ಜಮಖಂಡಿ

ಸರ್ಕಾರ ಪತ್ರಿಕಾ ವಿತರಕರಿಗೆ ವಿಮೆ ಸಹಿತ ಅಗತ್ಯ ಸೌಲಭ್ಯ ನೀಡುವಂತೆ ಒತ್ತಾಯ

ಸರ್ಕಾರ ಪತ್ರಿಕಾ ವಿತರಕರಿಗೆ ವಿಮೆ ಸಹಿತ ಅಗತ್ಯ ಸೌಲಭ್ಯ ನೀಡುವಂತೆ ಒತ್ತಾಯ

ಲೋಕದರ್ಶನ ವರದಿ,

ಜಮಖಂಡಿ 06: ನಗರದ ಬಸ್ನಿಲ್ದಾಣ ಬಳಿ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಗಜಾನನ ಮುಧೋಳೆ ಅವರು ಕೇಟ್ ಕಟ್ಟ್ ಮಾಡುವ ಮೂಲಕ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು, ಮಳೆ, ಗಾಳಿ, ಚಳಿ ಎನ್ನದೇ ವರ್ಷವಿಡಿ ಪತ್ರಿಕೆ ಹಂಚುವ ಕಾಯಕ ಶ್ರೇಷ್ಠಕಾಯವಾಗಿದೆ. ಸಕರ್ಾರ ಪತ್ರಿಕಾ ವಿತರಕರಿಗೆ ವಿಮೆ ಸಹಿತ ಅಗತ್ಯ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಪತ್ರಕರ್ತ ಶಶಿಕಾಂತ ತೇರದಾಳ, ಆರ್.ಎಸ್.ಹೊನಗೌಡ, ಗುರುರಾಜ ವಾಳ್ವೇಕರ, ಮಲ್ಲೇಶ ಆಳಗಿ, ವಿಜಯಕುಮಾರ ಶಿವಸಿಂಪಿ, ಪತ್ರಿಕಾ ಏಜೆಂಟರಾದ ಕೃಷ್ಣಾ ಕೋಹಳ್ಳಿ, ಈರಣ್ಣ ಕೊಣ್ಣೂರ, ಯಶವಂತ ಕಲೂತಿ, ಸಂಜು ಐಹೊಳ್ಳಿ, ಸಂತೋಷ ಶೆಟ್ಟಿ, ಅಕ್ಷಯ ಖೋತ, ಸಾಗರ ಸೋನಾವನೆ, ವಿಕಾಸ, ಬಸವರಾಜ ಕೋಹಳ್ಳಿ,ಆದಿತ್ಯಾ ಕತಂ, ಸುಜಲ ಗುಲಬಾಳ, ಮೋಹನ ಆಲಗೂರ, ವೆಂಕಟೇಶ ಮುದಕ್ಕನವರ, ಹಣಮಂತ ಮಾಂಗ ಅನೇಕರಿದ್ದರು. 


ಸುದ್ದಿ ಓದಿ