ಜಮಖಂಡಿ

ನಾಳೆ ವರ್ಣಸಿಂಧು ಚಿತ್ರಕಲಾ ಪ್ರದರ್ಶನ

ನಾಳೆ ವರ್ಣಸಿಂಧು ಚಿತ್ರಕಲಾ ಪ್ರದರ್ಶನ
ನಗರದ ಮಹೇಶ ಚಿತ್ರಕಲಾ ಮಹಾವಿದ್ಯಾಲಯದ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಆರ್ಟ್ ಕ್ರಿಯೇಶನ್ಸ್ ಅಧ್ಯ

ಲೋಕದರ್ಶನ ವರದಿ,

ಜಮಖಂಡಿ 25: ವಿಶ್ವಕರ್ಮ ಆರ್ಟ್  ಕ್ರಿಯೇಶನ್ಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹೇಶ ಚಿತ್ರಕಲಾ ಮಹಾವಿದ್ಯಾಲಯ ಸಹಯೋಗದಲ್ಲಿ ಡಿ.27ರಂದು ವರ್ಣಸಿಂಧು  ಚಿತ್ರಕಲಾ ಪ್ರದರ್ಶನದಲ್ಲಿ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ 60 ಚಿತ್ರಕಲಾ ಕೃತಿಗಳು ಮೂರುದಿನಗಳ ಕಾಲ ಪ್ರದರ್ಶನಗೊಳ್ಳಲಿವೆ ಎಂದು ವಿಶ್ವಕರ್ಮ ಆರ್ಟ್  ಕ್ರಿಯೇಶನ್ಸ್ ಅಧ್ಯಕ್ಷ ಮಂಜುನಾಥ ಕಂಬಾರ ಹೇಳಿದರು.

  ನಗರದ ಮಹೇಶ ಚಿತ್ರಕಲಾ ಮಹಾವಿದ್ಯಾಲಯದ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಲಾಸಂಸ್ಥೆಯು ಕಳೆದ ಹನ್ನೇರಡು ವರ್ಷಗಳಿಂದ ಕಲಾಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯ ಮತ್ತು ಅಂತರಾಜ್ಯಗಳಲ್ಲಿ ಕಲಾಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಈ ಕಲಾ ಸಂಸ್ಥೆ ನಿರಂತರವಾಗಿ ಪ್ರತಿ ವರ್ಷ ಚಿತ್ರಕಲಾ ಕ್ಷೇತ್ರದಲ್ಲಿ ವಿಶೇಷವಾಗಿ ಶಿಬಿರಗಳು ಹಾಗೂ ಸಮೂಹ ಕಲಾ ಪ್ರದರ್ಶನಗಳು, ಅನೇಕ ಕಾಯರ್ಾಗಾರಗಳನ್ನು ಯುವ ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ರಾಜ್ಯ ಹಾಗೂ ಹೊರರಾಜ್ಯದಲ್ಲಿ ನಡೆಸಿಕೊಂಡು ಬಂದಿದೆ. ಕಳೆದ ವರ್ಷ 'ಕಲಾವಿಕಾಸ' ರಾಜ್ಯಮಟ್ಟದ ಕಲಾಶಿಬಿರವನ್ನು ಹಾಗೂ 'ಕಲಾಸಂಕ್ರಾಂತಿ' ರಾಷ್ಟ್ರೀಯ ಕಲಾಶಿಬಿರವನ್ನು ಕೇಂದ್ರ ಸಂಸ್ಕೃತಿ ಮಂತ್ರಾಲಯದ ಸಹಯೋಗದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುತ್ತದೆ ಎಂದರು.

ಮಹೇಶ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರ ್ರಜಿ.ವಿ.ಹಂಪಣ್ಣವರ, ಮಾತನಾಡಿ, ಡಿ, 27ರಂದು ಬೆಳಿಗ್ಗೆ 11 ಗಂಟೆಗೆ ರಾಯಲ್ ಪ್ಯಾಲೇಸ್ ಶಾಲೆ ಆಡಳಿತಾಧಿಕಾರಿ ಬಸವರಾಜ ನ್ಯಾಮಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಶೋಕ ಕೆ,ಬಸಣ್ಣವರ ಭಾಗವಹಿಸುವರು. ಅಧ್ಯಕ್ಷತೆಯನ್ನು ಜಿ.ವಿ.ಹಂಪಣ್ಣವರ ವಹಿಸಿಕೊಳ್ಳುವರು ಎಂದು ತಿಳಿಸಿದರು.  

ಮಾಹಾವಿದ್ಯಾಲಯ ಉಪನ್ಯಾಸಕ ಬಿ,ಜಿ, ಚೌಧರಿ ಮಾತನಾಡಿ, ದಿ,27 ರಿಂದ 29 ರವರೆಗೆ ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಸಾರ್ವಜನಿಕರಿಗೆ ನೋಡಲು ತೆರೆದಿರುತ್ತದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಈ ಪ್ರದರ್ಶನಕ್ಕೆ ಆಗಮಿಸಿ, ಮೂಲ ಕಲಾಕೃತಿಗಳ ಪ್ರದರ್ಶನವನ್ನು ವೀಕ್ಷಿಸಿಸಲು ಅವಕಾಶವಿರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಬಿ,ವಾಯ್,ನಾಯ್ಕರ ಇದ್ದರು.


ಸುದ್ದಿ ಓದಿ