ಯರಗಟ್ಟಿ

ವಾಹನ ಡಿಕ್ಕಿ; ಓರ್ವ ಸಾವು

ವಾಹನ ಡಿಕ್ಕಿ; ಓರ್ವ ಸಾವು


ಯರಗಟ್ಟಿ 28: ಬೆಳಗಾವಿ ಹಿ ಬಾಗಲಕೋಟ ಹೆದ್ದಾರಿಯಲ್ಲಿ ಮಂಗಳವಾರ - ರಾತ್ರಿ 8.30ರ ಸುಮಾರಿಗೆ ವಾಹನ ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಸಾವೀಗೀಡಾಗಿದ್ದಾರೆ. 30-35 ವರ್ಷದ ಇವರ ಎತ್ತರ 5 ಫೂಟ್7 ಇಂಚು, ಗೋಧಿ ಮೈಬಣ್ಣ, ಉದ್ದ ಮುಖ, ಉದ್ದ ಮೂಗು, ಅಗಲವಾದ ಹಣೆ, ಕಪ್ಪು ಕೂದಲು ಇದೆ. ತಿಳಿ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಸುಳಿವು ಸಿಕ್ಕವರು ಮುರಗೋಡ ಪೊಲೀಸ್ ಠಾಣೆ, ಪೋ: 08337-265533, ಮೊ: 9480804079 ಸಂಪರ್ಕಿಸಬಹುದು. 


ಸುದ್ದಿ ಓದಿ