ಜಮಖಂಡಿ

ಅಪರಿಚಿತ ವ್ಯಕ್ತಿ ಶವ ಪತ್ತೆ: ಕೊಲೆ ಶಂಕೆ

ಅಪರಿಚಿತ ವ್ಯಕ್ತಿ ಶವ ಪತ್ತೆ: ಕೊಲೆ ಶಂಕೆ

ಜಮಖಂಡಿ 7: ತಾಲೂಕಿನ ಜಂಬಗಿ ಬಿ.ಕೆ ಗ್ರಾಮದ ಕೃಷ್ಣಾ ನದಿಯ ಸೇತುವೆ ದಡದ ಬಳಿ ಗೋಣಿ ಚೀಲದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. 

ಕೃಷ್ಣಾ ನದಿ ನೀರಿನಲ್ಲಿ ಕಟ್ಟಿದ ಗೋಣಿ ಚೀಲದಲ್ಲಿ ಅಪರಿಚಿತ ಶವಕ್ಕೆ ಕಲ್ಲು ಕಟ್ಟಿ ನದಿಯಲ್ಲಿ ಯಾರೋ ಎಸೆದ್ದಿದ್ದಾರೆ. ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿ ಎಂದು ತಿಳಿದು ಬಂದಿದ್ದು. ಇದೊಂದು ಕೊಲೆಯಂದು ಶಂಕಿಸಲಾಗಿದೆ.  

ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಎಸ್‌ಪಿ ಅಮರನಾಥ ರಡ್ಡಿ, ಡಿ.ವಾಯ್‌.ಎಸ್‌.ಪಿ ಶಾಂತವೀರ ಈ , ಸಿ.ಪಿ.ಐ ಮಲ್ಲಪ್ಪ ಮಡ್ಡಿ, ಸಾವಳಗಿ ಪಿ.ಎಸ್‌.ಐ ಗಂಗಾಧರ ಪೂಜಾರಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ. ಅಪರಾಧ ತಂಡ. ಪರೀಶೀಲನಾ ಅಧಿಕಾರಿಗಳ ತಂಡ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. 

ಸಾವಳಗಿ ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟವರು ಯಾರಾದರೂ ಇದ್ದರೆ ಪೋಲಿಸ್ ಠಾಣೆಗೆ ಭೇಟಿ ನೀಡಲು ಪೋಲಿಸ್ ಇಲಾಖೆ ಸೂಚಿಸಲಾಗಿದೆ. 


ಸುದ್ದಿ ಓದಿ