ಜಮಖಂಡಿ

ವೀರಶೈವ ಲಿಂಗಾಯತ ಪಂಚಮಸಾಲಿ, ರಾ ಚ ಸ ಸಂಘದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ

ವೀರಶೈವ ಲಿಂಗಾಯತ ಪಂಚಮಸಾಲಿ, ರಾ ಚ ಸ ಸಂಘದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ

ಜಮಖಂಡಿ 24: ತೇರದಾಳ ಮತಕ್ಷೇತ್ರ ಶಾಸಕ ಸಿದ್ದು ಸವದಿ ಪಂಚಮಸಾಲಿ ಸಮಾಜವನ್ನು ಟೀಕಿಸುವ ಜೊತೆಗೆ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. 2ಎ, ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡದೆ. ಮುರಗೇಶ ನಿರಾಣಿ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ರಬಕವಿ-ಬನಹಟ್ಟಿ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಭೀಮಶಿ ಮಗದುಮ ಹೇಳಿದರು. 

ನಗರದ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ರಾಣಿ ಚನ್ನಮ್ಮ ಸಹಕಾರಿ ಸಂಘದ ಸಹಯೋಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಸ್ಥಳಿಯ ಸಂಘ, ಸಂಸ್ಥೆಗಳಿಗೆ ಅಧ್ಯಕ್ಷ, ಉಪಧ್ಯಕ್ಷ ಆಯ್ಕೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪಂಚಮಸಾಲಿ ಸಮಾಜದ 2ಎ,ಮೀಸಲಾತಿ ಹೋರಾಟ ಸ್ವಾಮೀಜಿಯವರ ನೇತೃತ್ವದಲ್ಲಿ ಸುಮಾರು 22 ಕಿ,ಮೀ ಪಾದಯಾತ್ರೆಯಲ್ಲಿ ಮೀಸಲಾತಿ ಬಗ್ಗೆ ಮಾತನಾಡದೆ. ಕೇವಲ ಮುರಗೇಶ ನಿರಾಣಿ ಅವರ ಬಗ್ಗೆ ಟೀಕಿಸುವ ಕೆಲಸ ಮಾಡಿದ್ದಾರೆ. ಸಮಾಜದ ಮುಖಂಡರ ಕಾಲು ಎಳೆಯುವ ಕೆಲಸ ಬಿಟ್ಟರೆ. ಅವರಿಗೆ ಯಾವ ಕೆಲಸವು ಇಲ್ಲ. ಸಮಾಜದ ಸ್ವಾತ್ಯ-್ತ ಹಾಳು ಮಾಡುತ್ತಿದ್ದಾರೆ. ತಾಕತ್ತು ಇದ್ದರೆ. ಸಮಾಜವನ್ನು ಕಟ್ಟಿ. ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶ ಮಾಡಿ ತೋರಿಸಲಿ. ಅವರನ್ನು ಯಾರು ನಂಬಬೇಡಿ. ಮುರಗೇಶ ನಿರಾಣಿ ಅವರು ಮೂರು ಪೀಠಗಳು ಆದರು ಸಹ ಹಣದ ಸಹಾಯ,ಸಹಕಾರವನ್ನು ನೀಡಿ. ಸಮಾಜವನ್ನು ಕಟ್ಟುವ ಕೆಲಸ ಮಾಡಿದ್ದಾರೆ ಎಂದರು. 

ಸಂಗಮೇಶ ನಿರಾಣಿ ಮಾತನಾಡಿ, ಪಂಚಮಸಾಲಿ ಸಮಾಜ ರಾಜ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡುವ ಸಮಾಜವಾಗಿದೆ. ಜಮಖಂಡಿ ತಾಲೂಕಿನಲ್ಲಿ 20 ವರ್ಷದ ಹಿಂದೆ ಸಂಘಟನೆಯ ಮಾಡಿ.ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡುತ್ತಾ ಬಂದಿದೆ. ಮೊದಲು ನಮ್ಮ ಸಮಾಜ ಕಡುಬಡತನದ ಸಮಾಜವಾಗಿತ್ತು. ಕೃಷ್ಣಾ ನದಿಯಿಂದ ಸಂಪೂರ್ಣವಾಗಿ ಭೂಮಿಗಳು ನೀರಾವರಿ ಹೊಂದಿದ್ದು. ಇವಾಗ ಪ್ರತಿಯೊಬ್ಬರು ಶ್ರೀಮಂತರಾಗಿದ್ದಾರೆ. ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಹೋದರ ಮುರಗೇಶ ನಿರಾಣಿ ಅವರು. 1,ಕೋಟಿ ರೂ,ಸ್ವಂತ ನೀಡಿ. ಸರಕಾರದಿಂದ 3,ಕೋಟಿ ರೂ,ಅನುದಾನವನ್ನು ನೀಡಿದ್ದಾರೆ. ಇನ್ನೂ ಭವನಕ್ಕೆ ಶಾಲಾ ಮಕ್ಕಳು ಉಳಿದುಕೊಳ್ಳಲು ಹಾಗೂ ಶ್ರೀಗಳಿಗಾಗಿ ರೂಂಗಳ ಕಟ್ಟಡವನ್ನು ಮಾಡಬೇಕಾಗಿದೆ. ಎಲ್ಲರೂ ಸೇರಿಕೊಂಡು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಈ ಭಾಗದಲ್ಲಿ ಸಹೋದರ ಮುರಗೇಶ ನಿರಾಣಿ ಅವರು ಸಕ್ಕರೆ ನಾಡನ್ನಾಗಿಸಿದ್ದಾರೆ. ಪಕ್ಕದಲ್ಲಿ ಇದ್ದರನ್ನು ಮೇಲೆ ಎತ್ತಿ. ಅವರಿಗೂ ಕೂಡಾ ಕಾರ್ಖಾನೆಗಳನ್ನು ನಿರ್ಮಿಸಲು ಸಹಾಯ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಸಮಾಜದ 20ನೇ ವರ್ಷದ ಅಥವಾ 25ನೇ ವರ್ಷದ ಕಾರ್ಯಕ್ರಮದ ಬಗ್ಗೆ ಚರ್ಚಿಸಿ. 80ಕ್ಕೂ ಅಧಿಕ ಮಠಾಧೀಶ ಸ್ವಾಮೀಜಿಗಳನ್ನು ಕರೆತಂದು ಬೃಹತ್ ಸಮಾವೇಶ ಮಾಡೋಣ ಎಂದು ಸಮಾಜದ ಮುಖಂಡರಿಗೆ ತಿಳಿಸಿದರು. ಸಮಾಜ ಮುಖಂಡರು ಸೇರಿಕೊಂಡು ಚನ್ನಮ್ಮ ಪ್ರಾಧಿಕಾರದ ಶಾಲೆಯನ್ನು ಅತೀ ಶೀಘ್ರದಲ್ಲಿ ಪ್ರಾರಂಭಿಸಬೇಕು ಎಂದರು. 

ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಪಿ,ಎನ್,ಪಾಟೀಲ ಮಾತನಾಡಿ, ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹಾಗೂ ಸಹೋದರ ಇಬ್ಬರು ಸೇರಿ ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಚನ್ನಮ್ಮ ಬ್ಯಾಂಕ್ ಚುನಾವಣೆಯಲ್ಲಿ ಎರಡು ಬಣಗಳಲ್ಲಿ ಒಂದು ಬಣಕ್ಕೆ ಬೆಂಬಲ ನೀಡಿ.ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಂದಿನ ಪ್ರತಿಭಾ ಪುರಸ್ಕಾರ ಸಮಾರಂಭ ಸಭೆಗೆ ಅಡ್ಡಗಾಲು ಹಾಕಿ ಕಾರ್ಯಕ್ರಮವನ್ನು ರದ್ದು ಪಡಿಸಬೇಕೆಂದು ಕನಸು ಕಂಡಿದರು.ಅದಕ್ಕೆ ಹೆದರೆದೆ ಇಂದು ಕಾರ್ಯಕ್ರಮವನ್ನು ಮಾಡಿ ಯಶಸ್ವಿಯಾಗಿದ್ದೇವೆ.ಸಮಾಜ ಭವನದ ಕಟ್ಟಡ ನಿರ್ಮಾಣದಲ್ಲಿ ಸಾಕಷ್ಟು ಬಾರಿ ಟೀಕೆಯನ್ನು ಮಾಡಿ. ಮನಸಿಗೆ ನೋವುಯುಂಟು ಮಾಡುವ ಮಾತುಗಳನ್ನು ಆಡಿದ್ದಾರೆ. ಇಂತವರು ಸಮಾಜವನ್ನು ಹೇಗೆ ಕಟ್ಟುತ್ತಾರೆ ಎಂದು ತಮ್ಮ ನೋವನ್ನು ಕಾರ್ಯಕ್ರಮದಲ್ಲಿ ತೊಡಿಕೊಂಡರು. 

ಬಿ,ಎಸ್,ಸಿಂಧೂರ, ಸುನಿತಾ ಬಳಗಾರ ಮಾತನಾಡಿದರು, ಪ್ರಭುಲಿಂಗದೇವರು ಜಕ್ಕನೂರ, ಧರಿದೇವರ ಮಠದ ಲಕ್ಷ್ಮಣ ಮುತ್ಯಾ, ಸಂಗಮೇಶ ಬಿರಾದರ, ಶ್ರೀಶೈಲ ದಲಾಲ, ರಾಮಣ್ಣ ಹಿಪ್ಪರಗಿ, ಸಿ,ಪಿ,ಜನವಾಡ, ಅಪ್ಪಾಸಾಬ ಚೌಗಲಾ, ಕೆ,ಕೆ,ತುಪ್ಪದ, ಮಲ್ಲಕಾರ್ಜುನ ಹೊಳಿಗಿ, ರವಿ ಯಡಹಳ್ಳಿ,  ಸುಭಾಸ ಲಗಳಿ, ಭರಮಪ್ಪ ಉಳ್ಳಾಗಡ್ಡಿ, ಸಿದ್ದಪ್ಪ ಗೌಡಪನ್ನವರ, ಡಿ,ಬಿ,ಜೋಗದಂಡೆ, ಎಲ್,ಕೆ,ಉದಪುಡ್ಡಿ, ವಿಲಾಸ ನಡುವಿನಮನಿ, ಎ,ಎಸ್,ಜನವಾಡ, ಜಯಶ್ರೀ ಕಾಡಗಿ,ಸಂಗಮೇಶ ಕೌಜಲಗಿ, ಪ್ರಭು ಜನವಾಡ, ಸಂಗಪ್ಪ ಸಂತಿ, ಪ್ರಕಾಶ ಪಾಟೀಲ, ಬಸನಗೌಡ ಪಾಟೀಲ, ಕಾಡಪ್ಪ ಗಡಾದ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿ,ಎಮ್,ಜುಲ್ಪಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಬಳಗಾರ ಸ್ವಾಗತಿಸಿದರು, ವಿಮಲಾ ಹಲವಾಯಿ ನಿರೂಪಿಸಿದರು, ಚೈತ್ರಾ ಪಾಟೀಲ ರೈತ ಗೀತೆ ಹಾಡಿದರು. 


ಸುದ್ದಿ ಓದಿ