ವನಮಹೋತ್ಸವ ಕಾರ್ಯಕ್ರಮಕ್ಕೆ ವಿರುಪಾಕ್ಷ ಮಾಮನಿ ಚಾಲನೆ
ಸವದತ್ತಿ 26: ಮನುಷ್ಯನ ಉತ್ತಮ ಆರೋಗ್ಯಕ್ಕೆ ಶುದ್ದವಾದ ಗಾಳಿ ಅತ್ಯವಶ್ಯವಾಗಿದ್ದು, ಸಸ್ಯರಾಶಿಯನ್ನು ಬೆಳೆಸುವದರ ಮೂಲಕ ನಾವು ಉತ್ತಮ ಗಾಳಿಯನ್ನು ಪಡೆದು ಆರೋಗ್ಯಕರ ಬದುಕನ್ನು ಸಾಗಿಸಲು ಸಾಧ್ಯ ಎಂದು ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಹೇಳಿದರು.
ಪಟ್ಟಣದ ಕೆ.ಎಮ್.ಮಾಮನಿಯವರ ತೋಟದಲ್ಲಿ ಭಾರತೀಯ ಜನತಾಪಾರ್ಟಿಯ ಕಾರ್ಯಕರ್ತರಿಂದ ಪಂಡಿತ್ ದೀನದಯಾಳ ಉಪಾಧ್ಯ ಅವರ ಜನ್ಮ ದಿನದ ಅಂಗವಾಗಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ ಮಹಾನ್ ನಾಯಕರ ಜಯಂತಿಗಳನ್ನು ಪರಿಸರ ರಕ್ಷಣೆಯ ವಿಚಾರದೊಂದಿಗೆ ಸಸಿ ನೆಡುವ ಮೂಲಕ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಜಗದೀಶ ಶಿಂತ್ರಿ, ಶಿವಾನಂದ ಹೂಗಾರ, ರಾಜಶೇಖರ ನಿಡವಣಿ, ಮಲ್ಲಿಕಾರ್ಜುನ ಬೀಳಗಿ, ಮಹಾಂತೇಶ ಸುಭೇದಾರ, ವಿಜಯ ಬೆಳವಡಿ, ಉದಯ ಹೂಗಾರ, ವಿರೇಶ ಪ್ರಬುನವರ, ಅರ್ಜುನ ಅಮ್ಮೋಜಿ, ನಯನಾ ಭಸ್ಮೆ, ಬಸವರಾಜ ಪುಟ್ಟಿ, ಜಮೀಲ ಲಕ್ಷ್ಮೇಶ್ವರ, ಶಿವಾನಂದ ಶಿಂತ್ರಿ, ವಿ.ಎಚ್.ಪಾಟೀಲ, ಮದನ ಶಿಂಧೆ, ಬಸವರಾಜ ಇಂಚಲ, ದೀಪಕ ಕಾಡನ್ನವರ, ರಾಜು ಸಾಲಿಮಠ, ಅಶೋಕ ಯಡ್ರಾಂವಿ, ಉಮೇಶ ಭೀಮನ್ನವರ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.