ಜ.22 ರಂದು ರಾಮ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
ಜಮಖಂಡಿ 20: ಅಯೋಧ್ಯೆಯಲ್ಲಿನ ನಡೆಯುವ ರಾಮ ಪ್ರತಿಷ್ಠಾಪನೆ ದಿನದಂದು ಇಲ್ಲಿನ ರಾಮ ಮಂದಿರದಲ್ಲಿ ಜ.22 ರಂದು 13 ಜೋಡಿ ದಂಪತಿಗಳ ರಾಮ ತಾರಕ ಹೋಮ ಹವನವನ್ನು ಮಾಡುವ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಮ ಮಂದಿರ ಕಮೀಟಿ ಅಧ್ಯಕ್ಷ ಉಮೇಶ ದೇಸಾಯಿ ಹೇಳಿದರು.
ನಗರದ ರಾಮ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವ ಚಿದಂಬರ ಸೇವಾ ಸಮೀತಿ, ಶ್ರೀ ರಾಮ ಮಂದಿರ ಟ್ರಸ್ಟ, ರಾಮ ಗಲ್ಲಿ, ಗಡಾದ ಗಲ್ಲಿ, ವರ್ತಕ ಗಲ್ಲಿ, ಮಲ್ಲಿಕಾರ್ಜುನ ಗಲ್ಲಿಗಳ ಸಹಯೋಗದಲ್ಲಿ ರಾಮ ತಾರಕ ಹೋಮ, ಬೆಳಿಗ್ಗೆ 8 ಗಂಟೆಗೆ ರಾಮನಿಗೆ ಅಭಿಷೇಕ, ರಾಮ ತಾರಕ ಹೋಮದಲ್ಲಿ 13 ಜೋಡಿ ದಂಪತಿಗಳು ಹೋಮಕ್ಕೆ ಸಂಕಲ್ಪ ಮಾಡಲಿದ್ದು, ಮಧ್ಯಾಹ್ನ 12 ಕ್ಕೆ ನಗರದ ಕರ ಸೇವಕರಿಗೆ ಸನ್ಮಾನಿಸಲಾಗುವುದು. ರಾಮ ನಾಮ ಜಪ ಸಾಮೂಹಿಕವಾಗಿ ನಡೆಯುವುದು. 1 ರಿಂದ 3 ಗಂಟೆಯವರೆಗೆ ಮಹಾಪ್ರಸಾದ ಜರುಗುವುದು. ಸಂಜೆ 7 ಗಂಟೆಯಿಂದ 8 ರವರೆಗೆ ಶಿವ ಚಿದಂಬರ ಭಜನೆ ಹಾಗೂ ದೀಪೋತ್ಸವ ನಡೆಯುವದು. ಕಾನಿಪ ಸಂಘದ ಅಧ್ಯಕ್ಷ ಅಪ್ಪು ಪೋತರಾಜ ಅವರು ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಿದ್ದಾರೆಂದು ತಿಳಿಸಿದರು.
ವ್ಹಿ.ಆರ್. ದೇಸಾಯಿ, ಪಿ.ಪಿ. ಜೋಶಿ ಮಾತನಾಡಿದರು. ಅಪ್ಪಾಸಾಬ ಗಡಾದ ಇದ್ದರು. ಮಲ್ಲು ಮಠ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉದಯ ದಾಣಿ ವಂದಿಸಿ