ಜಮಖಂಡಿ

ವೇದಾಂತ್ ಪರಿಷತ್ ಕಾರ್ಯಕ್ರಮ

ವೇದಾಂತ್ ಪರಿಷತ್ ಕಾರ್ಯಕ್ರಮ

ಲೋಕದರ್ಶನ ವರದಿ,

ಜಮಖಂಡಿ 16: ಜಾತಿ, ಮತ, ಪಂತಗಳ ಭೇಧ, ಭಾವವಿಲ್ಲದೆ ವೇದಾಂತ ಜ್ಞಾನವನ್ನು ಎಲ್ಲರಿಗೂ ಉಪದೇಶವನ್ನು ನೀಡುವ ಉದ್ದೇಶದಿಂದ ವೇದಾಂತ ಪರಿಷತವಾಗಿದೆ ಎಂದು ಸಾಧು ಸಂಸ್ಥಾನಮಠ ಇಂಚಲದ ಶಿವಾನಂದ ಭಾರತಿ ಸ್ವಾಜೀ ಹೇಳಿದರು.

ತಾಲೂಕಿನ ಆಲಬಾಳ ಗ್ರಾಮದಲ್ಲಿ ನಡೆದ 26ನೇ ವೇದಾಂತ್ ಪರಿಷತ್ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆರ್ಶಿವಚನ ನೀಡಿದ ಅವರು. ಸಿದ್ದಾರೂಡರ ಮಠದಲ್ಲಿ ನಿರಂತರವಾಗಿ ವೇದಾಂತ ಪರಿಷತ್ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ವೇದಾಂತ ಶಾಸ್ತ್ರವನ್ನು ತಿಳಿದುಕೊಳ್ಳಬೇಕಾಗಿದೆ. ನಾಡಿನ ಜನತೆ ಎಲ್ಲರು ಒಂದಾಗಿ. ಒಳ್ಳೆಯ ಮಾರ್ಗದ ಕಡೆಗೆ ನಡೆಬೇಕಾದಾರೆ ಸಿದ್ದಾರೂಡರ ಸ್ಮರಣಿ ಹಾಗೂ ಮಹಾತ್ಮರ ವಾಣಿಯನ್ನು ಕೇಳುವುದು ಮುಖ್ಯವಾಗಿದೆ. ಅಜ್ಞಾನವನ್ನು ಬಿಟ್ಟು.  ಜ್ಞಾನದ ಬೆಳಕಿನ ಕಡೆಗೆ ಭಕ್ತಾಧಿಗಳು ನಡೆಯಬೇಕು. ಗುರುವಿನ ಸ್ಮರಣೆ ಮಾಡುವದು ಇಂದಿನ ದಿನಮಾನದಲ್ಲಿ ಅವಶ್ಯವಾಗಿದೆ. ವೇದಾಂತ ಪರಿಷತ್ನಲ್ಲಿ ಮಹಾತ್ಮರ ವಾಣಿಯನ್ನು ತಿಳಿದುಕೊಂಡರೆ ಮಾತ್ರ ಜ್ಞಾನ ದೊರೆಯುತ್ತದೆ ಎಂದರು. 

ಸಾಧು ಸಂಸ್ಥಾನಮಠ ಇಂಚಲ ಮಠದ ಶಿವಾನಂದ ಭಾರತಿ ಸ್ವಾಜೀಗಳ 83ನೇ ಹುಟ್ಟು ಹಬ್ಬಕ್ಕೆ ಪ್ರಯುಕ್ತ ತೊಟ್ಟಿಲು ಕಾರ್ಯಕ್ರಮ ಹಾಗೂ ಭಕ್ತಾಧಿಗಳಿಂದ ತುಲಾಭಾರವನ್ನು ಮಾಡಿದರು. ಮೂರು ದಿನ ಕಾಲ ಪ್ರವಚನ ಮತ್ತು ಸಿದ್ದಾರೂಡ ಮೂರ್ತಿಗೆ ಅಭಿಷೇಕ ಮಾಡಲಾಯಿತು.

ಸಾಧು ಸಂಸ್ಥಾನಮಠದ ಪೂರ್ಣಾನಂದ ಸ್ವಾಮೀಜಿ, ಶಂಕರಟ್ಟಿಯ ಶಂಕ್ರಾನಂದ ಸ್ವಾಮೀಜಿಯವರಿಂದ ಪ್ರವಚನ ಜರುಗಿತು. ಸಿದ್ದಾರೂಢಮಠದಲ್ಲಿ ಭಕ್ತಾಧಿಗಳಿಂದ ಭಜನೆ. ಕೀರ್ತನೆಗಳು ನಡೆದವು.




ಸುದ್ದಿ ಓದಿ