ದ್ವಿತೀಯ ಹಂತದ ಕೊರೊನಾ ವಾರಿಯರ್ಸ್ಗೆ ವ್ಯಾಕ್ಸಿನ್
ಅಥಣಿ 08: ದೇಶಾದ್ಯಂತ ಕೊರೊನಾ ವಾರಿಯರ್ಸ್ಗಳಿಗೆ ಕೋ ವ್ಯಾಕ್ಸೀನ್ ನೀಡಲಾಗುತ್ತಿದ್ದು ಸೋಮವಾರ ಇವತ್ತು ಎರಡನೇ ಹಂತದ ಕೊರಾನಾ ವಾರಿಯರ್ಸ್ಗಳಿಗೆ ಅಥಣಿ ಪಟ್ಟನದ ಸಮುದಾಯದ ಆಸ್ಪತ್ರೆಯಲ್ಲಿ ಚುಚ್ಚು ಮದ್ದು ನೀಡಲಾಯಿತು. ಜೊತೆಗೆ ಎರಡನೆ ಹಂತವಾಗಿ ಪೊಲೀಸ್ ಇಲಾಖೆಯ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಕೋರೊನಾ ವ್ಯಾಕ್ಸಿನ್ ನೀಡಲಾಯಿತು.
ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್ ಕೋ ವ್ಯಾಕ್ಸೀನ್ ಪಡೆದುಕೊಂಡು ಮಾದ್ಯಮದವರ ಜೊತೆ ಮಾತನಾಡಿ, ಮೊದಲನೇ ಹಂತವಾಗಿ ವೈದ್ಯರಿಗೆ ಕೋವಿಡ-19 ವ್ಯಾಕ್ಸಿನ್ ನೀಡಲಾಯಿತು. ನಾವು ಕೂಡ ವ್ಯಾಕ್ಸೀನ್ ಪಡೆದುಕೊಳ್ಳಲಿ ನಿರೀಕ್ಷೆಯಲ್ಲಿದ್ದೆವು. ಕೊರೊನಾ ಮಾರ್ಗಸೂಚಿಯಂತೆ ಇವತ್ತು ಆರಕ್ಷಕರೆ ಲಸಿಕೆ ನೀಡಲಾಗುತ್ತಿದೆ ಇದರಿಂದ ಸಂತೋಷವಾಗಿದೆ, ಹಾಗೂ ನಾನು ಪಡೆದುಕೊಂಡು ಇದರಲ್ಲಿ ಯಾವುದೇ ಅಡ್ಡ ಪರಿಣಾಮ ಇಲ್ಲ. ದೈರ್ಯವಾಗಿ ಎಲ್ಲರೂ ಕೋ ವ್ಯಾಕ್ಸೀನ್ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.