ಜಮಖಂಡಿ

ವಿವಿಧತೆಯಲ್ಲಿ ಏಕತೆಯನ್ನು ಶಾಲೆಯಲ್ಲಿ ಕಾಣಬಹುದು: ಎ.ಕೆ.ಬಸಣ್ಣವರ

ವಿವಿಧತೆಯಲ್ಲಿ ಏಕತೆಯನ್ನು ಶಾಲೆಯಲ್ಲಿ ಕಾಣಬಹುದು: ಎ.ಕೆ.ಬಸಣ್ಣವರ

ಜಮಖಂಡಿ 06: ಜೀವನದಲ್ಲಿ ನಾವು ಮಾಡಿದ ಸೇವೆಗಳೆ ನಮ್ಮ ಉಸಿರು ನಿಂತ ಮೇಲು ನೆನಪಿರೊ ಹಾಗೆ ಮಾಡಲು ಸಾಧ್ಯ. ಅಂತಹ ಕೆಲಸವನ್ನು ರೋಟರಿ ಸಂಸ್ಥೆ ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನು ಶಾಲೆಯಲ್ಲಿ ಕಾಣಬಹುದು ಅಂತಹ ಸರಕಾರಿ ಶಾಲೆಗಳ ಉಳಿವಿಗಾಗಿ ತಮ್ಮ ಸೇವೆ ಅಪಾರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಹೇಳಿದರು.  

ನಗರದ ರುದ್ರಸ್ವಾಮಿಪೇಠ ಗಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸಂಸ್ಥೆಯಿಂದ ಪಿಠೊಪಕರಣಗಳ ವಿತರಣಾ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದ ಅವರು, ಅಳಿವಿನಂಚಿನಲ್ಲಿರುವ ಶಾಲೆ ದತ್ತು ತಗೆದುಕೊಂಡು ಸುಣ್ಣ ಬಣ್ಣ ಬಳಿಸಿ, ಮೂಲಭೂತ ಸೌಕರ್ಯ ಒದಗಿಸಿ, ಊಟದ ತಟ್ಟೆಗಳನ್ನು, ಅಡುಗೆ ಉಪಕರಣಗಳನ್ನು ನೀಡಿ ಅಪಾರ ಸಾಧನೆ ಮಾಡಿದ್ದಾರೆ. ಸರಕಾರಿ ಶಾಲೆಗಳ ಉಳಿವಿಗೆ ಹೋರಾಡುತ್ತಿರುವ ನಿಮ್ಮ ಪ್ರಯತ್ನ ಮುಂದುವರೆಯಲಿ ನಿಮ್ಮ ಹೆಸರು ಉಸಿರಾಗಲಿ ಎಂದರು. 

ಎಸ್‌ಡಿಎಂಸಿ ಅಧ್ಯಕ್ಷ ಎಸ್‌.ಎಂ.ನವಣಿ ಮಾತನಾಡಿ, ಶಾಲೆಯಲ್ಲಿ ಒಂದು ವರ್ಷದ ಹಿಂದೆ ಮೂಲಭೂತ ಸೌಕರ್ಯವಿಲ್ಲದೆ ಪಾಲಕರು ಮಕ್ಕಳನ್ನು ದಾಖಲು ಮಾಡದೆ ಶಾಲೆ ಮುಚ್ಚುವ ಸ್ಥಿತಿ ಎದುರಾಗಿತ್ತು. ಆದರೆ ಇಂದು ದಾಖಲಾತಿಗಳು ಆಗುತ್ತಿವೆ. ಶಾಲೆಯ ಅಭಿವೃದ್ದಿಗೆ ಶಿಕ್ಷಣ ಇಲಾಖೆಯಿಂದ ಇನ್ನಷ್ಟು ಕೆಲಸಗಳಾಗಲಿ ಎಂದರು. 

ಇದೇ ಸಂದರ್ಭದಲ್ಲಿ ರವೀಂದ್ರ ಗವಳಿ, ಬಸವರಾಜ ಆಲಗೂರ, ಗುರುರಾಜ ಪಾಟೀಲ, ಸಂತೋಷ ತಳಿಕೇರಿ, ಶ್ರೀಶೈಲ ತೇಲಿ, ರಾಜು ಕುವಳ್ಳಿ, ಎಸ್‌.ವೈ.ಬಿರಾದಾರ, ಡಾ. ಮೆಟಗುಡ, ಡಾ. ದೇವರೆಡ್ಡಿ, ವಿವೇಕ ಮಹಾಬಳಸೇಟ್ಟಿ, ಸುಭಾಶ ಕಾಶಿದ, ಗೋಪಾಲಕೃಷ್ಣ ಪ್ರಭು, ಮಾಹಾವೀರ ಕೋರಿ, ಪಿ,ಡಿ,ಗೌಡರ, ಪ್ರಶಾಂತ ಘಾಟಗೆ,ಚನ್ನಪ್ಪ ಬಿರಾದರ, ಜನವಾಡ, ಕಡ್ಲಿಮಠಿ, ಬಸವರಾಜ ಬಳಗಾರ, ಮುಖ್ಯ ಶಿಕ್ಷಕಿ ಎಸ್,ಎಸ್,ಬಬಲೇಶ್ವರ ಸೇರಿದಂತೆ ಸಂಸ್ಥೆಯ ಸದಸ್ಯರು ಮತ್ತು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ಕೆ,ಬಿ,ಕಾಲತ್ತಿಪಿ ಪ್ರಾಸ್ತಾವಿಕ ಮಾತನಾಡಿದರು.ಎ,ಎಸ್,ನವಣಿಸ್ವಾಗತಿಸಿದರು, ವಿ,ಎಸ್,ಹಿರೇಮಠ ನಿರೂಪಿಸಿದರು. ಎಸ್,ಎಸ್,ಅಂಬಲಜೇರಿ ವಂದಿಸಿದರು. 


ಸುದ್ದಿ ಓದಿ