ಇರಲಿಲ್ಲ. ಇವಾಗ ಔಷಧಿಗಳಿಗೆ ನಾವುಗಳು ಅಂಟಿಕೊಂಡಿದ್ದೇವೆ ಎಂದು ಧರ್ಮ ಪಾರಂಪರಿಕ ವೈದ್ಯ ಜಾಗರಣ ವೇದಿಕೆ ರಾಜ್ಯ ಸಂಚಾಲಕ ವಾಸದ ಹನಮಂತ ಮಳಲಿ ಹೇಳಿದರು. 

ನಗರದ ಬಸವ ಭವನದಲ್ಲಿ ನಡೆದ ನಮಸ್ಕಾರ ಮಂಡಳಿ ಜಮಖಂಡಿ ಸಹಯೋಗದಲ್ಲಿ ಮಂಥನ ಇದು ವೈಚಾರಿಕ ಕಟ್ಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ 21 ಲಕ್ಷ ಸಸ್ಯ ಗಿಡಮೂಲಿಕೆಗಳ ರಾಶಿಗಳು ಇವೆ. ವಿದೇಶಿಗರು ನಮ್ಮ ದೇಶಕ್ಕೆ ಬಂದು ಓಷಧೀಯನ್ನು ಪಡೆಯಲು ಬರುತ್ತಾರೆ ಆದರೆ ನಮ್ಮಲ್ಲಿ 108 ರೋಗಿಗಳು ಇವೆ. 21 ಬಾರಿಯಾಗಿ ಉಸಿರು ಬಿಗಿಯಾಗಿ ಹಿಡಿದು ನಿಧಾನವಾಗಿ ಬಿಡಬೇಕು. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಇತ್ತಿಚಿನ ದಿನಗಳಲ್ಲಿ ಆರೋಗ್ಯ ಬಹಳ ಮುಖ್ಯವಾಗಿದೆ. ಪ್ರತಿ ಬಾರಿಯು ನಗು.ನಗುತಾ ಇದ್ದರೆ ರಕ್ತದ ಒತ್ತಡ ಕಡಿಮೆಯಾಗುತ್ತದೆ. ನಗುವೆಂಬುವದು ಅದ್ಬುತವಾದ ಓಷಧಿಯಾಗಿದೆ. ಕರಿಕಿಯಲ್ಲಿ ಇರುವ ಕಬ್ಬಿಣ ಅಂಶ ಯಾವದರಲ್ಲಿಯೂ ಇಲ್ಲ. ಪ್ರತಿದಿನ ಒಂದು ಗ್ಲಾಸ್ ಸೇವಿಸಿದ್ದರೆ ಮೊಂಡೆ ನೋವುಗಳಿಗೆ. ಕೀಲು ನೋವು ಕಡಿಮೆಯಾಗುತ್ತದೆ ಎಂದರು.  

ಮೊಬೈಲ್ ಬಂದ ಕಾರಣ ನನೆಪಿನ ಶಕ್ತಿ ಕಡಿಮೆಯಾಗುತ್ತಿದೆ. ಅಲರ್ಜಿ ಉಪಕಾರ ಮಾಡಿದವರನ್ನು ಮರೆಯುತ್ತಾರೆ. ರೋಗಕ್ಕೂ ಮರಣಕ್ಕೂ ಸಂಬಂಧವಿಲ್ಲ. ಸರಿಯಾದ ಸಮಯಕ್ಕೆ ಊಟ ಮಾಡಿದ್ದರೆ ಜಿರ್ನವಾಗುತ್ತದೆಯೊ ಆತನಿಗೆ ಯಾವುದೇ ರೋಗಗಳು ಬರುವುದಿಲ್ಲ. ಬ್ರೇಟ್‌. ಬಿಸ್ಕತ್ತು ಮಕ್ಕಳಿಗೆ ತಿನ್ನಿಸುವದು ಕಡಿಮೆ ಮಾಡಬೇಕು. ಎಲ್ಲರೂ ಕಡ್ಡಾಯವಾಗಿ ತಾಮ್ರದ ವಸ್ತುಗಳನ್ನು ಉಪಯೋಗಿಸಬೇಕು. ತಾಮ್ರದ ಪಾತ್ರಯಲ್ಲಿನ ನೀರು ದಿನಾಲು ಕುಡಿಯುವದರಿಂದ ಎಲ್ಲವೂ ಜೀರ್ಣ ಮಾಡುವ ಶಕ್ತಿ ಹೊಂದಿದೆ. ಕೆಳಗೆ ಕುಳಿತು ಊಟ ಮಾಡುವದು ರೂಡಿಸಿಕೊಳ್ಳಬೇಕು. ಬೇಗ ಮಲಗಬೇಕು. ಬೇಗ ಏಳಬೇಕು. ಏಳು ತಾಸು ನಿದ್ದೆ ಮಾಡಬೇಕು. ಯೋಗ ನಿದ್ರಾ ಯೋಗಾಸನ ಮಾಡಿದರೆ ಒಳ್ಳೆಯದು. ಉಪವಾಸ ಮಾಡುವರು ರಾತ್ರಿ ಮಾಡಬೇಕು. ನೀರು ಹೆಚ್ಚಾಗಿ ಸೇವಿಸಬೇಕು. ಎಳ್ಳೆಣಿ ಹೊಕ್ಕಳಕ್ಕೆ ಹಚ್ಚಿದರೆ ಪಚನಕ್ರೀಯೆಯಾಗುತ್ತದೆ. ಹೊಟ್ಟೆ ಸ್ವಚ್ಛ ಇದ್ದರೆ ಯಾವುದೇ ಖಾಯಿಲೆಗಳು ಬರುದಿಲ್ಲ ಎಂದು ಮನೆಯ ಮದ್ದು ಜೌಷಧಿಯ ಬಗ್ಗೆ ಮಾಹಿತಿಯನ್ನು ನೀಡಿದರು. 

ವೇದಿಕೆಯಲ್ಲಿ ನಮಸ್ಕಾರ ಮಂಡಳಿ ಅಧ್ಯಕ್ಷ ವಿ, ಆರ್, ದೇಸಾಯಿ. ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ ಇದ್ದರು.ಪ್ರಾಸ್ತಾವಿಕವಾಗಿ ಜಿಲ್ಲಾ ಸಂಚಾಲಕ ಬಾಳಾಸಾಹೇಬ ಕುಲಕರ್ಣಿ ಮಾತನಾಡಿದರು. ವಿಠ್ಠಲ ಪರೀಟ ನಿರೂಪಿಸಿದರು. ರಾಧಾಕೃಷ್ಣ ಮೂರ್ತಿ ಸ್ವಾಗತಿಸಿದರು. ಚಿನ್ಮಯ ದೇಸಾಯಿ ವೈಯಕ್ತಿಕ ಗೀತೆ ಹಾಡಿದರು. 


ಸುದ್ದಿ ಓದಿ