ಸಿಂಧಗಿ

ವಾಲ್ ಪೋಸ್ಟರ್ ಬಿಡುಗಡೆ ಸಮಾರಂಭ

ವಾಲ್  ಪೋಸ್ಟರ್ ಬಿಡುಗಡೆ ಸಮಾರಂಭ

ಸಿಂದಗಿ: ಶಿವಯೋಗಿ ಮಂದಿರವನ್ನು ಸ್ಥಾಪಿಸಿದ ಮಹಾನ ಪುರುಷ ಹಾನಗಲ್ ಗುರುಕುಮಾರ ಮಹಾಸ್ವಾಮಿಗಳು ಅವರ ಚರಿತ್ರೆಯನ್ನು ಚಲನಚಿತ್ರದ ಮೂಲಕ ಬಿತ್ತರಸುತ್ತಿರುವುದು ಅವರ ದೃಷ್ಠಾಂತಗಳನ್ನು ನಾವೆಲ್ಲ ಮೈಗೂಡಿಸಿಕೊಂಡು ನಡೆಯಬೇಕು ಎಂದು ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು ಸಲಹೆ ನೀಡಿದರು. 

 ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಕುಮಾರಮಹಾಸ್ವಾಮಿಗಳ  ಕುರಿತಾದ ಚಲನಚಿತ್ರ ವಿರಾಟಪುರ ವಿರಾಗಿ ಚಿತ್ರ ಈಗಾಗಲೇ ವಿನ್ಯಾಸಗೊಂಡಿದ್ದು ಅದರ ಪ್ರಚಾರಾರ್ಥವಾಗಿ ಅನೇಕ ಮಠಾಧೀಶರ  ನೇತೃತ್ವದಲ್ಲಿ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕಾ ಪದಾಧಿಕಾರಿಗಳ ಸಹಯೋಗದಲ್ಲಿ ವಾಲ್  ಪೋಸ್ಟರ್ ( ಗೋಡೆ ಚಿತ್ರ) ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಹಾನಗಲ್ ಕುಮಾರ ಮಹಾಸ್ವಾಮಿಗಳೆಂದರೆ ಕರ್ನಾಟಕದ ಪವರ್ ಇದ್ದಹಾಗೆ ಎನ್ನುವುದಕ್ಕೆ ಅವರು ಮಾಡಿದ ಪವಾಡಗಳೇ ನಿದರ್ಶನ.  ಕುಮಾರ ಶಿವಯೋಗಿಗಳ ಹಾಗೂ ಸಿಂದಗಿ ಮಠಕ್ಕೆ ಅವಿನಾವಭಾವ ಸಂಬಂದವಿತ್ತು. ಅವರ ಜೀವನ ಚರಿತ್ರೆಯನ್ನು ಇಂದಿನ ಯುವ ಪಿಳಿಗೆಗೆ ತಲುಪಿಸುತ್ತಿರುವ ಕಾರ್ಯ ಶ್ಲ್ಯಾಘನೀಯ ಎಂದರು.  

 ಚಲನಚಿತ್ರದ ವಾಲ್  ಪೋಸ್ಟರ್ ( ಗೋಡೆ ಚಿತ್ರ) ಬಿಡುಗಡೆಗೊಳಿಸಿದ ಸಾರಂಗಮಠದ ಪೂಜ್ಯಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳರವ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತು ವಿಚಾರ ಮಾಡಿದಂತವರಲ್ಲ. ಅಂದು ಜನರು ಊಟಕ್ಕೂ ಪರಿತಪ್ಪಿಸುವ ಸಂದರ್ಭದಲ್ಲಿ ಸುಮಾರು 8 ಗಂಟೆಗಳ ಕಾಲ ಕಂತಿ ಬಿಕ್ಷೆ ಮಾಡಿ ಸಮಾಜವನ್ನು ಬದುಕಿಸಿ ಶಿಕ್ಷಣದ ಕ್ರಾಂತಿಯನ್ನೆ ಎಬ್ಬೀಸದಿದ್ದರೆ ನಾವೆಲ್ಲ ಶಿಕ್ಷಣದಿಂದ ವಂಚಿತರಾಗುತ್ತಿದ್ದೇವು ಎಂದರು. 

 ವೀರಕ್ತಮಠದ ಬಸವಪ್ರಭು ದೇವರು, ಗುರುದೇವಾಶ್ರಮದ ಶಾಂತಗಂಗಾದರ ಸ್ವಾಮಿಗಳು, ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕಾಧ್ಯಕ್ಷ ಅಶೋಕ ವಾರದ ಮಾತನಾಡಿದರು. 

ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ,  ಸತೀಶ ಕವಲಗಿ, ಕಿರಣ ಕೊರಿ, ಮಹಾಂತೇಶ ಪಟ್ಟಣಶೆಟ್ಟಿ, ಶಕುಂತಲಾ ಹಿರೇಮಠ, ರಮೇಶ ಜೋಗುರ, ಮಾದೇವಿ ಹಿರೇಮಠ, ಸದಾಶಿವ ಕುಂಬಾರ, ಮಾದೇವಿ ಬಮ್ಮಣ್ಣಿ ಸೇರಿದಂತೆ ಅನೇಕರಿದ್ದರು. 

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚೆನ್ನಪ್ಪ ಕತ್ತಿ ಸ್ವಾಗತಿಸಿ ಪ್ರಾಸ್ತಾವಿಕವಗಿ ಮಾತನಾಡಿದರು. ಪ್ರಾಧ್ಯಾಪಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.  

  

ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಕುಮಾರಮಹಾಸ್ವಾಮಿಗಳ ಕುರಿತಾದ ಚಲನಚಿತ್ರ ವಿರಾಟಪುರ ವಿರಾಗಿ ಚಿತ್ರ ಈಗಾಗಲೇ ವಿನ್ಯಾಸಗೊಂಡಿದ್ದು ಅದರ ಪ್ರಚಾರಾರ್ಥವಾಗಿ ವಾಲ್  ಪೋಸ್ಟರ್ ( ಗೋಡೆ ಚಿತ್ರ)ವನ್ನು  ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಬಿಡುಗಡೆಗೊಳಿಸಿದರು. 


ಸುದ್ದಿ ಓದಿ