ಜಮಖಂಡಿ

ಅನಧಿಕೃತವಾಗಿ ಹೆರಿಗೆ ಆಸ್ಪತ್ರೆ : ನಕಲಿ ವೈದ್ಯೆಯ ಕೊಠಡಿ ಸೀಜ್

ಅನಧಿಕೃತವಾಗಿ ಹೆರಿಗೆ ಆಸ್ಪತ್ರೆ : ನಕಲಿ ವೈದ್ಯೆಯ ಕೊಠಡಿ ಸೀಜ್

ಜಮಖಂಡಿ 20: ನಗರದಲ್ಲಿ ಅನಧಿಕೃತವಾಗಿ ಹೆರಿಗೆ ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯೆಯ ಕೊಠಡಿಯನ್ನು ಉಪವಿಭಾಧಿಕಾರಿ ಸಂತೋಷ ಕಾಮಗೌಡ ಸೀಜ್ ಮಾಡಿದರು. 

ಇಲ್ಲಿನ ಕುಂಬಾರ ಗಲ್ಲಿಯಲ್ಲಿ ಸುರೇಖಾ ಚರಕಿ (62) ಮಹಿಳೆ ಎಸ್‌ಎಸ್‌ಎಲ್‌ಸಿ ಓದಿರುವ ಮಹಿಳೆಯ ಮನೆಯ ಕೊಠಡಿಯಲ್ಲಿ ಗರ್ಭಿನಿ ಮಹಿಳೆಯರ ಆರೋಗ್ಯ ತಪಾಸಣೆ ಮಾಡುತಿದ್ದಾರೆ ಎಂಬ ಖಚಿತ ಮಾಹಿತಿಯಿಂದ ತಾಲೂಕಾ ಆರೋಗ್ಯಾಧಿಕಾರಿ ಡಾ.ಜಿ.ಎಸ್‌.ಗಲಗಲಿ, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ನಾಗರಾಜ ಖಿಲಾರಿ ದಾಳಿ ನಡೆಸಿದರು. 

ದಾಳಿ ಸಂದರ್ಭದಲ್ಲಿ ಗರ್ಭಪಾತವಾಗುವ ಮಾತ್ರೆ, ಟಾನಿಕ್, ವಿಟಾಮಿನ್, ನಿದ್ದಿ ಮಾತ್ರೆ, ಕೈ ಗ್ಲೋಜ್, ಸ್ಟೆತೊಷ್ಕೋಪ, ಸಲಾಯಿನ್, ಇಂಜಿಕ್ಷನ್ ಸೂಜಿ, ಓಷಧಿ ಬರೆಯುವ ಖಾಲಿ ಚೀಟಿಗಳು, ಸೇರಿದಂತೆ ಇಲೆಕ್ಟ್ರಾನಿಕ್ಸ್‌ ಯಂತ್ರ ಹಾಗೂ ತಪಾಸಣೆ ನಡೆಸುತಿದ್ದ ಕೊಠಡಿಯನ್ನು ಸೀಜ್ ಮಾಡಿದರು. 

ಎಸಿ ಸಂತೋಷ ಕಾಮಗೌಡ ಮಾತನಾಡಿ, ನಕಲಿ ವೈದ್ಯೆಯ ಮಹಿಳೆಯ ಕೊಠಡಿಯಲ್ಲಿ ಗರ್ಭಪಾತಕ್ಕೆ ಬಳಸುವ ಮಾತ್ರೆಗಳು, ಅನಧಿಕೃತವಾಗಿ ಮಾತ್ರೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ, ನಗರದ ಕೃಷ್ಣಾ ಮೆಡಿಕಲ್ ಮತ್ತು ವಿಜಯಪುರದಿಂದ ಓಷಧಿಗಳನ್ನು ತರಿಸುತ್ತಿರುವದಾಗಿ ಒಪ್ಪಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು. 

ಮಹಿಳೆಯರ ಸ್ಕ್ಯಾನಿಂಗ್‌ಗಾಗಿ ಹೊರಗಡೆ ಕಳುಹಿಸುತಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಎಷ್ಟು ಜನರಿಗೆ ಚಿಕಿತ್ಸೆ ನೀಡಿದ್ದಾರೆ ಎಂಬುದು ದಾಖಲಾತಿಗಳಿಲ್ಲ, ಇವರ ಅನಧಿಕೃತ ಕಾರ್ಯಕ್ಕೆ ಸಹಕಾರ ನೀಡಿದವರನ್ನು ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು. 

ತಾಲೂಕಾ ಆರೋಗ್ಯಾಧಿಕಾರಿ ಡಾ.ಜಿ.ಎಸ್‌.ಗಲಗಲಿ ಮಾತನಾಡಿ, ಕೆಪಿಎಮ್‌ಇ ಕಾಯ್ದೆಯಡಿ ಪ್ರಾಧಿಕಾರಕ್ಕೆ ದೂರು ದಾಖಲಿಸಲಾಗುವುದು ಎಂದರು. 

ಸಿಪಿಐ ಮಲ್ಲಪ್ಪ ಮಡ್ಡಿ, ಎಎಸ್‌ಐ ಎಚ್‌.ಎಸ್‌.ಮೆಂಡೆಗಾರ, ನಾಗರಾಜ ಬಿಸಲದಿನ್ನಿ, ಆರೋಗ್ಯ ನೀರೀಕ್ಷಣಾಧಿಕಾರಿ ಸಂತೋಷ ನಾಯಕ, ಮಲ್ಲು ಅಸ್ಕಿ ಇತರರು ಇದ್ದರು. 


ಸುದ್ದಿ ಓದಿ