ಜಮಖಂಡಿ

ಡಿ.23 ರಂದು ಅರ್ಬನ ಬ್ಯಾಂಕ ಚುನಾವಣೆ

ಡಿ.23 ರಂದು ಅರ್ಬನ ಬ್ಯಾಂಕ ಚುನಾವಣೆ

ಜಮಖಂಡಿ 20: ನಗರದ ಪ್ರತಿಷ್ಠಿತ ಅರ್ಬನ ಬ್ಯಾಂಕ ಚುನಾವಣೆಯು ಡಿ,23 ರಂದು ನಡೆಯಲಿದ್ದು. 22449 ಮತದಾರರಲ್ಲಿ ಮತದಾರ 7941 ಅರ್ಹ ಮತದಾರರು ಉಳಿದಿದ್ದರು. ನ್ಯಾಯಾಲಯದ ಒಂದನೇ ಆದೇಶದಂತೆ 1158 ಎರಡನೇ ಆದೇಶದಂತೆ 509 ಜನರಿಗೆ ಮತದಾನ ಲಭ್ಯವಾಗಿದೆ. ಇಲ್ಲಿಯವರೆಗೆ 9598 ಮತದಾರರಿದ್ದು. ಇನ್ನೂ ನ್ಯಾಯಾಲಯದ ಆದೇಶವು ಬರುವ ಸಾಧ್ಯತೆಯಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ ಸದಾಶಿವ ಮಕ್ಕೋಜಿ ಹೇಳಿದರು.  

ಇಲ್ಲಿನ ಅರ್ಬನ ಬ್ಯಾಂಕ ಸಭಾ ಭವನದಲ್ಲಿ ನಡೆದ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ಮತದಾನದಂದು ಮೊದಲಿನ ಅರ್ಹ ಮತದಾರರಿಗೆ ಪಿ,ಬಿ,  ಹೈಸ್ಕೂಲನಲ್ಲಿ 26 ಬೂತಗಳನ್ನು ಮಾಡಿದ್ದು. ನ್ಯಾಯಾಲಯದ ಆದೇಶದಿಂದ ಬಂದ ಮತದಾರರಿಗೆ ಸರಕಾರಿಜಿ,ಜಿ,ಹೈಸ್ಕೂಲನಲ್ಲಿ ಮತದಾನ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು 15000 ಮತದಾರರ ಮತದಾನಕ್ಕೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು. 

ಮತದಾನ ದಿನದಂದು 120 ಪೋಲೀಸ್ ಸಿಬ್ಬಂದಿಗಳನ್ನು ಆಯೋಜಿಸಲಾಗಿದ್ದು, 1 ಡಿವೈಎಸ್‌ಪಿ, 1 ಸಿಪಿಐ, ನಾಲ್ವರು ಪಿಎಸ್‌ಐ ಸೇರಿದಂತೆ 110 ಪೋಲಿಸ್ ಪೇದೆಗಳನ್ನು ರಕ್ಷಣೆಗೆ ನಿಯೋಜನೆ ಮಾಡಲಾಗಿದೆ. ಸುಲಭ ಮತದಾನಕ್ಕೆ ಪ್ರತಿ ಮತಗಟ್ಟೆಯಲ್ಲಿ 4 ವಿಭಾಗ ಮಾಡಿದ್ದು. ಮತದಾನದಂದು ವೋಟರ ಸ್ಲಿಪ ಪಡೆಯಲು ಬಸವ ಭವನದ ಆವರಣದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿಲಾಗುತ್ತದೆ. ಅಂದೂ ಸಹ ಬ್ಯಾಂಕಿನ ಗುರುತಿನ ಚೀಟಿಯನ್ನೂ ಸಹ ನೀಡಲಾಗುವದು. ಮತದಾರರಲ್ಲಿ ಗುರುತ್ತಿನ ಚೀಟಿ ಇಲ್ಲದವರು ಬ್ಯಾಂಕನಲ್ಲಿ ಪಡೆಯಬಹುದು. ಮತ ಎಣಿಕೆಯು ಚುನಾವಣಾ ದಿನದಂದು ನಡೆಯದೇ ನ್ಯಾಯಾಲಯದ ಅದೇಶದಂತೆ ಮಾಡಲಾಗುತ್ತದೆ ಎಂದರು. 

ಸಹಾಯಕ ಚುನಾವಣಾಧಿಕಾರಿ ಸಿದಗಿರಿ ನ್ಯಾಮಗೌಡ ಮಾತನಾಡಿ, ಚುನಾವಣೆ ಡಿ, 23 ಶನಿವಾರ ಬೆಳಿಗ್ಗೆ 9 ರಿಂದ 4 ಗಂಟೆಯವರೆಗೆ ಪ್ರತಿಯೊಂದು ಬೂತಗೆ 300 ಮತದಾರರು ಇರುತ್ತಾರೆ. ಬಹಿರಂಗ ಪ್ರಚಾರ ಡಿ,21 ರಂದು 10 ರಾತ್ರ್ರಿ ಕ್ಕೆ  ಮುಗಿಯುತ್ತದೆ ಎಂದರು. 

ಪ್ರಧಾನ ವ್ಯವಸ್ಥಾಪಕ ಸಂಗಪ್ಪ ತುಪ್ಪದ, ವ್ಯವಸ್ಥಾಪಕ ಸಂತೋಷ ಹಲ್ಯಾಳ, ಸಹಕಾರ ಸಂಘದ ಅಧಿಕಾರಿ ಶ್ರೀನಿವಾಸ ಸಾರವಾಡ ಸಭೆಯಲ್ಲಿ ಉಪಸ್ಥಿತರಿದರು. 


ಸುದ್ದಿ ಓದಿ