ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಮೇಲೆ ದೌರ್ಜನ್ಯ: ವೈದ್ಯ, ಸಿಬ್ಬಂದಿಯಿಂದ ಪ್ರತಿಭಟನೆ
ಜಮಖಂಡಿ 29: ತಾಲೂಕಾ ಸರಕಾರಿ ಉಪವಿಭಾಗ ಸಾರ್ವಜನಿಕ ಆಸ್ಪತ್ರೆಯಲ್ಲಿನ ಆನಾಥ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೆಆರ್ಎಸ್ ಪಕ್ಷದ ಮೂವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ. ತಾಲೂಕಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಆಸ್ಪತ್ರೆಯ ಆವರಣದಲ್ಲಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿ ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರಿಗೆ ಮನವಿ ಸಲ್ಲಿಸಿದರು.
ಮುಖ್ಯವೈದ್ಯಾಧಿಕಾರಿ ಡಾ.ಕೃಷ್ಣಾ ಬಣ್ಣದ ಮಾತನಾಡಿ. ನಾನು ದುಡ್ಡು ಗಳಿಸಬೇಕೆಂದು ನಾನು ವೈದ್ಯನಾಗಿಲ್ಲ. ಇಲ್ಲಿ ಪ್ರಾಮಾಣಿಕವಾಗಿ ಬಡ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾವ ರೋಗಿಗಳನ್ನೂ ಚಿಕಿತ್ಸೆ ಇಲ್ಲದೆ ಕಳಿಸುತ್ತಿಲ್ಲ. ಅನಾಥ ರೋಗಿಗಳಿಗೆ, ಸಾರ್ವಜನಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳಿಗೆ ತಿನ್ನಲು ಆಹಾರವನ್ನು ನೀಡುವ ಜೊತೆಗೆ ಸರ್ಕಾರಿ ಸೌಲಭ್ಯಗಳನ್ನು ಸರಿಸಮಾನವಾಗಿ ಎಲ್ಲ ರೋಗಿಗಳಿಗೆ ನೀಡಲಾಗುವುದು.
ಅನವಶ್ಯಕವಾಗಿ ಕೆಆರ್ಎಸ್ ಪಕ್ಷದವರು ಎಂದು ಹೇಳಿಕೊಂಡ ಮುತ್ತು ಮಹಿಷವಾಡಗಿ, ಸಾಗರ ಕುಂಬಾರ, ಶಿವಾನಂದ ಹೂಗಾರ ಇವರು ನಮ್ಮ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಜೊತೆಗೆ ದೌರ್ಜನ್ಯ ಎಸಗಿದ್ದಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಮೀಶಿ. ದಾನೇಶ ಘಾಟಗೆ, ಯಮನಪ್ಪ ಗಾಣದಾಳ, ಶ್ರೀನಾಥ ನವಣಿ ಮಾತನಾಡಿ. ಇದೊಂದು ಉಪವಿಭಾಗ ಆಸ್ಪತ್ರೆಯಾಗಿದ್ದು. ಬೇರೆ ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹಲವಾರು ಬಡ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಅಂತವರಿಗೆ ಇಲ್ಲಿಯ ವೈದ್ಯರು ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಕೆಲ ಮಾಹಿತಿ ಹಕ್ಕುದಾರರು ಸಾಮಾಜಿಕ ಮಾಹಿತಿ ಹಕ್ಕುದಾರರು ಮತ್ತು ಕೆಲವರು ಇಲ್ಲ. ಸಲ್ಲದ ಆರೋಪ ಮಾಡಿ ಅವರಿಗೆ ಅನವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಬಡರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ. ಇನ್ನೂ ದಲಿತಪರ ಸಂಘಟನೆಗಳಿಗೆ ಅವಹೇಳನಕಾರಿ ಮಾತನಾಡಿ. ದಲಿತ ಸಮಾಜವನ್ನು ಕೆರಳಿಸಿದ್ದಾರೆ. ಅಂತವರ ಮೇಲೆ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಿ ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜೇಸಾಬ ಕಡಕೋಳ ಅಯೂಬ ಗದಗ ಮಾತನಾಡಿದರು.ಡಾ.ಸುನೀತಾ ಎಚ್.ಡಿ. ಡಾ.ರಷ್ಮಿ
ಪಾಟೀಲ, ಡಾ.ವಿ.ಎಸ್.ಕಂದಗಲ್ಲ, ಡಾ.ಸುಧೀರ ಬೆನಕಟ್ಟಿ, ಡಾ.ಎಂ.ಎ.ದೇಸಾಯಿ. ಡಾ.ಗೀತಾ ಮ್ಯಾಗಿನಹಳ್ಳಿ, ಡಾ.ಶ್ರೀಶೈಲ ನಾಯಿಕ, ಡಾ.ಪವನ ಬಳ್ಳೂರ, ಡಾ.ವಿ.ಸಿ.ಮುದಿಗೌಡರ, ಡಾ.ಸತೀಶ ದಳವಾಯಿ, ಡಾ.ಜಮಖಂಡಿ, ಜಿ.ಎಮ್.ಘಾಟಗೆ, ಮಹಾಂತೇಶ ಕುಂಬಾರ, ಜೆ.ಡಿ.ದನ್ನೂರ, ಮುತ್ತು ಕವಟಕೊಪ್ಪ, ಕಮಲಸಾಬ ಶೇಖ, ಎಮ್.ಎ.ಗದ್ಯಾಳ, ಆರಿ್ಡ.ಮುಜಾವರ, ಆರೋಗ್ಯ ಸಿಬ್ಬಂದಿ, ದಲಿತಪರ ಹಾಗೂ ವಿವಿಧ ಸಂಘಟನೆ, ಪಕ್ಷದ ಪದಾಧಿಕಾರಿಗಳು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.