ಬಳ್ಳಾರಿ

ನ 20ರ ವರೆಗೆ ಕಾಲುವೆಗೆ ನೀರು ರೈತರು ಆತಂಕ ಪಡಬೇಡಿ : ದರೂರು ಪುರುಷೋತ್ತಮ ಗೌಡ

ನ 20ರ ವರೆಗೆ ಕಾಲುವೆಗೆ ನೀರು ರೈತರು ಆತಂಕ ಪಡಬೇಡಿ : ದರೂರು ಪುರುಷೋತ್ತಮ ಗೌಡ
Water will be released into the canal until November 20; farmers need not worry: Daruru Purushottama


          ಬಳ್ಳಾರಿ. ನ. 14 : ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 16 ಲಕ್ಷ ಎಕರೆ ಕೃಷಿ ಭೂಮಿಗೆ ಎಡ ಮತ್ತು ಬಲದಂಡೆಯ ಮೂಲಕ ನೀರು ಹರಿಸಲಾಗುತ್ತಿದೆ   ಇದರಿಂದ ಕರ್ನಾಟಕ ಆಂಧ್ರ​‍್ರದೇಶ ತೆಲಂಗಾಣ ಸೇರಿದಂತೆ  ಎಂಟು ಜಿಲ್ಲೆಗಳ ಲಕ್ಷಾಂತರ ಜನರು ಕೃಷಿ ಚಟುವಟಿಕೆಗಾಗಿ ಇದೇ ಜಲಾಶಯದ ನೀರನ್ನು ಅವಲಂಬಿಸಿದ್ದಾರೆ,

             ಜಲಾಶಯದ ಅಧೀಕ್ಷಕ ಅಭಿಯಂತರರಾದ ಮಲ್ಲಿಗೆವಾಡ ರವರ ರಾತ್ರೋರಾತ್ರಿ ನವೆಂಬರ್ ಹತ್ತರವರೆಗೆ ಮಾತ್ರ ನೀರನ್ನು ಹರಿಸಲಾಗುವುದು ಎಂಬ  ಹೇಳಿಕೆಯಿಂದ  ಈ ಎಲ್ಲಾ ರೈತರು ಆತಂಕಕ್ಕೆ ಒಳಗಾಗಿದ್ದರು  ಆದರೆ ಅವರ ಹೇಳಿಕೆಯನ್ನು ಅಲ್ಲಗಳೆದ ಐಸಿಸಿ ಅಧ್ಯಕ್ಷ ತಂಗಡಗಿ ಈ ತಿಂಗಳು 20ರವರೆಗೆ ನೀರನ್ನು ಹರಿಸಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ.

              ಕಾರಣ ರೈತರು ಆತಂಕ ಪಡುವ  ಅಗತ್ಯವಿಲ್ಲ ಎಂದು ತುಂಗಭದ್ರಾ ರೈತರ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮ್ ಗೌಡ ತಿಳಿಸಿದರು. ಅವರು ಇಂದು ಈ ವಿಷಯದ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಜಲಾಶಯದ ನೀರು ಮಲ್ಲಿಗೆವಾಡ ಅವರ ಅಪ್ಪನ ಆಸ್ತಿಯಲ್ಲ ಅವರು ಇಚ್ಛಾನುಸಾರ ಹೇಳಿಕೆಗಳನ್ನು ನೀಡಬಾರದು ,  

               ಇದರಿಂದ ರೈತರಿಗೆ ತುಂಬಾ ಆತಂಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯವಿರುತ್ತದೆ,  ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 31 ಟಿಎಂಸಿ ನೀರು ಇದೆ , ಇದರಲ್ಲಿ 14ಣಟಛಿ ನೀರನ್ನು ಕೃಷಿಗೆ ಬಳಕೆ ಮಾಡಿದರೆ ಇನ್ನುಳಿದ 17. 466 ಟಿಎಂಸಿ ನೀರನ್ನು 10 ಟಿಎಂಸಿ ಕುಡಿಯುವ ನೀರಿನ ಸಲುವಾಗಿ 2 ಟಿಎಂಸಿ    ರಾಯಬಸವ ಕಾಲುವೆ ಗೆ ಎರಡು ಟಿಎಂಸಿ ಡೆಡ್ ಸ್ಟೋರೇಜ್ 3 ಟಿಎಂಸಿ ಹವೆಯಾಗುವ ನೀರು ಎಂದು ಇಟ್ಟುಕೊಂಡಲ್ಲಿ ರೈತರಿಗೆ ನವೆಂಬರ್ 20ರವರೆಗೆ ನೀರನ್ನು ಹರಿಸಬಹುದಾಗಿದೆ.

            ಇದರಿಂದ ಭತ್ತ ಮೆಕ್ಕೆಜೋಳ ಮತ್ತು ಜೋಳದ ಫಸಲು ಶೇಕಡ 80ರಷ್ಟು ಕೈ ಸೇರುತ್ತದೆ ಆದರೆ ಮೆಣಸಿನಕಾಯಿ ಬೆಳೆ ದ ರೈತರು ನೀರಿಲ್ಲದೆ ಸಂಕಷ್ಟಕ್ಕೆ ಒಳಗಾಗಿ ನಷ್ಟವನ್ನು ಅನುಭವಿಸಲಿದ್ದಾರೆ ರಾಜ್ಯದ ಮುಖ್ಯಮಂತ್ರಿಗಳು ಆಂಧ್ರ​‍್ರದೇಶದ ಜನ ಪ್ರತಿನಿಧಿಗಳೊಂದಿಗೆ ಮಾತನಾಡಿ ನಾಲ್ಕು ಟಿಎಂಸಿ ನೀರನ್ನು ಹೆಚ್ಚಿಗೆ ಪಡೆದಲ್ಲಿ ಮೆಣಸಿನಕಾಯಿ ಬೆಳೆ ರೈತರಿಗೆ ಸಹ ಅನುಕೂಲವಾಗಲಿದೆ ಎಂದರು.                        ರಾಜ್ಯದ ಸಿಎಂ ತೆಲಂಗಾಣ ಮತ್ತು ಆಂಧ್ರ​‍್ರದೇಶದ ನೀರಾವರಿ ಸಚಿವರೊಂದಿಗೆ ಮಾತನಾಡಿದಲ್ಲಿ ಈ ತಿಂಗಳು ಅಂತ್ಯದವರಿಗೆ ಕಾಲುವೆಗೆ ನೀರು ಹರಿಸಬಹುದಾಗಿದೆ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ನೀರಾವರಿ ಸಚಿವರು ಅವರೊಂದಿಗೆ ಮಾತನಾಡಬೇಕೆಂದು ಒತ್ತಾಯಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ದರೂರು ವೀರಭದ್ರನಾಯಕ ಕೊಂಚಿಗೇರಿ ಶಿವಪ್ಪ ತಾತ ಹೆಚ್ಚುಳ್ಳಿ ಸಿದ್ದಯ್ಯ ಸ್ವಾಮಿ ಗೋವಿಂದ ಸಾಗರ್ ಗೌಡ ಜಾಲಿಹಾಳ್ ಶ್ರೀಧರ್ ಗಂಗಾವತಿ ವೀರೇಶ್ ಸತ್ಯನಾರಾಯಣರಾವ್ ಸೇರಿದಂತೆ ಇತರರಿದ್ದರು. 


ಸುದ್ದಿ ಓದಿ