ವಿಯಾನ್ನಿ ವಿದ್ಯಾಲಯ ಶಾಲಾ ಮಕ್ಕಳಿಗೆ ಸಿಕ್ಕ ಜಯ
ಲೋಕದರ್ಶನ ವರದಿ
ಬಳ್ಳಾರಿ 31: ನಗರದ ವಿಯಾನ್ನಿ ವಿದ್ಯಾಲಯ ಶಾಲೆಗೆ ಹೋಗುವ ದಾರಿಯಲ್ಲಿ ಅಧಿತಿ ಗ್ಯಾಸ್ ಎಜೆನ್ಸಿ ಎದುರಿಗೆ ಇರುವ ಪಾದಾಚಾರಿ ಮಾರ್ಗ ಮತ್ತು ಚರಂಡಿಯ ಮೇಲೆ ಕಟ್ಟಡ ನಿಮರ್ಾಣ ಸಾಮಾಗ್ರಿಗಳನ್ನು ಹಾಕಿ ಅ.29ರಂದು ನಿಮರ್ಾಣ ಕಾರ್ಯವನ್ನು ಆರಂಭಿಸಿದರು, ಅಂದು ಶಾಲಾ ಮಕ್ಕಳು ಈ ಆಕ್ರಮದ ವಿರುದ್ಧ ವಿನಂತಿಸಿದ್ದರ ಫಲವಾಗಿ ಸಂಜೆ ಮುನ್ಸಿಪಾಲಿಟಿ ಅಧಿಕಾರಿಗಳು ಮತ್ತು ಪೊಲೀಸರು ನಿಮರ್ಾಣ ಹಂತದ ಕಟ್ಟಡವನ್ನು ತೆರವುಗೊಳಿಸಿದರು.
ಅದರೂ ಅ.30ರಂದು ಮನಃ ನಿಮರ್ಾಣ ಆರಂಭಿಸಿದಾಗ ಮಕ್ಕಳು ಹೋಗಿ ವಿನಂತಿಸಿದರೂ ಲೆಕ್ಕಿಸದೆ ನಿಮರ್ಾಣವನ್ನು ಅ.31 ಸಹ ಮುಂದುವರೆಸಿದರು. ಆಗ ವಿದ್ಯಾಥರ್ಿಗಳು ಈ ಬಗ್ಗೆ ಮುನ್ಸಿಪಾಲಿಟಿಯವರಿಗೆ, ಪೋಲಿಸರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ವಾಟ್ಸ್ಆಪ್ ಮೂಲಕ ದೂರನ್ನು ಪೋಟೋ ಪ್ರತಿಯೊಂದಿಗೆ ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಕೆಲಸ ನಿಲ್ಲಿಸಲು ಆದೇಶಿಸಿದರು ಮತ್ತು ಮುನ್ಸಿಪಲ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಟ್ಟಡವನ್ನು ದ್ವಂಸಗೊಳಿಸಿದರು. ಸಾರ್ವಜನಿಕ ಪ್ರಯತ್ನಗಳಲ್ಲಿ ಅತಿ ಮುಖ್ಯವಾಗಿ ಮಕ್ಕಳ ಭವಿಷ್ಯದ ಪರವಾಗಿ ತಾವು ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿದ್ದರಲ್ಲಿ ಪೊಲೀಸ್ ಮತ್ತು ಮುನ್ಸಿಪಲ್ ಅಧಿಕಾರಿಗಳ ಸಹಕಾರ ಸಿಕ್ಕಿದ್ದಕ್ಕೆ ಮಕ್ಕಳು ಹೆಮ್ಮೆ ಪಟ್ಟಿದ್ದಾರೆ.